ಭುವನೇಶ್ವರಿ ಭಾವಚಿತ್ರ ಮೆರವಣಿಗೆ,ಐದು ಸಾವಿರ ವಿಧ್ಯಾರ್ಥಿಗಳು ಭಾಗಿ,
ಸಿಂಧನೂರು :ಅ.31.ಕನ್ನಡ ನಾಡು ನುಡಿಗೆ ನಮ್ಮ ನಡಿಗೆ ಮತ್ತು ಮನೆ ಗೊಂದು ಕನ್ನಡ ಬಾವುಟ ಎಂಬ ಕನ್ನಡ ನಾಡು, ನುಡಿ, ನೆಲ, ಜಲದ ಕುರಿತು ಯುವ ಜನರಲ್ಲಿ ಸ್ವಾಭಿಮಾನದ ಜಾಗೃತಿಯ ಸಂದೇಶದೊಂದಿಗೆ,ವಿವಿಧ ಕಲಾ ತಂಡದೊಂದಿಗೆ “ತಾಯಿ ಭುವನೇಶ್ವರಿ ದೇವಿಯ” ಭಾವಚಿತ್ರ ಮೆರವಣಿಗೆ ಹಾಗೂ ಜಾಥಾ ಕಾರ್ಯಕ್ರಮವು ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟ ರಾವ್ ನಾಡಗೌಡ ಅವರ ನೇತೃತ್ವದಲ್ಲಿ ಯಶಸ್ವಿ ಯಾಗಿ ಜರುಗಿತು.
ನನ್ನ ನಾಡು ನನ್ನ ಹಾಡು ಸಮೂಹ ಗೀತ ಗಾಯನ ಕನ್ನಡ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ,ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳೊಂದಿಗೆ ಪ್ರಾರಂಭ ಮಾಡಲಾಯಿತು.
ಐದು ಸಾವಿರ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ತಹಸೀಲ್ದಾರ ಕಚೇರಿಯಿಂದ ಆರಂಭ ವಾಗಿ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಕನ್ನಡ ಪರ ಘೋಷಣೆಗಳನ್ನು ಕೂಗಿದರು.ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡ ಧ್ವಜಾಗಳು ರಾರಾಜಿಸಿದವು. ವಿವಿಧ ಸಂಘ ಸಂಸ್ಥೆಗಳು ಅಲ್ಲಲ್ಲಿ ವಿಧ್ಯಾರ್ಥಿಗಳಿಗೆ ತಂಪು ಪಾನೀಯ ಹಣ್ಣುಗಳನ್ನು ವಿತರಿಸಿದರು.
ಪೋಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣೆಗೆ ಜಾಥಾದಿಂದ ಕೆಲ ಸಮಯ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡು ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು

ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡ ಬಸವರಾಜ, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ಸತ್ಯ ನಾರಾಯಣ ದಾಸರಿ, ತಹಶೀಲ್ದಾರ ಅರುಣ್ ಹೆಚ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು,ತಾ. ಪ. ಇಓ.ಲಕ್ಷ್ಮಿದೇವಿ, ಬಿಇಒ ಶರಣಪ್ಪ ವಟಗಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ಎಡಬ್ಯೂಇ ಅನ್ನಪೂರ್ಣ,ಬಿಸಿಎಂ ಇಲಾಖೆಯ ಅದಿಕಾರಿ ಲಿಂಗಪ್ಪ, ಸಿಡಿಪಿಓಗಳಾದ ಅಶೋಕ, ಸುಧೀಪಕುಮಾರ, ಅಲ್ಲಮಪ್ರಭು ಪೂಜಾರಿ, ನದಿಮುಲ್ಲಾ,ಆರ್.ಸಿ ಪಾಟೀಲ್,ಕನ್ನಡ ಪರ ಸಂಘಟನೆಗಳ ಮುಖಂಡರಾದ ಗಂಗಣ್ಣ ಡಿಶ್, ಮೌನೇಶ ದೊರೆ, ವೀರೇಶ ಭಾವಿಮನಿ, ಬಸವರಾಜ ಗಸ್ತಿ, ಸುರೇಶ ಕಟ್ಟಿಮನಿ,ತಾಲೂಕು ಮಟ್ಟದ ಅಧಿಕಾರಿಗಳು,ಶಾಲಾ ವಿಧ್ಯಾರ್ಥಿಗಳು,ಸಾರ್ವಜನಿಕರು ಭಾಗವಹಿಸಿದ್ದರು.ಭುವನೇಶ್ವರಿ ಭಾವಚಿತ್ರ ಮೆರವಣಿಗೆ,ಐದು ಸಾವಿರ ವಿಧ್ಯಾರ್ಥಿಗಳು ಭಾಗಿ, ಸಿಂದಧನೂರು :ಕನ್ನಡ ನಾಡು ನುಡಿಗೆ ನಮ್ಮ ನಡಿಗೆ ಮತ್ತು ಮನೆ ಗೊಂದು ಕನ್ನಡ ಬಾವುಟ ಎಂಬ ಕನ್ನಡ ನಾಡು, ನುಡಿ, ನೆಲ, ಜಲದ ಕುರಿತು ಯುವ ಜನರಲ್ಲಿ ಸ್ವಾಭಿಮಾನದ ಜಾಗೃತಿಯ ಸಂದೇಶದೊಂದಿಗೆ,ವಿವಿಧ ಕಲಾ ತಂಡದೊಂದಿಗೆ “ತಾಯಿ ಭುವನೇಶ್ವರಿ ದೇವಿಯ” ಭಾವಚಿತ್ರ ಮೆರವಣಿಗೆ ಹಾಗೂ ಜಾಥಾ ಕಾರ್ಯಕ್ರಮವು ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟ ರಾವ್ ನಾಡಗೌಡ ಅವರ ನೇತೃತ್ವದಲ್ಲಿ ಯಶಸ್ವಿ ಯಾಗಿ ಜರುಗಿತು.
ನನ್ನ ನಾಡು ನನ್ನ ಹಾಡು ಸಮೂಹ ಗೀತ ಗಾಯನ ಕನ್ನಡ ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ,ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳೊಂದಿಗೆ ಪ್ರಾರಂಭ ಮಾಡಲಾಯಿತು.
ಐದು ಸಾವಿರ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ತಹಸೀಲ್ದಾರ ಕಚೇರಿಯಿಂದ ಆರಂಭ ವಾಗಿ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಕನ್ನಡ ಪರ ಘೋಷಣೆಗಳನ್ನು ಕೂಗಿದರು.ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡ ಧ್ವಜಾಗಳು ರಾರಾಜಿಸಿದವು. ವಿವಿಧ ಸಂಘ ಸಂಸ್ಥೆಗಳು ಅಲ್ಲಲ್ಲಿ ವಿಧ್ಯಾರ್ಥಿಗಳಿಗೆ ತಂಪು ಪಾನೀಯ ಹಣ್ಣುಗಳನ್ನು ವಿತರಿಸಿದರು.
ಪೋಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣೆಗೆ ಜಾಥಾದಿಂದ ಕೆಲ ಸಮಯ ರಸ್ತೆ ಸಂಚಾರ ಅಸ್ಥವ್ಯಸ್ಥಗೊಂಡು ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡ ಬಸವರಾಜ, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ಸತ್ಯ ನಾರಾಯಣ ದಾಸರಿ, ತಹಶೀಲ್ದಾರ ಅರುಣ್ ಹೆಚ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು,ತಾ. ಪ. ಇಓ.ಲಕ್ಷ್ಮಿದೇವಿ, ಬಿಇಒ ಶರಣಪ್ಪ ವಟಗಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ಎಡಬ್ಯೂಇ ಅನ್ನಪೂರ್ಣ,ಬಿಸಿಎಂ ಇಲಾಖೆಯ ಅದಿಕಾರಿ ಲಿಂಗಪ್ಪ, ಸಿಡಿಪಿಓಗಳಾದ ಅಶೋಕ, ಸುಧೀಪಕುಮಾರ, ಅಲ್ಲಮಪ್ರಭು ಪೂಜಾರಿ, ನದಿಮುಲ್ಲಾ,ಆರ್.ಸಿ ಪಾಟೀಲ್,ಕನ್ನಡ ಪರ ಸಂಘಟನೆಗಳ ಮುಖಂಡರಾದ ಗಂಗಣ್ಣ ಡಿಶ್, ಮೌನೇಶ ದೊರೆ, ವೀರೇಶ ಭಾವಿಮನಿ, ಬಸವರಾಜ ಗಸ್ತಿ, ಸುರೇಶ ಕಟ್ಟಿಮನಿ,ತಾಲೂಕು ಮಟ್ಟದ ಅಧಿಕಾರಿಗಳು,ಶಾಲಾ ವಿಧ್ಯಾರ್ಥಿಗಳು,ಸಾರ್ವಜನಿಕರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030