ಕಾನಹೊಸಹಳ್ಳಿಯಲ್ಲಿ ಶಾಂತಿ ಹೋಮ ಹಾಗೂ ದುರ್ಗಾ ಹೋಮ ಪೂಜೆ…!!!

ಕಾನಹೊಸಹಳ್ಳಿಯಲ್ಲಿ ಶಾಂತಿ ಹೋಮ ಹಾಗೂ ದುರ್ಗಾ ಹೋಮ ಪೂಜೆ
ಕಾನಹೊಸಹಳ್ಳಿ:– ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಶಕ್ತಿ ಮಾರಿಕಾಂಬ ದೇವಿಯ ದೇವಸ್ಥಾನದಲ್ಲಿ ಗ್ರಾಮದ ಶಾಂತಿಗಾಗಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಕಾನ ಹೊಸಹಳ್ಳಿ ಗ್ರಾಮದ ಭಕ್ತರ ಸಮ್ಮುಖದಲ್ಲಿ ಶಾಂತಿ ಹೋಮ ಹಾಗೂ ದುರ್ಗಾ ಹೋಮ ಪೂಜೆ ನೆರವೇರಿದವು.


ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುಗಳಾದ ಶ್ರೀ ಸಿದ್ದಲಿಂಗ ರಾಜಾ ದೇಶಿ ಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ ಪ್ರತಿಯೊಬ್ಬರೂ ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಬೇಕು ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ದೊಡ್ಡದಾಗಿದ್ದು ಇಂತಹ ಮಾನವ ಜನ್ಮ ಪಡೆದ ಎಲ್ಲರೂ ಧರ್ಮ ಸಮಾನತೆಗೆ ಆದ್ಯತೆ ನೀಡಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕಾಗಿದೆ ಎಂದರು.
“ಗ್ರಾಮದಲ್ಲಿ 48 ದಿನ ಮಾಂಸ ಸೇವನೆ ಮತ್ತುಮಾರಾಟ ನಿಷೇಧ”
ಕಾನ ಹೊಸಹಳ್ಳಿಯಲ್ಲ ಗ್ರಾಮದ ಶಾಂತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹೋಮ ಪೂಜೆ ನಡೆಯುವ ಹಿನ್ನೆಲೆಯಲ್ಲಿ ಕಾನ ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ 28 10.2022 ರಿಂದ 48 ದಿನಗಳ ವರೆಗೆ ಗ್ರಾಮದಲ್ಲಿ ಮಾಂಸ ಸೇವನೆ, ಮಾಂಸ ಮತ್ತು ಚಿಕನ್ ಮಾರಾಟ ಮಾಡಬಾರದು ಎಂದು ಊರಿನ ದೈವಸ್ಥರು ತಿಳಿಸಿದ್ದಾರೆ. ಧಾರ್ಮಿಕ ನಂಬಿಕೆಯಿಂದ ಗ್ರಾಮಸ್ಥರೆಲ್ಲರೂ ಸ್ವಯಂ ಪ್ರೇರಿತರಾಗಿ ಕಟ್ಟುನಿಟ್ಟಾಗಿ ಮಾಂಸ ಮಾರಾಟ ಚಿಕನ್ ಮಾರಾಟ ಮತ್ತು ಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend