ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದಂತೆ ನೆಡೆದು ಕೊಳ್ಳಲಿ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು…….
ಹರಪನಹಳ್ಳಿ.ಸೆ.28. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದಂತೆ ನೆಡೆದು ಕೊಳ್ಳಲಿ ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.
ಪಟ್ಟಣದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಎಸ್.ಸಿ. ಎಸ್.ಟಿ ಸಂಘಟನೆಗಳ ಒಕ್ಕೂಟದ ವತಿಯಿಂದ ಮೀಸಲಾತಿ ಹೆಚ್ಚಳ ವಿಷಯವಾಗಿ ಅಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೆಪ್ಟಂಬರ್ 23 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೋಮ್ಮಾಯಿ ಯವರು ಶೀಘ್ರದಲ್ಲೆ ಸರ್ವ ಪಕ್ಷಗಳ ಸಭೆಯನ್ನು ಕರೆದು ಎಸ್.ಸಿ. ಎಸ್.ಟಿಗಳ ಮೀಸಲಾತಿಯನ್ನು ಹೆಚ್ಚಳ ಮಾಡುವ ತೀರ್ಮಾನ ತೆಗೆದು ಕೋಳ್ಳುತ್ತೇನೆ ಎಂದು ಸದನದಲ್ಲಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಸನ್ಮಾನ್ಯ ಮುಖ್ಯ ಮಂತ್ರಿಗಳ ಹೇಳಿಕೆಗೆ ಪೂರಕವಾಗಿ ಸಭಾಪತಿಗಳಾದ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಹ ಮಾತನಾಡುವುದಾಗಿ ವರಿದಿಯಾಗಿದೆ.
ಸನ್ಮಾನ್ಯ ಮುಖ್ಯ ಮಂತ್ರಿಗಳ ಹಾಗೂ ಸಭಾಪತಿಗಳಾದ ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಈ ಹೇಳಿಕೆಯನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೆವೆ.
ಮಾನ್ಯ ಮುಖ್ಯ ಮಂತ್ರಿಗಳು ತಾವು ನೀಡಿರುವ ಭರವಸೆಯಂತೆ ಎಸ್.ಸಿ.ಮತ್ತು ಎಸ್.ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿ ಶಿಘ್ರವೇ ಆದೇಶ ಹೋರಡಿಸಿದಲ್ಲಿ ಅದು ನಮ್ಮ ಗುರುಗಳಾದ ಪರಮ ಪೂಜ್ಯ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳ ಸುದೀರ್ಘ ಹೋರಾಟಕ್ಕೆ ಮತ್ತು ನಾಡಿನ ಸಂವಿಧಾನಕ್ಕೆ ಸಲ್ಲುವ ಗೌರವವಾಗಿರುತ್ತದೆ. ಆಗ ನಾವು ಸರ್ಕಾರಕ್ಕೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಮ್ಮ ನಮ್ಮ ಪಟ್ಟಣದಲ್ಲಿ. ಗ್ರಾಮಗಳಲ್ಲಿ ಅತಿ ಸಂಭ್ರಮದಿಂದ ಆಚರಿಸುತ್ತೆವೆ. ಆದರೆ ಸರ್ಕಾರವು ಈ ವಿಚಾರ ಕುರಿತಂತೆ ವಿಳಂಬ ನೀತಿಯನ್ನು ಮುಂದುವರಸಿದ್ದೆ ಆದಲ್ಲಿ ಈ ಹಿಂದೆ ನಿರ್ದಸಿದಂತೆ ರಾಜ್ಯದಲ್ಲಿರುವ ಎಲ್ಲಾ ಸಂಘಟನೆಗಳು ಎಸ್.ಸಿ. ಎಸ್.ಟಿ ಸ್ವಾಮೀಜಿಗಳ ನೇತ್ರತ್ವದಲ್ಲಿ ಸಾಗರೋಪಾದಿಯಲ್ಲಿ ಸಂಗಮ ಗೋಂಡು ಅಕ್ಟೋಬರ್ 9. 2022 ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬೆಂಗಳೂರಿನ ಪ್ರೀಡಂ. ಪಾರ್ಕಿನಲ್ಲಿ ಅದ್ದೂರಿಯಾಗಿ ಆಚರಿಸುತ್ತವೆ ಎಂದರು.ಈ ವೇಳೆ ಕೋರಚ ಸಮಾಜದ ತಾಲ್ಲೂಕು ಅಧ್ಯಕ್ಷ ರಾಮ ಮೂರ್ತಿ, ಭೋವಿ ಸಮಾಜದ ಕಾರ್ಯದರ್ಶಿ ವೆಂಕಟೆಶ, ಚಲುವಾದಿ ಸಮಾಜದ ಅಧ್ಯಕ್ಷ ಸಿ.ಪರುಶುರಾಮ, ಕಾರ್ಯದರ್ಶಿ ಸಿ. ಪ್ರತಾಪ್, ಮ್ಯಾದರ ಸಮಾಜದ ಅದ್ಯಕ್ಷ ಕಾರ್ಯದರ್ಶಿ ಮಾರುತಿ ಏಕಲವ್ಯ ಸಂಘರ್ಷ ಸಮಿತಿ ಅದ್ಯಕ್ಷ ರಾಯದುರ್ಗದ ಪ್ರಕಾಶ, ಕಾರ್ಯದರ್ಶಿ ರಂಗಾಪುರ ಶಿವರಾಜ, ವಾಲ್ಮೀಕಿ ನಾಯಕ ಮಹೀಳಾ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷೀ,ಗೌರವ ಅಧ್ಯಕ್ಷರಾದ ಪದ್ಮಾವತಿ, ಮುಖಂಡರಾದ ಆಲದಹಳ್ಳಿ ಷಣ್ಮುಖಪ್ಪ, ನೀಲಗುಂದದ ತಳವಾರ ಮನೋಜ, ತಿಮ್ಮೇಶ, ಗುಂಡಗತ್ತಿ ನೇತ್ರಾವತಿ, ಮಂಜುಳಾ, ಶೋಭಾ ಸೇರಿದಂತೆ ಇತರರು ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
