ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಸಿರುಗುಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಬ್ರೆಡ್ ಹಾಲು ವಿತರಣೆ…!!!

ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ಸಿರುಗುಪ್ಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಬ್ರೆಡ್ ಹಾಲು ವಿತರಣೆ

ಸಿರುಗುಪ್ಪ ಜಾತ್ಯತೀತ ಜನತಾದಳ ಪಕ್ಷದ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರಾದ ಎನ್.ಎ ಭಾಷಾ ಮುಲ್ಲರ್ ಇವರ ನೇತೃತ್ವದಲ್ಲಿ ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಅಂಗವಾಗಿ ಸಿರುಗುಪ್ಪ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ವಾರ್ಡಿನಲ್ಲಿ ಇರುವ ಬಡ ರೋಗಿಗಳ ಆರೋಗ್ಯ ವಿಚಾರಿಸಿ ಅವರಿಗೆ ಹಾಲು ಬ್ರೆಡ್ಡು ಹಣ್ಣು ನೀರಿನ ಬಾಟಲ್ ಗಳನ್ನು ನೀಡಿ, ಆಸ್ಪತ್ರೆಯ ಸಿಬ್ಬಂದಿಗಳಿಗೆ ರೋಗಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವಂತೆ ಅವರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ದೇವರಾಜ್ ಹಾಗು ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಎಂದು ಹೇಳಿದರು. ಹಾಗೇನೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾತ್ಯತೀತ ಜನತಾದಳ ಪಕ್ಷದ ನಿಯೋಜಿತ ಅಭ್ಯರ್ಥಿ ಬಿ.ಪರಮೇಶ್ವರ್ ನಾಯಕ ತಾಲೂಕು ಅಧ್ಯಕ್ಷರಾದ ಕೆ.ಶಿವನಾರಾಯಣ ಉಪಾಧ್ಯಕ್ಷರಾದ ಗುಳ್ಳೆಮ್ ನಾಗರಾಜ್ ಕಾರ್ಯದರ್ಶಿಗಳಾದ ಶ್ರೀ ಗೋವಿಂದರಾಜು ಪಟ್ಟಣ ಪಂಚಾಯಿತಿ ಘಟಕದ ಅಧ್ಯಕ್ಷರಾದ ಶ್ರೀ ಬಸಪ್ಪ ಹಾಗೂ ಪಕ್ಷದ ಕಾರ್ಯಕರ್ತ ಮುಖಂಡರುಗಳಾದ ಲಕ್ಷ್ಮಣ ಟಿ. ಬುಡ್ಡ ಸಾಬ್, ಟಿ ಖಾಜಾ ಹುಸೇನ್, ಮೆಹಬೂಬ್ ಬಾಷಾ ಗಾರಿಬ್ ಭಾಷಾ,ಚಿದಾನಂದ ಖಾದರ್ ಮೊದಿನ್, ಅಂಜಿನಿ ನನ್ನಪ್ಪ, ಶಿವಪ್ಪ, ಪಂಪಾಪತಿ ಮಶುಮ್ ಹಾಗೂ ಮಸ್ತಾನ್ ಭಾಷಾ ಉಪಸ್ಥಿತರಿದ್ದರು..

ವರದಿ.ವಿರೇಶ್ ಸಿರಿಗುಪ್ಪ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend