ಹುಲಿಕುಂಟೆ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ…!!!

ಹುಲಿಕುಂಟೆ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ

ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಹುಲಿಕುಂಟೆ ಕೆರೆ ಜಾನುವಾರುಗಳಿಗೆ ಹಾಗೂ ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹುಲಿಕುಂಟೆ ಕೆರೆ ತುಂಬಿ ಕೋಡಿಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮತ್ತು ಅಧಿಕಾರಿಗಳು ಬುಧವಾರ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಈ ಭಾಗದ ರೈತರಿಗೆ ಹಾಗೂ ಕಾಡುಪ್ರಾಣಿಗಳಿಗೆ ನೀರು ಪೂರೈಕೆಗೆ ಪ್ರಮುಖ ಜಲಮೂಲವಾಗಿರುವ ಹುಲಿಕುಂಟೆ ಕೆರೆ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಗೆ ಕೋಡಿ ಹರಿಯುತ್ತಿದೆ. ಕೆರೆ ಕಟ್ಟಿದಾಗಿನಿಂದಲೂ ಸುಮಾರು 18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ನಾಗರಿಕರಿಗೆ ಮತ್ತು ಅಧಿಕಾರಿಗಳಿಗೆ ಸಂತಸ ತಂದಿದೆ. ಶಾಸಕ ಎನ್ ವೈ ಗೋಪಾಲಕೃಷ್ಣ ತಮ್ಮ ಬೆಂಬಲಿಗರೊಂದಿಗೆ ವಿಶೇಷ ಪೊಜೆ ಸಲ್ಲಿಸಿ, ಪ್ರತಿವರ್ಷ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿಯಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ರಾಮಾಂಜನೇಯ.ಪಿಡಬ್ಲೂಡಿಎಇಇ ಸುದರ್ಶನ್ ರೆಡ್ಡಿ.ಬೆಳ್ಳಿಗಟ್ಟೆ ಗ್ರಾ ಪಂ ಅಧ್ಯಕ್ಷೆ ರಾಧಮ್ಮ ರಾಗೇಶ್.ಸದಸ್ಯರಾದ ಹುಲಿಕುಂಟೆ ಕೆ.ನಾಗರಾಜ್.ಇಂದ್ರಮ್ಮ ಮಲಿಯಪ್ಪ.ಬೆಳ್ಳಿಗಟ್ಟೆ ಮಹೇಶ್.ಗುಡೇಕೋಟೆ ಮಾಜಿ ಜಿ.ಪಂ.ಸದಸ್ಯರಾದ ನರಸಿಂಹಗಿರಿ ವೆಂಕಟೇಶ್.ಮಂಜುನಾಥ್.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ.ಹುಡೇಂ ಪಾಪ ನಾಯಕ.ಟಿ.ಜಿ.ಮಲ್ಲಿಕಾರ್ಜುನಗೌಡ.ಕೆ.ಹೆಚ್.ವೀರನಗೌಡ.ಗುಂಡುಮುಣಗು ಎಸ್.ಪಿ.ಪ್ರಕಾಶ್.ಕಾನಮಡಗು ತಿಪ್ಪೇಸ್ವಾಮಿ.ಭೀಮೇಶ್.ದುರುಗೇಶ್.ಮಂಜುನಾಥನಾಯಕ.ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಬಸವರಾಜ್.ತರಕಾರಿ ರೇವಣ್ಣ ಹುಲಿಕುಂಟೆ ಗ್ರಾಮದ ಓಬಿಸಿ ಮೊರ್ಚ್ ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತಗೌಡ.ಮನೋಹರ್ ಬಾಬು. ಕೆ.ಬಸವರಾಜ್.ದಲಿತ ಮುಖಂಡರಾದ ನರಸಿಂಹಗಿರಿ ಓಬಯ್ಯ. ಹುಚ್ಚೆಂಗೆಪ್ಪ.ತಳವಾರ್ ತುಮಲೇಶ್.ಅನಿಲ್.ಸೇರಿದಂತೆ ಬೆಳ್ಳಿಗಟ್ಟೆ ಗ್ರಾ ಪಂ ಎಲ್ಲಾ ಸದಸ್ಯರುಗಳು.ಹುಲಿಕುಂಟೆ ಗ್ರಾಮದ ಎಲ್ಲಾ ಮುಖಂಡರು ಮಹಿಳೆಯರು ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend