ಕೂಡ್ಲಿಗಿ ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ…!!!

ಕೂಡ್ಲಿಗಿ ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಭಾನುವಾರ ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಎನ್ ವೈ ಗೋಪಾಲಕೃಷ್ಣ ಇವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಶಾಸಕ ಎನ್ ವೈ ಜಿ ಮಾತನಾಡಿ ಎಸ್ಸಿ ಎಸ್ಟಿ ಸಮುದಾಯ ಮೀಸಲಾತಿ ಕುರಿತು ಸರ್ಕಾರ ಈ ಬಗ್ಗೆ ಚರ್ಚೆ ಮಾಡಿದೆ ಇನ್ನು ಮುಂದೆ ಅದಕ್ಕೆ ಮುಂದಿನ ಅನುಕೂಲಕ್ಕಾಗಿ ಸಭೆ ಕರೆಯಲಾಗಿದ್ದು ಎಲ್ಲಾ ಪಕ್ಷದ ಮುಖಂಡರು ಮತ್ತುಮುಖ್ಯಮಂತ್ರಿ ಸಭೆಯ ಕ್ಯಾಬಿನೆಟ್ ದರ್ಜೆ ಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು ಜಾತಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದರು. ಅರುವತ್ತು ಎಪ್ಪತ್ತು ಲಕ್ಷ ವಾಲ್ಮೀಕಿ ಜನ ಇದ್ದು ಇವರಿಗೆ. ಮೀಸಲಾತಿಯನ್ನು ಕಲ್ಪಿಸಲು ಹೆಚ್ಚಿನ ಸಮಯ ಬೇಕಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶಾರದಾಬಾಯಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ಚಂದ್ರು, ವಾಲ್ಮೀಕಿ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಡಿವೈಎಸ್ ಪಿ ಹರೀಶ್ ರೆಡ್ಡಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್ ಫಿರೋಜ್ ಖಾನ್, ಉಪಾಧ್ಯಕ್ಷ ರಾಘವೇಂದ್ರ ಸರಸ್ವತಿ ತಹಶೀಲ್ದಾರ್ ಜಗದೀಶ್, ಪಟ್ಟಣದ ತಾಲ್ಲೂಕು ಎಲ್ಲ ಅಧಿಕಾರಿಗಳು ಹಾಗೂ ವಾಲ್ಮೀಕಿ ಮುಖಂಡರಾದ ಭೀಮಣ್ಣ ನಾಯಕ, ಕಾವಲಿಶಿವಪ್ಪನಾಯಕ, ರಾಘವೇಂದ್ರ ಸೇರಿದಂತೆ ವಾಲ್ಮೀಕಿ ಮುಖಂಡರು ಭಾಗವಹಿಸಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend