ಜಾನುವಾರುಗಳಿಗೆ ಚರ್ಮ ಗಂಟು ರೋಗ ತಡೆಯಲು ಕುಂಟಮ್ಮ ದೇವಿಯ ಮೊರೆಹೋದ ರೈತರು…!!!

ಜಾನುವಾರುಗಳಿಗೆ ಚರ್ಮ ಗಂಟು ರೋಗ ತಡೆಯಲು ಕುಂಟಮ್ಮ ದೇವಿಯ ಮೊರೆಹೋದ ರೈತರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಜೀವಕ್ಕೆ ಕಂಟಕವಾಗಿರುವ ಚರ್ಮ ಗಂಟು ರೋಗ ಕಾಯಿಲೆ ಕಾಟದಿಂದ ಪಾರಾಗಲು ರೈತರು ಕುಂಟಮ್ಮಳ ಮಳೆ ಮೋರೆ ಹೋಗಿದ್ದಾರೆ.


ಗ್ರಾಮದ ಜನರುಮಂಗಳವಾರ ತಾವೇ ದೇವಿಯ ಪ್ರತಿಮೆ ಮಾಡಿ ಅದಕ್ಕೆ ಕುಂಟ್ ಅಮ್ಮ ಎಂಬ ನಾಮಕರಣ ಮಾಡಿದ್ದಾರೆ.ಹೊಸಹಳ್ಳಿ ಗ್ರಾಮದ ಹೆಣ್ಣು. ಗಂಡು.ಮಕ್ಕಳು. ವೃದ್ಧರು ಸೇರಿದಂತೆ ಇಡೀ ಗ್ರಾಮಸ್ಥರು ಊರಿನ ದ್ವಾರಬಾಗಿಲು ಬಳಿಬಂದು ಅಲ್ಲಿ ಕುಂಟಮ್ಮ ದೇವಿಯ ಪ್ರತಿಮೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಮರೆಗಳಲ್ಲಿ ಹೋಳಿಗೆ ಎಡೆ ಅರ್ಪಿಸುತ್ತಾರೆ. ಜನ-ಜಾನುವಾರುಗಳಿಗೆ ಯಾವುದೇ ಕಾಯಿಲೆ ಕಾಡಬಾರದು ಎಂಬ ಬೇಡಿಕೆ ಸಲ್ಲಿಸುತ್ತಾರೆ.
ದ್ವಾರ ಬಾಗಿಲು ಬಳಿಯಲ್ಲಿ ಗ್ರಾಮದ ಎಲ್ಲಾ ಜನರು ಸೇರಿ ಕೈ ಬಂಡಿಯಲ್ಲಿ ಕುಳಿತಿರುವ ಕುಂಟಮ್ಮ ಪ್ರತಿಮೆಯನ್ನೇ ಇಳಿದುಕೊಂಡು ಊರಿನ ಗಡಿಯವರೆಗೆ ಬಿಟ್ಟು ಹಿಂದಿರುಗಿ ನೋಡದಂತೆ ಮನೆ ಸೇರುತ್ತಾರೆ.


ಒಂದು ಗ್ರಾಮದಲ್ಲಿ ಕುಂಟಮ್ಮ ಆಚರಣೆಮಾಡಿ. ಆ ಗ್ರಾಮದ ಗಡಿಯಲ್ಲಿ ಪ್ರತಿಮೆ ಹಾಗೂ ಹೋಳಿಗೆ ಇಟ್ಟಿರುವ ಮರಗಳನ್ನು ನೋಡಿದ ಮುಂದಿನ ಊರಿನವರು. ಮಾರಿ ನಮ್ಮೂರಿಗೆ ಬಂದಿದ್ದಾಳೆ ಅವಳನ್ನು ಮುಂದಿನವರಿಗೆ ನಾವು ಕಳುಹಿಸುವ ಎಂದು ಊರಿನವರು ಮಂಗಳವಾರ ಶುಕ್ರವಾರ ಇಂಥದ್ದೆ ಕುಂಟ ಪ್ರತಿಮೆ ಮಾಡಿ ಪೂಜೆ ಸಲ್ಲಿಸುತ್ತಾರೆ ಮತ್ತು ಊರಿನ ಗಡಿ ದಾಟಿಸುತ್ತಾರೆ.
ಜಾನುವಾರುಗಳಿಗೆ ಚರ್ಮ ಗಂಟಲು ಕಾಯಿಲೆ ಬಂದಿದ್ದು ಬೆಲೆಬಾಳುವ ಹಸು ಎತ್ತುಗಳು ದನಕರ. ಅಪಾಯ ಆಗಬಾರದೆಂದು ಈ ಆಚರಣೆ ಮಾಡುತ್ತಾರೆ ಎನ್ನುತ್ತಾರೆ ಹೊಸಳ್ಳಿ ಗ್ರಾಮದ ಹಿರಿಯರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend