ಭಾರತ್ ಐಕ್ಯತಾ ಯಾತ್ರೆಯ ಗ್ರಾಮ ಪಂಚಾಯತ್ ವಾರು ಪೂರ್ವಭಾವಿ ಸಭೆ.
ಸಿಂಧನೂರು :ಸ.24.ತಾಲೂಕಿನ ಬಾದರ್ಲಿ ಮತ್ತು ಗಿಣಿವಾರ ಗ್ರಾಮ ಪಂಚಾಯತಿವಾರು ಎರಡು ಕಡೆ ಭಾರತ್ ಐಕ್ಯತಾ ಯಾತ್ರೆಯ ಗ್ರಾಮ ಪಂಚಾಯತ್ ವಾರು ಪೂರ್ವಭಾವಿ ಸಭೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿ ಗಳು ಬೈಕ್ ರ್ಯಾಲಿ ಮುಖಾಂತರ ಪಟಾಕಿ ಸಿಡಿಸಿ, ಅದ್ದೂರಿ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ನಂತರ ಮಾತನಾಡಿ ಭಾರತ ಐಕ್ಯತಾ ಯಾತ್ರೆಯ ಸಲುವಾಗಿ ರಾಯಚೂರಿಗೆ ಆಗಮಿಸಲಿರುವ ನಮ್ಮೆಲ್ಲರ ನಾಯಕರಾದ ರಾಹುಲ್ ಗಾಂಧಿ ಅವರ ಜೊತೆ ನಾವೆಲ್ಲರೂ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ನಾಯಕರ ಜೊತೆ ಹೆಜ್ಜೆ ಹಾಕೋಣ ಎಂದು ಬಸನಗೌಡ ಬಾದರ್ಲಿ ಕರೆ ಕೊಟ್ಟರು.ಈ ಯಾತ್ರೆಯ ಉದ್ದೇಶವನ್ನು ಊರಿನ ಯುವಕರಿಗೆ ಹಾಗೂ ಕಾರ್ಯಕರ್ತರಿಗೆ ಯಾತ್ರೆಯ ಕರಪತ್ರವನ್ನು ಹಂಚಿ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ. ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಘಲಪರ್ವಿ, ಎಚ್.ಎನ್.ಬಡಿಗೇರ,ಮಾಡಶಿರವಾರ,ಗೋಮರ್ಸಿ, ಬೂದಿಹಾಳ ಗ್ರಾಮ ಪಂಚಾಯತಿ ಸದಸ್ಯರು, ಹಿರಿಯರು, ಯುವ ಮಿತ್ರರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
