ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಮತ್ತೆ ಅಸ್ಪೃಶ್ಯರೇ ಗತಿ!!! ಮುಖ್ಯಮಂತ್ರಿ ಪ್ರಧಾನಮಂತ್ರಿ ಹುದ್ದೆ ನೀಡಲಲ್ಲ…???

ಮುಳುಗುತ್ತಿರುವ_ಕಾಂಗ್ರೆಸ್ಸಿಗೆ_ಮತ್ತೆ_ಅಸ್ಪೃಶ್ಯರೇ_ಗತಿ_!!! ಮುಖ್ಯಮಂತ್ರಿ ಪ್ರಧಾನಮಂತ್ರಿ ಹುದ್ದೆ ನೀಡಲಲ್ಲ…….?????

ಹೌದು. ನೆನ್ನೆಯ ಈ ಎರಡು ಫೋಟೋಗಳನ್ನು ಗಮನಿಸಿ. ಮುಳುಗೇಹೋಗಿರುವ ಕಾಂಗ್ರೆಸ್ಸಿಗೆ ಈಗ ಅಸ್ಪೃಶ್ಯರೇ ಗತಿ ಎಂಬಂತಾಗಿದೆ.!

ಮುಖ್ಯಮಂತ್ರಿ ಪ್ರಧಾನಮಂತ್ರಿ ಹುದ್ದೆ ನೀಡಲಲ್ಲ..! ಯಥಾಪ್ರಕಾರ ಓಟ್ ಬ್ಯಾಂಕಾಗಿ ಮುಂದುವರಿಯಲು..! ದಲಿತರು ಸ್ವಂತಪಕ್ಷಗಳತ್ತ ಆಕರ್ಷಿತರಾಗುವುದನ್ನು ತಡೆಯಲು..!

ಹಾಗು ಬಿಜೆಪಿಯ 2023 -24 ರ ಭಾರೀ ದಂಡೆಯಾತ್ರೆಗೆ ತೊಡಕಾಗದಿರಲು..!

ಬಂಧುಗಳೇ, ಒಂದಾನೊಂದು‌ ಕಾಲದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಎಲ್ಲಾ ರಾಜ್ಯಗಳಲ್ಲೂ ಅಧಿಕಾರದಲ್ಲಿದ್ದು ಕೇಂದ್ರದಲ್ಲೂ ತಾನೇ ಅಧಿಕಾರದಲ್ಲಿತ್ತು. ಆದರೆ ಈಗ ಕೇಂದ್ರವನ್ನೂ ಕಳೆದುಕೊಂಡು ಭಾಗಶಃ ಎಲ್ಲಾ ರಾಜ್ಯಗಳ ಅಧಿಕಾರವನ್ನೂ ಕಳೆದುಕೊಂಡು ಅಕ್ಷರಶಃ ಮುಳುಗುತ್ತಿರುವ ಹಡಗಿನಂತಾಗಿ ಬೆರಳೆಣಿಕೆಯ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ನಾಯಕರ ವಯಕ್ತಿಕ ವರ್ಚಸ್ಸು ಹಣಬಲ ತೋಳ್ಬಲ‌ ಜಾತಿಬಲದ ಕಾರಣಕ್ಕಾಗಿ ಕೃತಕ ಆಕ್ಸಿಜನ್ ಮೂಲಕ ಉಸಿರಾಡುತ್ತಿದೆ.‌.!

ಇಂಥ ಸಂದರ್ಭದಲ್ಲಿ ‌ಕರ್ನಾಟದಲ್ಲಿ ಮತ್ತೆ ಅಧಿಕಾರ ಹಿಡಿಯಲು ಕರ್ನಾಟಕದ ಪ್ರಬಲ ಜಾತಿಗಳಾಗಿ ಕಾಂಗ್ರೆಸ್ಸಿನಿಂದ ಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿದ ಲಿಂಗಾಯತರನ್ನಾಗಲೀ ಒಕ್ಕಲಿಗರನ್ನಾಗಲೀ ಇತ್ತೀಚಿನ ಕುರುಬ ಸಮುದಾಯವನ್ನಾಗಲೀ ಕಾಂಗ್ರೆಸ್ ಓಲೈಸುವ ಗೋಜಿಗೆ ಹೋಗಲ್ಲ. ಯಾಕೆಂದರೆ ಈ ಮೂರು ಸಮುದಾಯಗಳು ರಾಜಕೀಯವಾಗಿ ಬಹಳ ಜಾಗರೂಕ ಪ್ರಜ್ಞಾವಂತ ಲೆಕ್ಕಾಚಾರದ ಸಮುದಾಯಗಳು..!

ತಮ್ಮ ಸಮುದಾಯಕ್ಕೆ ಮುಖ್ಯಂಮತ್ರಿ ಪಟ್ಟ ಕೊಡುವುದಾದರೆ ಕಾಂಗ್ರೆಸ್..! ಇಲ್ಲವೇ ಲಿಂಗಾಯತರಿಗೆ ಬಿಜೆಪಿ ಇದೆ ಒಕ್ಕಲಿಗರಿಗೆ ಜನತಾದಳವಿದೆ..!

ಕುರುಬರಿಗೆ ಪಕ್ಷಕ್ಕಿಂತ ಮುಖ್ಯವಾಗಿ ತನ್ನ ಸಮುದಾಯವನ್ನು ಯಾವುದೇ ಕಾರಣಕ್ಕೂ ಕೈಬಿಡದ ಸಿದ್ಧರಾಮಯ್ಯನವರೇ ಇದ್ದಾರೆ ಅವರು ಯಾವ ಪಕ್ಷಕ್ಕೆ ಹೋದರೂ ಕುರುಬರು ಅವರನ್ನು ಬೇಷರತ್ ಹಿಂಬಾಲಿಸಿ ಮುಖ್ಯಮಂತ್ರಿ ಮಾಡಿಕೊಳ್ಳುವ ಛಾತಿ ಹೊಂದಿದ್ದಾರೆ..!

ಆದರೆ, ಸ್ವಾತಂತ್ರ್ಯ ಪೂರ್ವದಿಂದಲೂ ಸ್ವಾತಂತ್ರ್ಯ ನಂತರದಲ್ಲೂ ಓಟಿನ ಹಕ್ಕು ಕೊಡಿಸಿದ ಬಾಬಾಸಾಹೇಬರನ್ನೇ ಬದಿಗೆ ಸರಿಸಿ ಕಾಂಗ್ರೆಸ್ ಕೊಡುವ ಎಂಜಲಿಗೆ ಕೈಯೊಡ್ಡಿ ಬಾಯೊಡ್ಡಿ ನಿಂತು ಇತ್ತ ಬಾಬಾಸಾಹೇಬರು ಸ್ಥಾಪಿಸಿದ ಅಥವಾ ಬಾಬಾಸಾಹೇಬರ ಸಿದ್ಧಾಂತದ ಆಧಾರದ ಮೇಲೆ ತಮ್ಮವರೇ ಸ್ಥಾಪಿಸಿದ ಸ್ವಂತಪಕ್ಷದ ಗಂಧಘಮಲೂ ಅರಿಯದೆ ಅತ್ತ ತಾವು ಓಟುಹಾಕುವ ಪಕ್ಷದಲ್ಲಾದರೂ ಮುಖ್ಯಮಂತ್ರಿ ಪ್ರಧಾನಮಂತ್ರಿ ಹುದ್ದೆಯನ್ನು ಕ್ಲೈಮ್ ಮಾಡುವ ಛಾತಿಯೂ ಇರದೆ ಕೇವಲ ಮೊತ್ತಮೊತ್ತದ ಓಟ್ ಬ್ಯಾಂಕ್ ಆಗಿ ಇರುವ ಅಸ್ಫಶ್ಯರು ದಲಿತರು SCST ಗಳು ಕಾಂಗ್ರೆಸ್ಸಿಗೆ ಮೊದಲಿಂದಲೂ ಬಯಸದೇ ಬರುವ ಏನನ್ನೂ ಬಯಸದೇ ಇರುವ ವರದಾನ..!

ಇದೆಲ್ಲಕ್ಕಿಂತಲೂ ಮುಖ್ಯವಾಗಿ ತನ್ನ ಗರ್ಭದಲ್ಲಿಯೇ ಜತನವಾಗಿ ಹೊತ್ತು ಹೆತ್ತು ಸಾಕಿ ಬೆಳೆಸಿದ ಸಂಘಪರಿವಾರದ ಬಲಿತ ಕ್ರೂರ ಮಗು ಬಿಜೆಪಿಯು ಒಂದು ಕಡೆಯಿಂದ ದಂಡೆತ್ತಿ ಬಂದಾಗಲೂ ತಾನೇ ಶರಣಾಗಿ ಸೋತು ಅವಕಾಶಕೊಟ್ಟು ಈಗ ಇಡೀ ದೇಶವನ್ನು ತನ್ನ ಕ್ರೂರಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಹೊರಟಾಗ ಆ ಪಕ್ಷಕ್ಕೆ ಮಗ್ಗಲ ಮುಳ್ಳಾಗಿ ಕಾಡಬಹುದಾದ ಸಮುದಾಯವೆಂದರೆ ಅದು‌ ದೇಶದ ಅರ್ಧದಷ್ಟಿರುವ ದಲಿತರು ಮತ್ತು ಮುಸಲ್ಮಾನರು ಮಾತ್ರ ಎಂಬುದು ಕಾಂಗ್ರೆಸ್ಸಿಗೆ ಗೊತ್ತಿದೆ..! ಮತ್ತು ಕೇವಲ ಓಟ್ ಬ್ಯಾಂಕ್ ಆಗಿ ಯಾವ ಗುರುತರ ಡಿಮ್ಯಾಂಡನ್ನೂ‌ ಇಡದೆ ಕೊಟ್ಟದ್ದನ್ನೇ ಪ್ರಸಾದವೆಂದು ಸುಮ್ಮನಿದ್ದ ದಲಿತರು ಮತ್ತು ಮುಸ್ಲೀಮ್ ರು ಬಾಬಾಸಾಹೇಬರ ಮರುಓದಿನಿಂದ ಪರಪಕ್ಷಗಳ ಗುಲಾಮಗಿರಿಯಿಂದ ಹೊರಬಂದು ಸ್ವಂತಪಕ್ಷಗಳನ್ನು ಕಟ್ಟಿಕೊಂಡು ಸ್ವತಂತ್ರರಾಗಲು ಹೊರಟಾಗ ಕಷ್ಟವಾದದ್ದು ಇದೇ ಕಾಂಗ್ರೆಸ್ಸಿಗೆ..! ಹಾಗಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕಾಂಗ್ರೆಸ್ಸಿಗೆ ಬಿಜೆಪಿ ಅಧಿಕಾರದಲ್ಲಿದ್ದರೆ ಬಿಜೆಪಿಗೆ ಅಧೀನರಾಗಿರಬೇಕಾಗಿದ್ದ ದಲಿತರು ಮುಸಲ್ಮಾನರು ಎಲ್ಲಿ ಸ್ವಂತಪಕ್ಷಗಳ ಕಡೆಗೆ ಆಕರ್ಷಿತರಾಗಿಬಿಡುತ್ತಾರೋ ಅದು ಎಲ್ಲಿ ಬಿಜೆಪಿಯ ದಂಡೆಯಾತ್ರೆಗೆ ತೊಡಕಾಗಿಬಿಡುವುದೋ ಎಂಬ ಗಾಬರಿಯೊಂದಿಗೆ ಎಲ್ಲಾ ಕಡೆಯೂ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಕೇವಲ ದಲಿತರು ಮತ್ತು ಮುಸಲ್ಮಾನರ ಮತಗಳನ್ನು ತನ್ನತ್ತ ಸೆಳೆದು ದಲಿತರ ಮುಸಲ್ಮಾನರ ಸ್ವಂತಪಕ್ಷಗಳನ್ನು ಬಗ್ಗುಬಡಿಯಲು ಸ್ವಂತಪಕ್ಷವೆಂಬ ಮಹಾತ್ವಾಕಾಂಕ್ಷೆಯನ್ನೇ ಕಿತ್ತುಹಾಕಲು ತಂತ್ರಹೆಣೆದು ಕೇಂದ್ರದಲ್ಲಿ ತಾನೆಂದೂ ಅಧಿಕಾರಕ್ಕೆ ಬರಲಾರೆನೆಂದು ಖಾತ್ರಿಯಿರುವುದರಿಂದ ಅತ್ತ ಕರ್ನಾಟಕದ ಹಿರಿಯ ದಲಿತ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಷ್ಟ್ರೀಯ ಅಧ್ಯಕ್ಷರ ಪಟ್ಟಕಟ್ಟಿ ಇತ್ತ ದಲಿತ ಸಾಹಿತಿ ಕಾಂಗ್ರೆಸ್ ಪ್ರೇಮಿ ದೇವನೂರು ಮಹಾದೇವರರನ್ನೂ ನೇರವಾಗಿ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಾ ಕಾಂಗ್ರೆಸ್ ತನ್ನ ಪುರಾತನ ನಯವಂಚಕತನವನ್ನು ಮುಂದುವರಿಸಿದೆ..! ಕೆಲ ಮುಗ್ಧದಲಿತರೂ ಸಹ ಮತ್ತೆ ಕಾಂಗ್ರೆಸ್ಸಿಗೆ ಬಹುಪರಾಕ್ ಹೇಳಲು ಸಿದ್ಧವಾಗಿಯೂ ಇದ್ದಾರೆ. ಈ ಕಾಂಗ್ರೆಸ್ಸಿನ ಬಗ್ಗೆ ಬಾಬಾಸಾಹೇಬರೇ ಪುಟಗಟ್ಟಲೆ ಬರೆದಿದ್ದರೂ ಓದದ ಅಥವಾ ಅದು ಗೊತ್ತಿದ್ದರೂ ಕಾಂಗ್ರೆಸ್ ವಿಚಾರ ಬಂದಾಗ ಅಜ್ಞಾನ ಅಹಂಕಾರ ಮತ್ತು ಸ್ವಾರ್ಥದಿಂದ ಬಾಬಾಸಾಹೇಬರನ್ನೂ ಪಕ್ಕಕ್ಕೆ ಸರಿಸಿ ಕಾಂಗ್ರೆಸ್ಸನ್ನೇ ಅಪ್ಪಿ ಮುದ್ದಾಡಿ ನಮ್ಮೊಡನೆ ಜಗಳಕ್ಕೆ ನಿಲ್ಲುವ ದಲಿತ ಬಾಂಧವರು ಈಗಲಾದರೂ ಎಚ್ಚತ್ತುಕೊಳ್ಳಲೇ ಬೇಕಿದೆ

ಕೊನೆಗೊಂದು ಮಾತು. ಕಾಂಗ್ರೆಸ್ ಎಂದರೆ ರಾಹುಲ್ ಗಾಂಧಿಯ ನಗುವಲ್ಲ..! ಕಾಂಗ್ರೆಸ್ ಎಂದರೆ ಸೋನಿಯಾಗಾಂಧಿಯ ಕೈಯಲ್ಲ..! ಕಾಂಗ್ರೆಸ್ ಎಂದರೆ ಖರ್ಗೆ ಸಿದ್ಧರಾಮಯ್ಯ ಡಿಕೆಶಿಯೂ ಅಲ್ಲ..!
ಕಾಂಗ್ರೆಸ್ ಎಂದರೆ ಬ್ರಾಹ್ಮಣ್ಯದ ಕಾಣದ CONG”RSS” ನ ಕಾಣದ ಕೈಗಳ ಆಟ..! ನಮಗೆ ಕೇವಲ ಮುಗ್ಧ ಪಾತ್ರಧಾರಿಗಳು ಮಾತ್ರ ಕಾಣುತ್ತಿದ್ದಾರೆ..!

ಇದನ್ನು ಅರ್ಥಮಾಡಿಕೊಳ್ಳಲು ಬ್ರಾಹ್ಮಣ್ಯವನ್ನು ಹಾಗು ಬ್ರಾಹ್ಮಣ್ಯ ಬೇರಿನ ಕಾಂಗ್ರೆಸ್ಸನ್ನು ಅಮೂಲಾಗ್ರವಾಗಿ ಅರ್ಥಮಾಡಿಕೊಂಡು ಎಳೆಎಳೆಯಾಗಿ ಬಿಡಿಸಿ ಬರೆದಿರುವ ಬಾಬಾಸಾಹೇಬರ “ಕನ್ನಡಕ” ಧರಿಸಿ ಭೂತವನ್ನು ನೋಡಬೇಕು. ವರ್ತಮಾನವನ್ನು ಅರಿಯಬೇಕು..! ಆಗ ಮಾತ್ರವೇ ಭಾರತಕ್ಕೆ ಭವಿಷ್ಯ..! ನಾವು ಬಾಬಾಸಾಹೇಬರನ್ನು ಅಸ್ಪೃಶ್ಯರಂತೆ ಕಂಡು ಅವರ ದೃಷ್ಟಿಕೋನ (ಕನ್ನಡಕ) ವನ್ನು ಮುಟ್ಟಲು ಹಿಂಜರಿದು ದೂರ ನಿಂತು ಕಾಂಗ್ರ್ RSS ಗೆ ಬಹುಪರಾಕ್ ಹೇಳುತ್ತಾ ನಿಂತರೆ ನಾವು ಈ ಜನ್ಮದಲ್ಲಿ ಭ್ರಮೆಯಿಂದ ಹೊರಬರಲು ಸಾಧ್ಯವಿಲ್ಲ..!

ವರದಿ.ಪ್ರತಾಪ್ ಛಲವಾದಿ
ಹರಪನಹಳ್ಳಿ ತಾಲ್ಲೂಕು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend