ಗುಡೇಕೋಟೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ರಾಮದುರ್ಗಕೆರೆಗೆ ಬಿದ್ದು ಸಾವು..!!

ಗುಡೇಕೋಟೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ರಾಮದುರ್ಗಕೆರೆಗೆ ಬಿದ್ದು ಸಾವು..!!

ಗುಡೇಕೋಟೆ: ರಾಮದುರ್ಗ ಕೆರೆ ತುಂಬಿ ಕೋಡಿ ಹರಿದು ಗ್ರಾಮವಾಸಿಗಳು ಸಂತಸ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರು ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡದ ಕೃಷ್ಣನಾಯ್ಕ್. (34ವರ್ಷ) ಎಂದು ಗುರುತಿಸಲಾಗಿದ್ದು,ಬೆಲ್ದಾರ್ ಕೆಲಸ ಮಾಡಿಕೊಂಡಿದ್ದ ಮೃತ ಕೃಷ್ಣನಾಯ್ಕ್. ಅವರು, ಇತ್ತೀಚಿಗೆ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ಕುಡಿತದ ಚಟ ಅಭ್ಯಾಸ ಮಾಡಿಕೊಂಡು ಮಾನಸಿಕ ಅಸ್ವಸ್ಥರಂತೆ ಒಬ್ಬರೆ ಮನೆಯಿಂದ ಹೊರಗಡೆ ಹೊಗುತ್ತಿದ್ದನ್ನು ಒಬ್ಬೋಬ್ಬನೆ ಮಾತಾಡುತ್ತಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 13 ರಂದು ಮನೆಯಿಂದ ಕಾಣೆಯಾದ ಮೃತ ಕೃಷ್ಣನಾಯ್ಕ್ ಅವರ ಪಾರ್ಥಿವ ಶರೀರ ರಾಮದುರ್ಗಕೆರೆಯಲ್ಲಿ ಅಕ್ಟೋಬರ್ 16 ರಂದು ಪತ್ತೆಯಾಗಿದ್ದು, ಪೊಲೀಸರು ಶವವನ್ನು ಕೆರೆಯಿಂದ ಹೊರತೆಗೆದು. ತನಿಖೆ ಮುಗಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಈತನ ಸಾವಿನ ವಿಷಯದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವುದಿಲ್ಲ ಈತನು ಮಾನಸಿಕ ಅಸ್ವಸ್ಥತೆಯಿಂದಲೇ ಕೆರೆಯಲ್ಲಿನ ನೀರಿಗೆ ಬಿದ್ದು ಸಾವನಪ್ಪಿದ್ದಾರೆಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದು,ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend