ಕರ್ನಾಟಕ ಇಂಟೆಲಿಜೆನ್ಸ್ ಅವಾರ್ಡ್: ನಾಲ್ಕು ವರ್ಷದ ಬಾಲಕನಿಗೆ…!!!

ಕರ್ನಾಟಕ ಇಂಟೆಲಿಜೆನ್ಸ್ ಅವಾರ್ಡ್: ನಾಲ್ಕು ವರ್ಷದ ಬಾಲಕನಿಗೆ

ಗುಡೇಕೋಟೆ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಖ್ಯಾತ ವೈದ್ಯ ಡಾ. ಷಣ್ಮುಖಪ್ಪ ಇವರ ಮೊಮ್ಮಗ ಶಿವಕುಮಾರ ಬೊಮ್ಮ ದೇವರಹಳ್ಳಿ ಶಾಲೆಯ ಶಿಕ್ಷಕರ ಪುತ್ರ ನವನೀತ ಸ್ವರ್ಣ ಕುಮಾರ್ ಎಂ.ಎಸ್ ಈ ಬಾಲಕ 118 ರಾಸಾಯನಿಕ ಧಾತುಗಳ ಆವರ್ತಕ ಕೋಷ್ಟಕ ಅನ್ನು ಅತಿ ವೇಗವಾಗಿ 5.04 ನಿಮಿಷದಲ್ಲಿ ಬರೆದು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಹಾಗೂ ಕಿಡ್ಸ್ ವರ್ಲ್ಡ್ ರೆಕಾರ್ಡ್, ಇಂಟ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್, ವರ್ಡ್ಸ್ ವೈಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಇಂಟೆಲಿಜೆನ್ಸ್ ಅವಾರ್ಡ್, ಕರ್ನಾಟಕ ಅಚಿವ್ ಮೇಂಟ್ ಅವಾರ್ಡ್ ಹಾಗೂ ಕೇವಲ 4.40 ನಿಮಿಷದಲ್ಲಿ ಬರೆದು ವರ್ಲ್ಡ್ ವೈಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾನೆ. ನಾಲ್ಕು ವರ್ಷ ನಾಲ್ಕು ತಿಂಗಳ ಪುಟಾಣಿ ಬಾಲಕ ನವನೀತ ಸ್ವರ್ಣ ಕುಮಾರ್ ಎಂ.ಎಸ್ ಇಂಡಿಯಾ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾನೆ. ಈ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ತಾಲೂಕಿನ ಗುಡೇಕೋಟೆ ಗ್ರಾಮದ ಖ್ಯಾತ ವೈದ್ಯ ಷಣ್ಮುಖಪ್ಪ ಇವರ ಮೊಮ್ಮಗ ಶಿವಕುಮಾರ ಬೊಮ್ಮ ದೇವರಹಳ್ಳಿ ಶಾಲೆಯ ಶಿಕ್ಷಕರ ಪುತ್ರ ನವನೀತ ಸ್ವರ್ಣ ಕುಮಾರ್ ಎಂ.ಎಸ್ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾನೆ. ನವನೀತ ಸ್ವರ್ಣ ಕುಮಾರ್ ಎಂ.ಎಸ್ ಈ ಬಾಲಕನಿಗೆ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆಗಳು ಪ್ರಶಸ್ತಿ ನೀಡಿವೆ. ಇನ್ನು ನವನೀತ ಸ್ವರ್ಣ ಕುಮಾರ್ ಎಂ.ಎಸ್ ವರ್ಲ್ಡ್ ವೈಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಕ್ಕೆ ಮನೆಯ ಕುಟುಂಬಸ್ಥರು, ಸಂಬಂಧಿಕರು, ಶಾಲೆಯ ಶಿಕ್ಷಕರು, ಬಾಲಕನಿಗೆ ಹಾಗೂ ಪೋಷಕರಿಗೆ ಅಭಿನಂದಿಸಿದ್ದಾರೆ…

ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend