ಕಾಂಗ್ರೆಸ್ ನಿಂದ ಮನೆ-ಮನೆಗೆ ರಂಗೋಲಿ ಜಾತ್ರೆ…!!!

ಕಾಂಗ್ರೆಸ್ ನಿಂದ ಮನೆ-ಮನೆಗೆ ರಂಗೋಲಿ ಜಾತ್ರೆ.

ಸಿಂಧನೂರು.ಅ.14.ಎಐಸಿಸಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿ ಯಿಂದ ಕಾಶ್ಮೀರವರೆಗೆ ಭಾರತ್ ಜೋಡೋ, ಪಾದಯಾತ್ರೆ ನಡೆಸುತ್ತಿರುವ ಅಂಗವಾಗಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಘಟಕ ವತಿಯಿಂದ ಗುರುವಾರ ನಗರದ 2ನೇ ವಾರ್ಡ ನ ಪಟೇಲವಾಡಿಯಲ್ಲಿ ಮನೆ-ಮನೆಗೆ ರಂಗೋಲಿ ಜಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ನಾಗವೇಣಿ ಪಾಟೀಲ್‌ ಮಾತನಾಡಿ,ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮನೆ-ಮನೆಗೆ ರಂಗೋಲಿ ಜಾತ್ರೆ ಕಾರ್ಯಕ್ರಮವನ್ನು ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ ಆದೇಶದ ಮೇರೆಗೆ ನಡೆಸಲಾ ಗುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ಸಾಧನೆ ಗಳು ಕುರಿತು ಮಹಿಳೆಯರಿಗೆ ತಿಳಿಸುವ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗುತ್ತಿದೆ ಎಂದರು.

ರಾಹುಲ್‌ ಗಾಂಧಿ ನಡೆಸುತ್ತಿರುವ ಪಾದಯಾತ್ರೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಲಕ್ಷಾಂತರ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ರಾಜ್ಯ,ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಹಿಳೆಯರು ಭಾರತ ಭೂಪಟ, ಹಸ್ತ ಮತ್ತಿತರ ಚಿತ್ರಗಳನ್ನು ರಂಗೋಲಿಯಿಂದ ಬಿಡಿಸಿ ಬಣ್ಣ ತುಂಬಿ ಗಮನ ಸೆಳೆದರು. ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಪ್ರೇಮಾಲತಾ, ತಾಲ್ಲೂಕು ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ ಬಸನಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಭಂಗಿ, ಮುಖಂಡರಾದ ಜಿ.ಜೆ.ದೇವಿರಮ್ಮ, ನಾಗರತ್ನಮ್ಮ ಬಂಗಾರಶೆಟ್ಟಿ, ಸರಿತಾ ವೆಂಕಟೇಶ ಬಂಡಿ, ನಳಿನಿ ಚಂದ್ರಶೇಖರ ಸೇರಿದಂತೆ ಮಹಿಳಾ ಕಾರ್ಯಕರ್ತೆಯರು, ವಾರ್ಡ್‌ನ ಮಹಿಳೆಯರು ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend