ವಿವಿಧ ಕಾಮಗಾರಿಗಳ ಲೋಕಾರ್ಪಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಟ್ಟಣದಲ್ಲಿ ಇಂದು ವಿವಿಧ ಕಾಮಗಾರಿಗಳ ಪೂರ್ಣಗೊಂಡ ಕಚೇರಿಗಳನ್ನು ಮಾನ್ಯ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಘನ ಸರ್ಕಾರದ ಸಚಿವರುಗಳು ಕಂದಾಯ ಸಚಿವರಾದ ಆರ್ ಅಶೋಕ. ಸಾರಿಗೆಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಶ್ರೀರಾಮುಲು. ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಸಚಿವರಾದ ಆನಂದ್ ಸಿಂಗ್ .ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿ ಮಾನ್ಯ ಜನಪ್ರಿಯ ಎನ್ ವೈ ಗೋಪಾಲಕೃಷ್ಣ ಶಾಸಕರ ರಾಷ್ಟ್ರೀಯ ಹುತಾತ್ಮರ ಚಿತಾಭಸ್ಮ ಕ್ಕೆ ಪುಷ್ಪ ನಮನ ಸಲ್ಲಿಸಿದ್ದರು.

ನಂತರ ಮೈಲಾರ ಕ್ರೀಡಾ ರಂಗ ಮಂದಿರ ದಲ್ಲಿ ಕ್ರೀಡಾಂಗಣ ವನ್ನು ಉದ್ಘಾಟನೆ ಮಾಡಿದರು. ನಂತರ ಶ್ರೀರಾಮುಲು ಸಚಿವರು ಬಾಸ್ಕೆಟ್ ಬಾಲನ್ನು ಹಾಡಿದರು. ನಂತರ ಕುಂಭ ಹೊತ್ತ ನೂರಾರು ಮಹಿಳೆಯರು ಜೊತೆಗೆ ತಾಲೂಕು ಆಡಳಿತ ಸೌಧಕ್ಕೆ ಚಾಲನೆ ನೀಡಿದರು .ಎಲ್ಲಾ ಸಾರ್ವಜನಿಕರ ಜೊತೆಯಲ್ಲಿ ಮಾನ್ಯ ಜನಪ್ರಿಯ ಗೋಪಾಲಕೃಷ್ಣ ಶಾಸಕರು ಕಂದಾಯ ಸಚಿವರಾದ ಆರ್ ಅಶೋಕ ತಾಲೂಕ್ ಆಡಳಿತ ಸೌಧವನ್ನು ಲೋಕಾರ್ಪಣೆ ಮಾಡಿದರು. ನಂತರ ಪಟ್ಟಣ ಪಂಚಾಯತ್ ಕಚೇರಿಯನ್ನು ಮಾನ್ಯ ಜನಪ್ರಿಯ ಎನ್ ವೈ ಗೋಪಾಲಕೃಷ್ಣ . ಶ್ರೀರಾಮುಲು . ಆನಂದ್ ಸಿಂಗ್ .ಆರ್ ಅಶೋಕ್. ಲೋಕಾರ್ಪಣೆ ಮಾಡಿದರು ನಂತರ ವಾಲ್ಮೀಕಿ ಭವನವನ್ನು ಮಾನ್ಯ ಜನಪ್ರಿಯ ಎನ್ ವೈ ಗೋಪಾಲಕೃಷ್ಣ. ಆನಂದ್ ಸಿಂಗ್. ಶ್ರೀರಾಮುಲು .ಆರ್ ಅಶೋಕ. ಸಚಿವರುಗಳು ಲೋಕಾರ್ಪಣೆ ಮಾಡಿದರು ಇದಾದ ನಂತರ ಚಂದ್ರ ಶೇಖರ ಅಜಾದ್ ರಂಗಮಂದಿರದಲ್ಲಿ ಕೂಡ್ಲಿಗಿ ಕ್ಷೇತ್ರದ ಎಲ್ಲಾ ಸಾರ್ವಜನಿಕರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ.

ಮಾನ್ಯ ಸಚಿವರುಗಳಾದ ಆರ್ ಅಶೋಕ್ .ಆನಂದ್ ಸಿಂಗ್ ಶ್ರೀರಾಮುಲು. ಮಾನ್ಯ ಜನಪ್ರಿಯ ಎನ್ ವೈ ಗೋಪಾಲಕೃಷ್ಣ ಶಾಸಕರ ಸಮ್ಮುಖದಲ್ಲಿ ಈ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಂದ್ದಿದೇವೆ . ಮತ್ತು ಶಿಕ್ಷಣಕ್ಕೆ ಅತಿ ಹೆಚ್ಚು 452 ಶಾಲೆ ಕೊಠಡಿಮತ್ತು ಬಿಸಿಊಟದ ಕೊಠಡಿಗಳನ್ನು ಮಾಡಿರುವುದು. ಮತ್ತು ಅಲೆಮಾರಿ ಜನಾಂಗದವರಿಗೆ 400 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಹಾಗೂ ಇಂದಿರಾ ವಸತಿ ಯೋಜನೆ ಅಡಿಯಲ್ಲಿ .1800 ಮನೆಗಳನ್ನು ಸಹ ಮಾಡಿಸಿದ್ದಾರೆ. ಇದಲ್ಲಧೇ ನಂತರ ಜಮೀನು ಇಲ್ಲದ ಬಡವರ್ಗದ ರೈತರಿಗೆ 57ರ ಅರ್ಜಿ ಕಾಲಂನಲ್ಲಿ ಅರ್ಜಿ ಹಾಕಿದವರಿಗೆ ಭೂಮಿಯನ್ನು ಮಂಜೂರು ಮಾಡಿಸಿರುತ್ತಾರೆ. ಮತ್ತು ಅಂಗವಿಕಲ ಪಿಂಚಣಿಗಳನ್ನು ವೃದ್ಧಾಪಿ ಸಂಧ್ಯ ಸುರಕ್ಷಾ ಇವುಗಳನ್ನು ಸಹ ಮಂಜೂರು ಮಾಡಿಸುತ್ತಾರೆ. ಪ್ರವಾಹ ವಿಕೋಪದಲ್ಲಿ ಸಿಡಿಲು ಬಡಿದ ಕುರಿ ಮೇಕೆ ದನ ಸಹ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿರುತ್ತಾರೆ/ ಕೂಡ್ಲಿಗಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆಲ್ಲ ಮನೆ ಮನೆಗೆ ನಲ್ಲಿ ಮುಖಾಂತರ ತುಂಗಭದ್ರ ಕುಡಿಯುವ ನೀರನ್ನು ಅರಿಸಿದ್ದಾರೆ .ಈ ಕೂಡ್ಲಿಗಿ ಪಟ್ಟಣಕ್ಕೆ ಎಪಿಎಂಸಿಯನ್ನು ಸಹ ತಂದಿದ್ದಾರೆ. ಮತ್ತು ಜಿಲ್ಲಾ ಪಂಚಾಯತ್ ಆಫೀಸ್ ಗ್ರಾಮೀಣ ಕುಡಿಯುವ ನೀರಿನ ಆಫೀಸ್ ಡಿಪ್ಲೋಮಾ ಇಂಜಿನಿಯರಿಂಗ್ ಕಾಲೇಜ್ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಕೆರೆ ಇಲ್ಲದಂತ ಹಳ್ಳಿಗಳಿಗೆ ಚೆಕ್ ಡ್ಯಾಮ್ ನಿರ್ಮಾಣಮಾಡಿಸಿದ್ದಾರೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಸಹ ಉದ್ಘಾಟನೆ ಮಾಡುತ್ತಾರೆ ಎಂದು ಮಾನ್ಯ ಘನ ಸರ್ಕಾರದ ಕಂದಾಯ ಸಚಿವರಾದ ಆರ್ ಅಶೋಕ್ ಈ ಸಂದರ್ಭದಲ್ಲಿ ಹೇಳಿದರು ವಿಜಯನಗರ ಜಿಲ್ಲೆ ಜಿಲ್ಲಾಧಿಕಾರಿಗಳಾದ ಅನಿರುದ್ ಶ್ರವಣ್ ಹಾಗೂ ಹೊಸಪೇಟೆ ಅಸಿಸ್ಟೆಂಟ್ ಕಮಿಷನರಾದ ಸಿದ್ದರಾಮೇಶ್ವರ . ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶಾರದಾ ಬಾಯಿ ಪಟ್ಟಣ ಪಂಚಾಯತ್ ಆಫೀಸರಾದ ಫಿರೋಜ್ ಖಾನ್. ತಹಶೀಲ್ದಾರ ಟಿ ಜಗದೀಶ್ ಪಿಡಬ್ಲ್ಯೂ ಇಲಾಖೆ ಸುದರ್ಶನ್ ರೆಡ್ಡಿ .ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ನಾಗನಗೌಡ ಶಿಕ್ಷಣ ಇಲಾಖೆ ಯುವರಾಜ ನಾಯ್ಕ ಜಿಲ್ಲಾ ಪಂಚಾಯತಿ ಇಲಾಖೆ ಮಲ್ಲಿಕಾರ್ಜುನ ಹಾಗೂ ಕೂಡ್ಲಿಗಿ ತಾಲೂಕಿನ ಸುತ್ತಮುತ್ತ ಹಳ್ಳಿಗಳಿಂದ ಸಾರ್ವಜನಿಕರು ಹಾಗೂ ಎಲ್ಲಾ ಗ್ರಾಮದ ರೈತರು ಹಾಗೂಎಲ್ಲಾ ಪಕ್ಷದ ಮುಖಂಡರುಗಳು ಯುವ ಮುಖಂಡರು ಭೀಮಶ್ ಅಶ್ವಮೇಧ ಮಾಲೀಕರು ಜಿ ಟಿ ಮಲ್ಲಿಕಾರ್ಜುನ ಗೌಡ .ಹುರುಳಿಹಾಳು ರೇವಣ್ಣ ಗುಂಡು ಮುಣುಗು ತಿಪ್ಪೇಸ್ವಾಮಿ. ಜ್ಞಾನಭಾರತಿ ತಿಪ್ಪೇಸ್ವಾಮಿ ಗುಂಡುಮುಣುಗು ಪ್ರಕಾಶ್ ಮತ್ತು ಸೂರ್ಯ ಪಾಪಣ್ಣ ತಾಲೂಕು ವಾಲ್ಮೀಕಿ ಅಧ್ಯಕ್ಷರಾದ ಸುರೇಶ್ .ವೀರನಗೌಡರು ತಾಲೂಕು ಯುವ ಅಧ್ಯಕ್ಷರಾದ ಅಜಯ್. ಭರತ್.
ತಾಲೂಕು ಮಂಡಲ ಅಧ್ಯಕ್ಷರಾದ ಚನ್ನಪ್ಪ .ಪಟ್ಟಣ ಪಂಚಾಯತ್ ಸದಸ್ಯರಾದ ದುರ್ಗೇಶ್. ತಳವಾರ್ ಶರಣಪ್ಪ .ಹೂಡೇಂ ಪಾಪನಾಯಕ . ರಾಘವೇಂದ್ರ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿ ಈ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಮುಂದಿನ 2023 ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ. ನಿಮ್ಮ ಕೂಡ್ಲಿಗಿ ತಾಲೂಕನ್ನು ಇನ್ನು ಸಿಂಗಾಪುರ ಮಾಡಿ ತೋರಿಸುತ್ತೇನೆ .ಎಂದು ಮಾನ್ಯ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಹೇಳಿದರು .ನಾನು ಸುಳ್ಳು ಹೇಳುವುದಿಲ್ಲ ಹೇಳಿ ಮಾಡುವುದಿಲ್ಲ ಎಲ್ಲಾ ಸಾರ್ವಜನಿಕರಿಗೆ ಬೇಕಾಗುವ ಕೆಲಸಗಳನ್ನು ನಾನು ಮಾಡುತ್ತೇನೆ..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
