ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಪದಾಧಿಕಾರಿಗಳ ಪದಗ್ರಹಣ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ವೈಭವ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಪದಾಧಿಕಾರಿಗಳುಪದಗ್ರಹಣ ಸಮಾರಂಭ ಶನಿವಾರ ನಡೆಯಿತು.
ಪ್ರಾಸ್ತವಿಕವಾಗಿ ಸಾಹಿತಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಎಂ ರವಿಕುಮಾರ್ ಮಾತನಾಡಿ ಕೂಡ್ಲಿಗಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಮತ್ತು ಹೋಬಳಿ ಘಟಕದ ನಡೆದುಬಂದ ದಾರಿಯ ಬಗ್ಗೆ ಸ್ವ ವಿವರವಾಗಿ ತಿಳಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ನಿಷ್ಠಿರುದ್ರಪ್ಪ ಮಾತನಾಡಿ ಕನ್ನಡ ನಾಡು ನುಡಿ ಜಲ ಭಾಷೆ ಇವುಗಳಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಕನ್ನಡ ತಾಯಿಯ ಸೇವೆ ಮಾಡಲು ಕಂಕಣಬದ್ಧರಾಗಿ ನಾವೆಲ್ಲರೂ ಕೂಡ ಕನ್ನಡ ಕಟ್ಟುವಂತಹ ಕೆಲಸ ಮಾಡೋಣ ಎಂದರು.
ನಂತರ ಕೂಡ್ಲಿಗಿ ತಾಲೂಕಿನಲ್ಲಿ ಅನೇಕ ಸಾಹಿತಿಗಳು ವಿದ್ವಾಂಸರು ಕೂಡ್ಲಿಗಿ ತಾಲೂಕಿನ ನೆಲ ಶ್ರೀಮಂತನಲ್ಲ ಸಾಹಿತ್ಯಕ್ಕೆ ಕಲೆ ತನ್ನದೇ ಆದ ನೆಲೆ ಇದೆ ಎಂದರು.
ನಂತರ ಹಿರಿಯ ಸಾಹಿತಿ ಯು ಜಗನ್ನಾಥ್ ಮಾತನಾಡಿದರು. ಡಾ. ವೃಷಬೇಂದ್ರ ಚಾರ್ ಮಾತನಾಡಿ ಅನೇಕ ವಿದ್ವಾಂಸರು ಸಾಹಿತಿಗಳು ದಾರ್ಶನಿಕರು ಈ ಕನ್ನಡ ನಾಡಿನ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು. ಹೋಬಳಿ ಘಟಕದ ಅಧ್ಯಕ್ಷರಾದ ಎಸ್. ಟಿ.ತಿಪ್ಪೇಸ್ವಾಮಿ ಮಾತನಾಡಿದರು.
ಹೊಸಹಳ್ಳಿ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಭವನದ ಸ್ಥಳ ದಾನಿಗಳಾದ ವೆಂಕಟೇಶ್ವರ ರಾವ್. ಕೂಡ್ಲಿಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಕುಮಾರ ಗೌಡ್ರು. ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಕೆ ಸುಭಾಷ್ ಚಂದ್ರ.
ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಬಸವರಾಜ ಬಿಸಿನ ಹಳ್ಳಿ. ಕರಿಬಸಪ್ಪ ಎ. ಶಿವಪ್ರಕಾಶ್ ಕೆ. ಎಂ. ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರು ಸಿಬ್ಬಂದಿವರ್ಗ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಎಸ್ ಟಿ ತಿಪ್ಪೇಸ್ವಾಮಿ (ಅಧ್ಯಕ್ಷರು)
ರಾಮಕೃಷ್ಣ ಸಫಾರೆ (ಗೌರವ ಕೋಶಾಧ್ಯಕ್ಷ )
ಎಚ್ ಜಿ ಪ್ರಕಾಶ್ (ಗೌರವ ಕಾರ್ಯದರ್ಶಿ)
ಎಂ. ಓ ಮಂಜುನಾಥ (ಸಂಘಟನೆಯ ಕಾರ್ಯದರ್ಶಿ)
ಹೆಚ್ ಎನ್ ಗೋವಿಂದಮ್ಮ (ಮಹಿಳಾ ಪ್ರತಿನಿಧಿ) ಹಾಗೂ ಪ್ರತಿನಿಧಿಗಳಾಗಿ ಹೊನ್ನೂರಪ್ಪ.ಎಸ್ ಬೊಮ್ಮಯ್ಯ. ಎಸ್ ಶಂಕ್ರಪ್ಪ. ಎಸ್ ಕೆ ಜಿಲಾನ್ ಭಾಷಾ. ಅಣ್ಣಪ್ಪಸ್ವಾಮಿ.
ಎಸ್ ಮಹೇಶ್ ಅವರು ಪದಗ್ರಹಣ ಸ್ವೀಕರಿಸಿದರು..

ವರದಿ. ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
