ನವ ಸಂಕಲ್ಪ ನವ ಸಿಂಧನೂರು ಅಭೂತ ಪೂರ್ವ ಯಶಸ್ಸು…!!!

ನವ ಸಂಕಲ್ಪ ನವ ಸಿಂಧನೂರು ಅಭೂತ ಪೂರ್ವ ಯಶಸ್ಸು.

ಸಿಂಧನೂರು.ಆ.4-ನವ ಸಂಕಲ್ಪ ನವ ಸಿಂಧನೂರು ಸಂಕಲ್ಪದೊಂದಿಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಸಿಂಧನೂರು ಪ್ರಗತಿಗಾಗಿ ಸಿದ್ದ ಪರ್ವತದವರೆಗೆ ಪಾದಯಾತ್ರೆಗೆ ಅಭೂತಪೂರ್ವ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತ ರು,ಅಭಿಮಾನಿಗಳು ಬೆಂಬಲಿಸಿದರು.

ಸೋಮವಾರ ನಗರದ ಅಂಬಾದೇವಿ ದೇವಸ್ಥಾನ ದಿಂದ ಸಿದ್ದ ಪರ್ವತ ಅಂಬಾಮಠದ ವರೆಗೆ ನವ ಸಂಕಲ್ಪ ನವ ಸಿಂಧನೂರು ಕಲ್ಪನೆಯೊಂದಿಗೆ ಮತದಾರರೊಂದಿಗೆ ಮನೆ ಮಗನ ಮಾತುಕತೆ ಎಂಬ ವಿಚಾರ ಇಟ್ಟುಕೊಂಡು ಈ ಪಾದಯಾತ್ರೆ ಹಮ್ಮಿಕೊಂಡು ಹಲವಾರು ಸಮಸ್ಯೆಗಳನ್ನು ಆಲಿಸಿ ಪ್ರಗತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮಿಗಳು ಚಾಲನೆ ನೀಡಿ ಬಸನಗೌಡ ಬಾದರ್ಲಿ ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುತ್ತಾ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೊವಿಡ್‌ ನಂತಹ ಕಷ್ಟಗಳ ದಿನಗಳಲ್ಲಿ ಆಹಾರ ಕಿಟ್, ಸಿಲಿಂಡರ್‌ ನೀಡುತ್ತಾ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಾ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಜನಸೇವೆ ಮಾಡುವ ಆಸೆ ಇಂದು ವಿಜಯ ದಶಮಿಯಂದು ಹಮ್ಮಿಕೊಂಡಿರುವ ಪಾದಯಾತ್ರೆ ಮೂಲಕ ಈಡೇರಲಿ ಎಂದು ಆಶಿರ್ವಚನ ನೀಡಿದರು.

ಇಂಜಿನಿಯರಿಂಗ್, ಐ ಟಿ ಐ,ಮೆಡಿಕಲ್‌ ಕಾಲೇಜುಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಳ್ಳಿಗಳಲ್ಲಿ ಓದುವದಕ್ಕೆ ಶಾಲೆ ಸ್ಥಾಪನೆ, ಮನೆಗೊಂದು ಉದ್ಯೋಗ, ಯುವ ಸಮುದಾಯಕ್ಕೆ ಉನ್ನತ ಶಿಕ್ಷಣ,ರೈತರ ಸಮಗ್ರ ಅಭಿವೃದ್ಧಿ ಸೇರಿದಂತೆ ಆರು ವಿಚಾರಗಳನ್ನು ಇಟ್ಟುಕೊಂಡು ಸುಮಾರು 25 ಕಿ.ಮಿ ಪಾದಯಾತ್ರೆ ಇಂದು ಹಮ್ಮಿಕೊಳ್ಳಲಾಗಿ ದ್ದು ಅವುಗಳ ಈಡೇರಿಕೆ ಮತ್ತು ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನು ಮಾಡುವ ದಿಟ್ಟ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಬಸನಗೌಡ ಬಾದರ್ಲಿ ಮಾತನಾಡಿದರು.

ಪಾದಯಾತ್ರೆಗೆ ಮಾದಯ್ಯ ಗುರುವಿನ್ ಸ್ವಾಮಿಗಳು, ಬಂಗಾರಿ ಕ್ಯಾಂಪ್ ನ ಸದಾನಂದ ಶ್ರೀಗಳು, ಸೇರಿ ದಂತೆ ಹಲವಾರು ಮಠಾಧೀಶರು ಮುಖಂಡರು ಭಾಗವಹಿಸಿದ್ದರು. ಮತ್ತು ಗ್ರಾಮಗಳಲ್ಲಿ ಕಳಸ ಕುಂಬ ಡೊಳ್ಳು ಮೂಲಕ ಅದ್ದೂರಿಯಾಗಿ ಪಾದಯಾತ್ರೆಗೆ ಸ್ವಾಗತ ಕೊರಿದರು. ಹಾಗೂ ಪಾದಯಾತ್ರೆಯಲ್ಲಿ ನೂರಾರು ಯುವಕರು, ಕಾರ್ಯಕರ್ತರು, ಅಭಿಮಾನಿಗಳು ಹಿತೈಷಿಗಳು ಮನೆ ಮಗ ಬಸನಗೌಡ ಬಾದರ್ಲಿ ಜೊತೆಯಾಗಿ ಭವಿಷ್ಯದಲ್ಲಿ ನಿಮ್ಮ ಜೊತೆ ನಾವಿದ್ದೆವೆಂದು ಹೆಜ್ಜೆ ಹಾಕಿದ್ದು ಕಂಡುಬಂತು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend