ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ
ಕೂಡ್ಲಿಗಿ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಸಿಡಬ್ಲ್ಯೂಎಫ್ಐ ಗ್ರಾಮ ಘಟಕವನ್ನು ಕೂಡ್ಲಿಗಿ ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಇವರ ಸಮ್ಮುಖದಲ್ಲಿ ಗ್ರಾಮ ಘಟಕದ ನಾಮಫಲಕ ಉದ್ಘಾಟಿಸಿದರು. ತದನಂತರ ಸಂಘಟನೆಯ ಕುರಿತಾಗಿ ಸಂಘದ ನಿಯಮಗಳನ್ನು ಹಾಗೂ ಕಟ್ಟಡ ಕಾರ್ಮಿಕರ ಸರ್ಕಾರದ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೆ ತಿಳಿಸಿ ಹೇಳಿದರು. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ. ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು. ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಎನ್.ಟಿ ಸುರೇಶ್ ನೆರವೇರಿಸಿದರು ಹಾಗೂ ಕೆ.ಟಿ ಓಬಳೇಶ್ ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕ್ ಅಧ್ಯಕ್ಷರಾದ ಎಂ.ಬಿ ಅಯ್ಯನಳ್ಳಿ ಕರಿಯಪ್ಪ, ಮರಳು ಸಿದ್ದಪ್ಪಾಚಾರಿ, ಹುಲೆಪ್ಪ, ನಬಿಸಾಬು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಪೇನ್ನಪ್ಪ, ಶಿವಣ್ಣ, ಶೇಖರಪ್ಪ, ಜಿ ಬಸಪ್ಪ, ಹಾಲಪ್ಪರು ಶಿವಪ್ಪ. ಊರಿನ ಮುಖಂಡರಾದ ಎ ಬಸಪ್ಪ, ಹನುಮಪ್ಪ, ಹೊಸಹಳ್ಳಿ ನಾಗೇಶ್, ಊರಿನ ಯುವಕರಾದ ಎಕ್ಕೆಗುಂದಿ ದುರ್ಗೇಶ್, ಸಣ್ಣ ದುರ್ಗಪ್ಪ, ಗುರುಮೂರ್ತಿ, ನಾಗರಾಜ್, ರಮೇಶ, ವಿ.ಟಿ ಮಾರಪ್ಪ, ಶಿವರಾಮ್, ವಿರೂಪಾಕ್ಷಪ್ಪ ಸೇರಿದಂತೆ ಕಟ್ಟಡ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
