ಇಲ್ಲಿಯವರೆಗೂ ನೂರಾರು ಜನ ಕಾಡಾನೆಗಳಿಗೆ ಬಲಿ ಯಾಗಿದ್ದಾರೆ ಕೋಟ್ಯಂತರ ಬೆಳೆ ನಷ್ಟವಾಗಿದೆ ಆದರೆ ದಲಿತ ಶಾಸಕಕುಮಾರ ಸ್ವಾಮಿಯವರ ಮೇಲೆ ಹಲ್ಲೇ ಮಾಡಿರುವುದು ಏಕೆ?
ಹರಪನಹಳ್ಳಿ :-ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ತಕ್ಷಣವೇ ಸಾಂತ್ವಾನ ಹೇಳಲು ಹೋದಂತಹ ಶಾಸಕ ಎಂಪಿ ಕುಮಾರಸ್ವಾಮಿ.
ಅಲ್ಲ ಚಿಕ್ಕಮಗಳೂರು ಜಿಲ್ಲೆ ಮೀಸಲಾತಿ ಕ್ಷೇತ್ರದ, ಮೂಡಿಗೆರೆ ತಾಲೂಕಿನ ಶಾಸಕ ಎಂ. ಪಿ. ಕುಮಾರಸ್ವಾಮಿ ಅವರನ್ನು ಸ್ಥಳೀಯರು ಘೇರಾವ್ ಹಾಕಿ, ಅಟ್ಟಾಡಿಸಿ ಹಲ್ಲೇ ಮಾಡಿದರಲ್ಲದೆ, ಬಟ್ಟೆಯನ್ನು ಹರಿದು ಹಾಕಿರುವ ಘಟನೆ ಮತ್ತು ಶಾಸಕರನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ಘಟನೆಯು ಪ್ರಜಾಪ್ರಭುತ್ವದ ಅತಂತ್ರವನ್ನು, ಒಂದು ಸರ್ಕಾರದ ಉದ್ದೇಶವನ್ನು, ಮತ್ತು ದಲಿತ ಎಂ.ಎಲ್.ಎ ಗಳ ಪರಿಸ್ಥಿತಿಯನ್ನು ಗುರುತು ಮಾಡಿಕೊಡುವಂತಹ ಕನ್ನಡಿಯಾಗಿದೆ.
ಹಾಸನ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿಯಿಂದ 77 ಜನ ಮೃತರಾಗಿದ್ದಾರೆ, 220 ಮಂದಿಗೆ ತೀವ್ರ ಗಾಯಗಳಾಗಿವೆ, 45 ಕೋಟಿಗಿಂತಲೂ ಹೆಚ್ಚಿನ ಬೆಳೆ ನಾಶವಾಗಿದೆ.
ಮಡಿಕೇರಿಯಲ್ಲಿ ಕಾಡಾನೆಗಳಿಂದ 57 ಸಾವು ಹೀಗೆ ಇಂತಹ ಪ್ರಕರಣಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆದಿದೆ. ಇಂತಹ ಅನಾಹುತಗಳು ಎಲ್ಲವೂ ಸಹ ಒಂದಲ್ಲ ಒಂದು ಎಂ.ಎಲ್.ಎ.ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನಡೆದಿದ್ದರೂ ಯಾವ ಎಂ.ಎಲ್.ಎ.ಯನ್ನು ಹೊಡೆಯದೆ ಘೇರಾವ್ ಹಾಕದ ಜನ ಇದೇ ಮೊದಲ ಬಾರಿಗೆ ಮೀಸಲಾತಿ ಕ್ಷೇತ್ರದ ಶಾಸಕ ಕುಮಾರಸ್ವಾಮಿಯವರನ್ನೇ ಏಕೆ ಒಡೆದಿದ್ದಾರೆ, ಬಟ್ಟೆಹರಿದು ಘೇರಾವ್ ಹಾಕಿದ್ದಾರೆ. ಇದೇ ಶಾಸಕರಾದ ಕುಮಾರಸ್ವಾಮಿ ಅವರು ಕರ್ನಾಟಕ ವಿಧಾನ ಮಂಡಲ ಎಸ್ಸಿ/ ಎಸ್ಟಿ ಕಲ್ಯಾಣ ಸಮಿತಿಯ ಅಧ್ಯಕ್ಷರೂ ಹೌದು.
ಈ ಘಟನೆಯನ್ನು ಪಕ್ಷಾತೀತವಾಗಿ ಎಲ್ಲಾ ದಲಿತ ಎಂ.ಎಲ್.ಎ.ಗಳು ಖಂಡಿಸಬೇಕಾಗಿತ್ತು ಆದರೆ ಯಾವ ಶಾಸಕರು ಇದರ ಬಗ್ಗೆ ಮೌನವಾಗಿರುವುದು ಯಾಕೆ?
ನೀವುಗಳು ಎಚ್ಚೆತ್ತುಕೊಳ್ಳದಿದ್ದರೆ ನಿಮುಗೊ ಕೊಡ ಮುಂದಿನ ದಿನಮಾನಗಳಲ್ಲಿ ಬೇರೆ ಬೇರೆ ರೂಪದಲ್ಲಿ ನಿಮಗೂ ಸಹ ಇದೇ ಪೂಜೆ, ನೈವೇದ್ಯ, ಆರತಿ ನಡೆಯಬಹುದು ಮತ್ತು ನಡೆದೆ ನಡೆಯುತ್ತದೆ ನೆನಪಿರಲಿ . ಇಲ್ಲಿ ದುರಂತವೆಂದರೆ ಆಡಳಿತ ಪಕ್ಷದ ಶಾಸಕರ ಮೇಲೆ ಈ ರೀತಿ ನಡೆದಿದೆ ಅಲ್ಲಿರುವ ಪೊಲೀಸರು ಅವರಿಗೆ ರಕ್ಷಣೆ ಕೊಡಲಾಗಲಿಲ್ಲ.
ಎಂದರೆ ಇದಕ್ಕಿಂತ ನಾಚಿಕೆ ಬೇರೆನಿದೆ ಈ ಸರ್ಕಾರಕ್ಕೆ ಪ್ರಸ್ತುತ ತನ್ನ ಮುಂದಿರುವ ಕಾರ್ಯವೆಂದರೆ ಸಂಘ ಸೇವೆ, ಆರತಿ ಸೇವೆ, ಪೂಜಾ ಕಾರ್ಯವೇ ಆಗಿದ್ದು.
ಪೊಲೀಸ್ ಇಲಾಖೆ ಈ ಕಾರ್ಯಗಳಿಗೆ ಬೆಂಗಾವಲಾಗಿ ನಿಂತ ಭಾಗವಾಗಿದೆ.
ಇವೆಲ್ಲ ಮೀಸಲಾತಿ ಕ್ಷೇತ್ರದ ದಲಿತ ಎಂ.ಎಲ್.ಎ ಗಳಿಗೆ ಅರ್ಥವಾಗದ ಭಾಗವಾಗಿದೆ. ಅರ್ಥವಾದರೂ ಇದು ಅವರ ಮೀಸಲು ಕ್ಷೇತ್ರದ ಭಾಗವಲ್ಲವಲ್ಲ.ದಲಿತ ಶಾಸಕರು ಗುಲಾಮಗಿರಿಯ ಮನಸ್ಥಿತಿ ಮತ್ತು ವರ್ತನೆಗಳಿಂದ ಹೊರಬರಬೇಕು. ಹಾಗೂ ದಲಿತ ಶಾಸಕರು ಯಾವುದೇ ಪಕ್ಷದಲ್ಲಿದ್ದರೂ ಸಹ ಸಮುದಾಯದ ರಕ್ಷಣೆಗೆ ಒಂದಾಗಬೇಕು.
ಸದಾ ವ್ಯವಹಾರ, ಹಣ, ಅಧಿಕಾರ, ಟಿಕೆಟ್ ಟಿಕೆಟ್ಗಾಗಿ ಬದುಕುವುದಕ್ಕಿಂತ ಸಮುದಾಯ ಮತ್ತು ಮೀಸಲಾತಿ ಪರಿಕಲ್ಪನೆಯ ಅರ್ಥಕ್ಕಾಗಿ ಕ್ಷಣವತ್ತಾದರೂ ಬದುಕಬೇಕು. ಅದಕ್ಕಾಗಿಯೇ “ಬಾಬಾ ಸಾಹೇಬ್ ಅಂಬೇಡ್ಕರ್ ಅವರು *”ಎಷ್ಟು ದಿನ ಬದುಕಿರುತ್ತೇವೆ, ಎನ್ನುವುದಕ್ಕಿಂತ ಹೇಗೆ ಬದುಕುತ್ತೇವೆ”* ಎಂಬುದು ಮುಖ್ಯ ಎಂದು ಹೇಳಿದ್ದಾರೆ.
ದಲಿತ ಶಾಸಕರು ಮೀಸಲಾತಿ, ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ, ಪಿಟಿಸಿಎಲ್ ಕಾಯ್ದೆ, ದಲಿತರ ಮೇಲೆ ನಿರಂತರ ದೌರ್ಜನ್ಯ, ಜಾತಿ ಶೋಷಣೆಗಳ ವಿಷಯಗಳಲ್ಲಿ ಒಂದಾಗಲಿಲ್ಲ ಅಂದರೆ ಇದಕ್ಕಿಂತ ದುರಂತ ಬೇರೊಂದು ಇಲ್ಲಾ . ಈಗ ನಿಮ್ಮ ದಲಿತ ಎಂ.ಎಲ್.ಎ ಬಟ್ಟೆ ಹರಿದಿದ್ದಾರೆ, ಓಡಾಡಿಸಿ ಹಲ್ಲೇ ಮಾಡಿದ್ದಾರೆ ನಾಳೆ ನಿಮ್ಮ ಬಟ್ಟೆಯನ್ನೂ ಹರಿಯಬಹುದು, ನಿಮ್ಮನ್ನು ಓಡಾಡಿಸಬಹುದು ಈಗಲಾದರೂ ಒಂದಾಗಿ ಮುಂದೆ ನೀವು ಪಾರಾಗಿ ಮತ್ತು ಸಮಸ್ಯೆಗಳಲ್ಲಿಯೇ ಸಾವುಗಳನ್ನು ಕಾಣುತ್ತಿರುವ ನಮ್ಮ ಸಮುದಾಯದವರನ್ನು ಪಾರು ಮಾಡಿ.
ಜೈ ಭೀಮ್.

ವರದಿ.ಪ್ರತಾಪ್ ಛಲವಾದಿ,ದಲಿತ ವಿದ್ಯರ್ಥಿ ಪರಿಷತ್ ತಾಲ್ಲೂಕು ಸಂಚಾಲಕರು ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
