36 ವರ್ಷಗಳ ನಂತರ ಕೋಡಿಬಿದ್ದ ತಾಳ್ಯಕೆರೆ ವೀಕ್ಷಣೆ ಮಾಡಿದ ಶಾಸಕ ಚಂದ್ರಪ್ಪ…!!!!

36 ವರ್ಷಗಳ ನಂತರ ಕೋಡಿಬಿದ್ದ ತಾಳ್ಯಕೆರೆ ವೀಕ್ಷಣೆ ಮಾಡಿದ ಶಾಸಕ ಚಂದ್ರಪ್ಪ…

ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ಕೆರೆ 36 ವರ್ಷಗಳ ಬಳಿಕ ಭಾರಿ ಮಳೆಯಿಂದ ಇದೇ‌ಮೊದಲ ಭಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಶಾಸಕ ಎಂ ಚಂದ್ರಪ್ಪನವರು ಕೆರೆಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು ಬಳಿಕ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು 2 ಕೋಟಿ ರೂ ಅನುದಾನ ನೀಡಿ ಕೆರೆಯನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಇದೆ ವೇಳೆಯಲ್ಲಿ ಮಾತನಾಡಿದ ಅವರು ಕೆರೆಗಳು ದೇಶದ ಜೀವನಾಡಿ ಇದ್ದಂತೆ, ಕೆರೆಗಳು ಉಳಿದರೆ ಅಂತರ್ಜಲ ಉಳಿಯುತ್ತದೆ, ಅಂರ್ಜಲ ಉಳಿದರೆ ಭೂಮಿ ಉಳಿಯುತ್ತದೆ, ಭೂಮಿ ಉಳಿದರೆ ನಾವು ಉಳಿಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಮಂಜುನಾಥ್, ತಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ವೀರೇಶ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀಮತಿ ಗೌರಮ್ಮ, ಶ್ರೀ ಬಸಣ್ಣ,ಶ್ರೀ ಪ್ರಕಾಶ್,ಶಿಕ್ಷಕರಾದ ಶ್ರೀ ಹನುಮಂತಪ್ಪ,ಶ್ರೀ ಮಾರುತೇಶ್, ಶ್ರೀ ನಿತಿನ್, ಗುತ್ತಿಗೆದಾರರಾದ ಶ್ರೀ ರಾಜಶೇಖರ್, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ. ಸುರೇಶ್, ಚಿತ್ರದುರ್ಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend