ಕೊಪ್ಪಳ :-ಗಂಗಾವತಿ ತಾಲೂಕಿನ ಐತಿಹಾಸಿಕ ಸ್ಥಳ ಹಾಗೂ ಕರ್ನಾಟಕದಲ್ಲಿ ದಸರಾ ಪ್ರಾರಂಭದ ಮೂಲಸ್ಥಳವಾದ ಹೇಮಗುಡ್ಡದಲ್ಲಿ ನಾಡಹಬ್ಬ ದಸರಾದ ಪ್ರಯುಕ್ತ ಒಂಬತ್ತು ದಿನಗಳ ಕಾಲ ನವದುರ್ಗೆಯರ ಪೂಜಾ ಕಾರ್ಯಗಳು, ಪುರಾಣ ಪ್ರವಚನ, ಹೋಮ ಹವನಗಳು ಜರುಗಿದವು.

ಮತ್ತು ದಸರದ ಒಂಬತ್ತನೆಯ ದಿನವಾದ ದಿನಾಂಕ 04-10-2022 ಮಂಗಳವಾರದಂದು ಬೆಳಿಗ್ಗೆ 10:30 ರಿಂದ 11:30 ರ ವರೆಗೆ 40 ಜೋಡಿ ಸಾಮೂಹಿಕ ವಿವಾಹಗಳು ಮತ್ತು ಸಂಜೆ 4:30ಕ್ಕೆ ದುರ್ಗಾದೇವಿ ಮೂರ್ತಿಯನ್ನು ಹೊತ್ತು ಆನೆಯ ಮೇಲೆ ಅಂಬಾರಿ ಸುಮಾರು ಎರಡು ಕಿಲೋಮೀಟರ್ ನಷ್ಟು ವಿಜೃಂಭಣೆಯಿಂದ ನೆರವೇರಿತು ಇದರ ಎಲ್ಲಾ ಜವಾಬ್ದಾರಿಯನ್ನು ಎಚ್ ಜಿ ರಾಮುಲು ಕುಟುಂಬದವರು ವಹಿಸಿಕೊಂಡಿದ್ದರು.
ವರದಿ :-ಚನ್ನಬಸವರಾಜ ಕಳ್ಳಿಮರದ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
