ಗುಡೇಕೋಟೆ ಕುಡಿತದ ಚಟವನ್ನು ಬಿಡಲು ಬುದ್ದಿ ಮಾತು ಹೇಳಿದ್ದಕ್ಕೆ ನೇಣಿಗೆ ಶರಣಾದ ವ್ಯಕ್ತಿ…!!!

ಗುಡೇಕೋಟೆ ಕುಡಿತದ ಚಟವನ್ನು ಬಿಡಲು ಬುದ್ದಿ ಮಾತು ಹೇಳಿದ್ದಕ್ಕೆ ನೇಣಿಗೆ ಶರಣಾದ ವ್ಯಕ್ತಿ

ಗುಡೇಕೋಟೆ :-ಕುಡಿತದ ಚಟವನ್ನು ಬಿಡಲು ಬುದ್ದಿಮಾತು ಹೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿ ಲೋಕೇಶ್ ಎಂ(29) ನೇಣಿಗೆ ಶರಣಾದ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಲೋಕೇಶ್ (29) ಮೃತ ಲೋಕೇಶನು ಬೆಲ್ದಾರ್ ಕೆಲಸ ಮಾಡಿಕೊಂಡಿದ್ದು ಪ್ರತಿದಿನ ಮಧ್ಯಪಾನ ಮಾಡುವ ಚಟವನ್ನು ಕಲಿತಿದ್ದ.ಮಧ್ಯಪಾನ ಮಾಡಿ ಮನೆಗೆ ಬರುತ್ತಿದ್ದು ಮನೆಯಲ್ಲಿ ಆತನ ತಂದೆ ತಾಯಿಗಳು ಯಾಕೆ ಕುಡ್ತೀಯಾ ಕುಡಿದು ಆರೋಗ್ಯ ಕೆಡಿಸಿಕೊಳ್ಳಬೇಡ ಎಂದು ಕೇಳಿದಾಗ ಬೆಲ್ದಾರ್ ಕೆಲಸ ಮಾಡಿ ಮೈಕೈ ನೋವು ಜಾಸ್ತಿ ಆಗಿರುತ್ತದೆ ಅದಕ್ಕಾಗಿ ಕುಡಿಯುತ್ತೇನೆ ಎಂದು ಹೇಳಿ. ದಸರಾ ಹಬ್ಬದ ಕರಿ ಇದ್ದಿದ್ದರಿಂದ ಅತಿ ಹೆಚ್ಚು ಮಧ್ಯಪಾನ ಮಾಡಿ ಮನೆಗೆ ಬಂದಿದ್ದು ಅವರ ತಾಯಿ ಊಟಕ್ಕೆ ಕರೆದಿದ್ದು ಆಮೇಲೆ ಮಾಡುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿದ್ದು ಅವರ ತಾಯಿ ಮಲಗಿಕೊಳ್ಳಲು ಬಾಡಿಗೆ ಮನೆಗೆ ಹೋಗಿದ್ದಾಗ ಲೋಕೇಶನು ರಾತ್ರಿ ಮನೆಗೆ ವಾಪಸ್ ಬಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ತಂದೆ ತಾಯಿ ಹೇಳಿದ ಕುಡಿತದ ಚಟವನ್ನು ಬಿಡು ಎಂದು ಬುದ್ಧಿ ಮಾತು ಹೇಳಿದ್ದನ್ನೆ ಮನಸ್ಸಿಗೆ ಬೇಜಾರು ಮಾಡಿಕೊಂಡು ತಮ್ಮ ಮನೆಯಲ್ಲಿರುವ ಕಟ್ಟಿಗೆ ತಿರಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಎಂದು ಮೃತನ ಸಹೋದರ ಆಂಜಿನೇಯ ನೀಡಿದ ದೂರಿನ ಅನ್ವಯ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend