ತಾಲೂಕಿನ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೆಂಚಮಲ್ಲನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಡಾ.ಎ.ಕರಿಬಸಪ್ಪ ಅವರು ಅವಿರೋಧವಾಗಿ ಆಯ್ಕೆ…!!!

ತಾಲೂಕಿನ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕೆಂಚಮಲ್ಲನಹಳ್ಳಿ ಪ್ರೌಢಶಾಲೆಯ ಶಿಕ್ಷಕ ಡಾ.ಎ.ಕರಿಬಸಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಭೆ ನಡೆದಿದ್ದು, ತಾಲೂಕು ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ
ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ಧಾರಾಧ್ಯ, ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಭೀಮಾನಾಯ್ಕ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ್, ನಿವೃತ್ತ ಶಿಕ್ಷಕ ಹಾಗೂ ನಿಕಟಪೂರ್ವ ಅಧ್ಯಕ್ಷ ಎಸ್.ಟಿ.ಬಸವರಾಜ ಸೇರಿ ಇತರರಿದ್ದರು.
ಸಂಘದ ಪದಾಧಿಕಾರಿಗಳು..
ಕೂಡ್ಲಿಗಿ ತಾಲೂಕಿನ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ. ಗೋಪಾಲನಾಯ್ಕ (ಗೌರವಾಧ್ಯಕ್ಷ), ಸುಧಾಕರ (ಜಿಲ್ಲಾ ಸಂಘದ ಗೌರವಾಧ್ಯಕ್ಷ), ಡಾ.ಎ.ಕರಿಬಸಪ್ಪ ( ಅಧ್ಯಕ್ಷ ), ತೊಳ್ಚನಾಯ್ಕ ( ಪ್ರಧಾನ ಕಾರ್ಯದರ್ಶಿ ), ರವೀಂದ್ರ ಹಾಗೂ ಎಚ್.ಎನ್.ಗೋವಿಂದಮ್ಮ (ಉಪಾಧ್ಯಕ್ಷರು), ಭರತೇಶ್ ( ಖಜಾಂಚಿ), ಕೆ.ಟಿ.ಸಿದ್ಧರಾಮೇಶ್ವರ ( ಸಹ ಕಾರ್ಯದರ್ಶಿ), ರೇವಣಾರಾಧ್ಯ (ಸಂಘಟನಾ ಕಾರ್ಯದರ್ಶಿ), ಆರ್.ರಂಗನಾಯ್ಕ (ಸಂಚಾಲಕ), ನಿಜಗುಣ (ಜಿಲ್ಲಾ ಸಂಘಟನಾ ಕಾರ್ಯದರ್ಶಿ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ನೂತನ ಅಧ್ಯಕ್ಷ ಡಾ.ಎ.ಕರಿಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend