ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಾಸ್ವಿಹಳ್ಳಿ ಮಾನ್ಯ ಶ್ರೀ ಕೆ ಚನ್ನಬಸವನಗೌಡರ ನಿಧನ…!!!

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಾಸ್ವಿಹಳ್ಳಿ ಮಾನ್ಯ ಶ್ರೀ ಕೆ ಚನ್ನಬಸವನಗೌಡರ ನಿಧನ

ಹರಪನಹಳ್ಳಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು,ಚಿಗಟೇರಿ ಬ್ಲಾಕ್ ಕಾಂಗ್ರೆಸ್(ಐ), ಮಾಜಿ ಅಧ್ಯಕ್ಷರು, ನಾರದಮುನಿ ಟ್ರಸ್ಟ್ ನ ಮಾಜಿ ಉಪಾಧ್ಯಕ್ಷರು,ಮಾಜಿ ಜಿಲ್ಲಾ ಪರಿಷತ್ ಸದಸ್ಯರು, ಸಾಧು ಸದ್ಧರ್ಮ ಸಮಾಜದ ಮಾಜಿ ತಾಲೂಕು ಅಧ್ಯಕ್ಷರು, ಹಾಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಸಾಸ್ವಿಹಳ್ಳಿಯ ಅಧ್ಯಕ್ಷರಾಗಿರುವ ಜನಮಾನಸದಲ್ಲಿ ಕಾಂಗ್ರೆಸ್ ಗೌಡರೆಂದೇ ಪ್ರಖ್ಯಾತಿಯನ್ನ ಹೊಂದಿದ್ದತಹ ಮಾನ್ಯ ಶ್ರೀ ಕೆ ಚನ್ನಬಸವನಗೌಡರು(88) ವಯೋ ಸಹಜ ಕಾರಣದಿಂದ ಇಂದು 25.10.2022ನೆ ಮಂಗಳವಾರ ಬೆಳಿಗ್ಗೆ 11.05 ಕ್ಕೆ ನಿಧನರಾಗಿರುತ್ತಾರೆ.

ಮೃತರು ಇಬ್ಬರು ಪುತ್ರರು,ಇಬ್ಬರು ಪುತ್ರಿಯರೂ ಸೇರಿದಂತೆ, ಅಪಾರ ಬಂಧು-ಬಳಗ ಅಭಿಮಾನಿಗಳನ್ನು ಅಗಲಿರುತ್ತಾರೆ.

ಮೃತರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 11.00 ಗಂಟೆಗೆ ಸ್ವಗ್ರಾಮ ಸಾಸ್ವಿಹಳ್ಳಿ ಗ್ರಾಮದಲ್ಲಿ ಅವರ ತೋಟದಲ್ಲಿ ನೆರವೇರಲಿದೆ. ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿರುತ್ತದೆ.

ಮಾನ್ಯ ಶ್ರೀ ಕೆ.ಚನ್ನಬಸವನಗೌಡ ರವರ ನಿಧನಕ್ಕೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಎಂಪಿ ಲತಾ ಮಲ್ಲಿಕಾರ್ಜುನ್ ಸಂತಾಪ ವ್ಯಕ್ತಪಡಿಸಿದ್ದು,

ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯಪೂರ್ವದಲ್ಲಿ ಜನಿಸಿದ್ದಂತಹ ಹಿರಿಯ ನೇತಾರನ ನಿಧನದಿಂದ ತಾಲೂಕು ಕಾಂಗ್ರೆಸ್ ಪಕ್ಷಕ್ಕೆ ಅತೀವ ನಷ್ಟವಾಗಿದ್ದು ನಮಗೂ ನಮ್ಮ ಕುಟುಂಬದ ಒಬ್ಬ ಹಿರಿಯ ಸದಸ್ಯರನ್ನು ಕಳೆದು ಕೊಂಡಷ್ಟು ದುಃಖವಾಗಿದೆ, ನಮ್ಮೊಂದಿಗೆ ಯಾವತ್ತೂ ಉತ್ತಮ ಬಾಂಧವ್ಯ ಹೊಂದಿದ್ದ ಗೌರವಾನ್ವಿತರು, ನಾನು ಆಗಿಂದಾಗ್ಗೆ ಅವರ ಮನೆಗೆ ಭೇಟಿಕೊಟ್ಟು ಅವರ ಆರೋಗ್ಯ ವಿಚಾರಿಸುತ್ತಿದ್ದೆ.

ಅವರ ದುಃಖವನ್ನು ಸಹಿಸುವ ಶಕ್ತಿಯನ್ನು ಬಸವಾದಿ ಶರಣರು ನಮ್ಮೆಲ್ಲರಿಗೂ ಒದಗಿಸಲಿ ಎಂದು ಆಶಿಸುತ್ತೇನೆ. ಎಂದು ತಿಳಿಸಿರುತ್ತಾರೆ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend