ಜೀರಹಳ್ಳಿ: 1.30 ಕೋ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ…!!!

ಜೀರಹಳ್ಳಿ: 1.30 ಕೋ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಚಾಲನೆ

ಕಲಬುರಗಿ:ಸೆ.29:ಆಳಂದ ಪಟ್ಟಣದಿಂದ ಜೀರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಚಾಲನೆ ನೀಡಿದರು.

ಮಂಗಳವಾರ ಆಳಂದ ಪಟ್ಟಣದ ಸರ್ಕಾರಿ ವಸತಿ ಗೃಹದಿಂದ ಜೀರಹಳ್ಳಿ ಗ್ರಾಮಕ್ಕೆ ಹೋಗುವ ಹಳೆ ರಸ್ತೆಗೆ 2021-22ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಡಿ ಮಂಜೂರಾದ ರೂ. 130.00 ಲಕ್ಷಗಳ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕರಾದ ಸುಭಾಷ ಆರ್ ಗುತ್ತೇದಾರ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರರಾದ ಲಿಂಗರಾಜ, ಆಳಂದ ಪುರಸಭೆ ಉಪಾಧ್ಯಕ್ಷರಾದ ಚಂದ್ರಕಾಂತ ಹತ್ತರಕಿ, ಮುಖಂಡರಾದ ಸಿದ್ದು ಪೂಜಾರಿ, ರಾಜು ಸನ್ಮುಖ, ಮೀರ ಅಹ್ಮದ, ಸಂತೋಷ್ ಹೂಗಾರ, ಸಿದ್ರಾಮಪ್ಪ ಹತ್ತರಕಿ, ಭೀಮಣ್ಣ ಹತ್ತರಕಿ, ಶ್ರೀಶೈಲ ಖಜೂರಿ, ಬಸವರಾಜ ಕೆರೂರ, ಸಿದ್ದು ಹಿರೋಳಿ, ಚನ್ನಪ್ಪ ಹತ್ತರಕಿ, ಕಲ್ಯಾಣಿ ಧಾನಾಗೊಳ, ಸಿದ್ದರಾಮ ಕರನಾಳಕರ, ಶ್ರೀ ರಾಮ ಸೇನೆ ತಾಲೂಕ ಅಧ್ಯಕ್ಷರಾದ ಈರಣ್ಣ ಹತ್ತರಕಿ ಹಾಗೂ ಆಳಂದ ಪಟ್ಟಣದ ಮುಖಂಡರು,ಯುವಕರು ಉಪಸ್ಥಿತರಿದ್ದರು…

ವರದಿ. ಬಸಯ್ಯ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend