ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಹೋಗುವ ಮಕ್ಕಳಿಗೆ, ಟಿ ಶರ್ಟ್ ವಿತರಣೆ ಮಾಡಿದ ಶಾಸಕ ಕರುಣಾಕರ್ ರೆಡ್ಡಿಯವರು…!!!

ಹರಪನಹಳ್ಳಿ ತಾಲೂಕಿನ ಏನ್ ಶೀರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ ಕರುಣಾಕರ ರೆಡ್ಡಿಯವರು ಜಿಲ್ಲಾ ಮಟ್ಟಕ್ಕೆ ಹೋಗುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಟೀ ಶರ್ಟ್ ವಿತರಣೆ ಮಾಡಿ ಶಿಕ್ಷಣಪ್ರೇಮವನ್ನು ಮೆರೆದಿದ್ದಾರೆ.


ಮತ್ತಿಹಳ್ಳಿ ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯರು ಹಾಗೂ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಆಗಿರುವ ಪಾಟೀಲ್ ಪ್ರಕಾಶ ಶಾಸಕರ ಮತ್ತು ಅಭಿಮಾನಿಗಳ ಪರವಾಗಿ ಟೀ ಶರ್ಟ್ ವಿತರಣೆ ಮಾಡಿ ಮಾತನಾಡಿದರು ನಮ್ಮ ಶಾಲೆಯ ಮಕ್ಕಳು ಜಿಲ್ಲಾ ಮಟ್ಟದಲ್ಲಿ ಗೆದ್ದು ವಿಭಾಗ ಮಟ್ಟಕ್ಕೆ ಹೋಗಲಿ ಎಂದು ಶುಭ ಹಾರೈಸಿದರು ಹಾಗೂ ನಮ್ಮ ನಾಯಕರು ತಮ್ಮ ಸ್ವಂತ ವೆಚ್ಚದಲ್ಲಿ ಶಾಲೆಯ ಮಕ್ಕಳಿಗೆ ಟೀ ಶರ್ಟ್ ನೀಡಿ ಸರ್ಕಾರಿ ಶಾಲೆಯ ಬಗೆಗಿನ ತಮ್ಮ ಕಾಳಜಿಯನ್ನು ತೋರಿದ್ದಾರೆ ಎಂದರು .
ಬುಧವಾರ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಟೀ ಶರ್ಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಮಲ್ಲ ನಾಯ್ಕ, ಶಿಕ್ಷಣಪ್ರೇಮಿಗಳು ನೀಡುವ ಸಹಕಾರ ಮತ್ತು ಪ್ರೋತ್ಸಾಹದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತಷ್ಟು ಸುಲಭವಾಗುತ್ತದೆ. ಮಕ್ಕಳ ಸರ್ವಾಗೀಣ ಅಭಿವೃದ್ಧಿಗೆ ಇಂತಹ ಶಿಕ್ಷಣಪ್ರೇಮಿಗಳು ಉದಾರದಿಂದ ಸಹಾಯ, ಸಹಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು.


ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯ ಸಹ ಶಿಕ್ಷಕರಾದ ಶಿವರುದ್ರಯ್ಯ ಮಾತನಾಡಿ, ಈ ಶಾಲೆಯಲ್ಲಿ ಬಹುತೇಕ ಬಡಮಕ್ಕಳೇ ಅಭ್ಯಾಸ ಮಾಡುತ್ತಿದ್ದು, ಇಂತಹ ದಾನಿಗಳ ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಮತ್ತಷ್ಟು ಉತ್ಸಾಹ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರಾದ ದ್ಯಾವಳ್ಳಿ ನಾಗರಾಜ,ಕೆ ಕರಿಬಸಪ್ಪ, ಡಿ ಕರಿಬಸಪ್ಪ, ಬಿ ನಾಗರಾಜ, ಕೆ ಶಿವಣ್ಣ,ಚೌಡಪ್ಪ, ಎಂ ಕೊಟ್ರೇಶ,ಮಂಜುನಾಥ,ನಿಜಗುಣ,ಕೆ ಮುರುಡೇಶ, ಜಿ ಕೃಷ್ಣಪ್ಪ, ಮತ್ತು ಶಿಕ್ಷಕರಾದ ಕೆಂಚಪ್ಪ,ಮಂಜಪ್ಪ,ಜಯ ಶ್ರೀ ಸೌಭಾಗ್ಯ, ಶಾಂತ ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend