6 ಗ್ರಾಮ ಪಂಚಾಯ್ತಿ ಗಳ ಕೊನೆಗೊಂಡ 2ದಿನಗಳ ಜಲ ಸಂಜೀವಿನಿ ತರಬೇತಿ…!!!

6 ಗ್ರಾಮ ಪಂಚಾಯ್ತಿ ಗಳ ಕೊನೆಗೊಂಡ 2ದಿನಗಳ ಜಲ ಸಂಜೀವಿನಿ ತರಬೇತಿ.

ಹೂವಿನಹಡಗಲಿ ತಾ ಪಂ ಮಲ್ಲಿಗೆ ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ಜಲ ಸಂಜೀವಿನಿ ತರಬೇತಿಯು ಸತತ 2 ದಿನಗಳಲ್ಲಿ ಕೊನೆಗೊಂಡಿತು. 6 ಗ್ರಾ ಪಂ ಅಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರುಗಳು, ಬಿಎಫ್ಟಿ ಗಳು, ಗಣಕಯಂತ್ರ ನಿರ್ವಾಹಕರುಗಳಿಗೂ, ಲೈನ್ ಡಿಪಾರ್ಟ್ಮೆಂಟ್ ಗಳ ಅಧಿಕಾರಿಗಳಿಗೂ ಸತತವಾಗಿ 2ದಿನದಲ್ಲಿ ಜಲ ಸಂಜೀವಿನಿಯ ಡಿ ಪಿ ಆರ್ ನ್ನು ರಚಿಸುವುದು ಹೇಗೆಂದು ತಾ ಪಂ ಯ ಸಹಾಯಕ ನಿರ್ದೇಶಕರಾದ ಶ್ರೀ ಸೋಮಶೇಖರ್ ಸರ್ ರವರು, ಸಿವಿಲ್ ಇಂಜಿನಿಯರ್ ಬಸರಾಜ್ ಗೊರಂಟಿ ಯವರು ಹೇಳಿದರು ಕೊನೆಗೆ ಇಟ್ಟಿಗಿ ಗ್ರಾ ಪಂ.ವತಿಯಿಂದ ಈ ಹಿಂದೆ ನಾಲಾ ಪುನಃಚೇತನ ದಲ್ಲಿ ನೆಡೆದ ಕಾಮಗಾರಿಗಳಾದ ಒತ್ತುವರಿಯಾದ ಹಳ್ಳವನ್ನು ದಿಶಾಂಕ ಆಪ್ ನಿಂದ ರೈತರಿಂದ ಮರಳಿ ಪಡೆದು ನಾಲಾದಲ್ಲಿ ಕೂಲಿ ಕಾರ್ಮಿಕರಿಗೆ ಹೂಳೆತ್ತುವ ಕಾಮಗಾರಿಗಳ ಬಗ್ಗೆ ಮತ್ತು ಇಟ್ಟಿಗಿ ಗ್ರಾ ಪಂ ಸಂಪನ್ಮೂಲ ನಕ್ಷೆ ಬಿಡಿಸಿದ್ದ ಹೆಚ್ ಪ್ರಕಾಶ್ ರವರು ಶಿಬಿರಾರ್ಥಿಗಳಿಗೆ ಸಂಕ್ಷಿಪ್ತವಾಗಿ ಹೇಳಿದರು.ಹಾಗೆಯೇ ಸಂಪೂರ್ಣವಾಗಿ ಕಳೆದ 2ವರ್ಷಗಳ ಹಿಂದೇನೆ ಜಲ ಸಂಜೀವಿನಿ ಹೇಗೆಂದು ತಿಳಿದು ಆವಾಗ್ಲೇ ಕೆಲಸ ಮಾಡಿದೆ ರಭಸವಾಗಿ ಹರಿಯುವಂತ ನೀರನ್ನು ಮೇಲಸ್ತರವಾಗಿ ನಿಲ್ಲಿಸಬೇಕು,,,, ಅಲ್ಲಿಂದ ಮಧ್ಯಸ್ತರದಲ್ಲಿ & ಕೆಳಸ್ತರದಲ್ಲಿ ಹೇಗೆ ಸಂಗ್ರಹಿಸಿ ಇಂಗಿಸಬೇಕೆಂಬುದನ್ನು ಹಾಗೂ ಸಂಪನ್ಮೂಲ ನಕ್ಷೆಯಲ್ಲಿದ್ದಂತಹ ಬೊಲ್ಡ್ರಸ್, & ಗೆಬೀಯನ್ ಚೆಕ್ಡ್ಯಾಮ್ ಚೆಕ್ ಡ್ಯಾಮ್ ಗಳ ಬಗ್ಗೆ,ಕಲ್ಯಾಣಿ ಬಗ್ಗೆ, ತೋಟಗಾರಿಕೆಗಳ ಬೆಳೆಯಾದ ಕರಿಬೇವು, ದಾಳಿಂಬ್ರೆ ತೋಟ, ಇನ್ನಿತರೆ ಕೆಲ್ಸಗಳ ಬಗ್ಗೆ ತಿಳಿಸಿ ತೋರಿಸಿ ಕೊಟ್ಟರು, ನಂತರ ದೇವಗೊಂಡನ ಹಳ್ಳಿ ಗ್ರಾ ಪಂ ಅಧ್ಯಕ್ಷರಾದ ಶ್ರೀ ಮಹೇಂದ್ರ ರವರು ತರಬೇತಿಯು ತುಂಬಾ ಚೆನ್ನಾಗಿ ನೆಡಿಯಿತು ಅಧಿಕಾರಿಗಳು ತುಂಬಾ ಮಾರ್ಮಿಕವಾಗಿ ಹೇಳಿ ಕೊಟ್ಟರೆಂದರೆ… ಪಿ ಡಿ ಓ ರಾದ ಅರವಿಂದ್ ಲಿಂಗನಗೌಡ್ರು ಜಲ ಸಂಜೀವಿನಿ ತರಬೇತಿಯಲ್ಲಿ ಪಾಲ್ಗೊಂಡಿದ್ದು ಚೆನ್ನಾಗಿ ಆಯ್ತು ಇದರ ಸಾರಾಂಶ ಎಂಬುದನ್ನು ತರಬೇತಿಯಿಂದ ತಿಳ್ಕೊಂಡಿರುತ್ತೇವೆ ಎಂದರು ಕೊನೆಯಲ್ಲಿ ಪಿ ಡಿ ಓ ರಾದ ಚಂದ್ರಪ್ಪ ಸರ್ ವಂದನೆ ಸಲ್ಲಿಸಿ ತರಬೇತಿಯನ್ನು ಮುಗಿಸಿದರು..

ವರದಿ.ಪ್ರಕಾಶ್. ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend