ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಭೆ ಕರಿಯಲಾಗಿತ್ತು…!!!

ಇವತ್ತು ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಸಭೆ ಕರಿಯಲಾಗಿತ್ತು.

ಬೆಳಗಾವಿ ಜಿಲ್ಲೆಯ ವಿವಿಧ ಸಂಘಟನೆಯ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಮಾದಿಗ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಲಾಯಿತ್ತು.

ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಯುತ್ತಿದ್ದು ಈ ಅಧಿವೇಶನದಲ್ಲಿ ನ್ಯಾ ನಾಗಮೋಹನ ದಾಸ್ ಆಯೋಗದ ವರದಿ ಆಧಾರದಂತೆ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಶೇಕಡಾ ೨% ಹೆಚ್ಚಿಸಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಮಾದಿಗ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಮಾದಿಗರ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳುತ್ತಿದ್ದು ಈ ವಿಷಯದ ಕುರಿತಾಗಿ ಬೆಳಗಾವಿಯಲ್ಲಿ ಮೊದಲನೇ ಸಭೆ ಯಶಸ್ವಿಯಾಗಿ ನಡೆಯಿತು. ಈ ಸಭೆಯ ಅಧ್ಯಕ್ಷತೆ ಶ್ರೀ ಮುತ್ತಣ ಬೆಣ್ಣೂರು ( ಹಿರಿಯ ಹೋರಾಟಗಾರರು ಬಾಗಲಕೋಟ) ಮತ್ತು ಸಭೆಯ ನೇತೃತ್ವ ವಹಿಸಿದ ಜಿಲ್ಲಾ ಮುಖಂಡರಾದ ಶ್ರೀ ಎನ್. ಪ್ರಶಾಂತರಾವ್ ಐಹೊಳೆ, ಚಂದ್ರಕಾಂತ್ ಕಾದ್ರೋಳ್ಳಿ ( ರಾಜ್ಯಾಧ್ಯಕ್ಷರು ಡಿ.ಎಸ್.ಎಸ್), ಶ್ರೀ ರಮೇಶ ಮಾದರ ಜಿಲ್ಲಾ ಮಾದಿಗ ಮುಖಂಡರು, ಶ್ರೀ ಶಂಕರ ಪೂಜಾರಿ (ರಾಜ್ಯಾಧ್ಯಕ್ಷರು ಕರ್ನಾಟಕ ಪ್ರದೇಶ ಮಾದಿಗರ ಸಂಘ) ಶ್ರೀ ರಮೇಶ ರಾಯಪ್ಪಗೋಳ (ಜಿಲ್ಲಾ ಮಾದಿಗ ಮುಖಂಡರು) ಹಾಗೂ ಈ ಬೃಹತ್ ಬೈಕ್ ಜಾಥಾ ರೂವಾಗಿಗಳಾದ ಶ್ರೀ ಅಜಿತ ಮಾದರ ( ಯುವ ಹೋರಾಟಗಾರರು), ಶ್ರೀ ಎಸ್.ಆರ್.ರಂಗನಾಥ (ಯುವ ಹೋರಾಟಗಾರರು) ಹಾಗೂ ಇನ್ನೂ ಹಲವಾರು ಜಿಲ್ಲಾ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ ಎಲ್ಲರೂ ಒಮತ್ತದಿಂದ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.ಪ್ರಕಟಣೆ : ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಬೆ‌ಂಗಳೂರು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend