ಚಿತ್ರದುರ್ಗ ಕಲ್ಲಿನ ಕೋಟೆ ಅಂತ. ಆದ್ರೆ ಕಳೆದ ಹತ್ತಾರು ವರ್ಷಗಳಿಂದ ಇಡೀ ದೇಶದ ಗಮನ ಸೆಳೆದಿರುವ ಕೋಟೆನಾಡಿನ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ ಇಂದು ಅದ್ದೂರಿಯಾಗಿ ನಡೆಯಿತು.ಇಡೀ ಚಿತ್ರದುರ್ಗ ನಗರ ಕೇಸರಿಮಯವಾಗಿದ್ದಲ್ಲದೇ ಯುವಕ, ಯುವತಿಯರು, ಮಕ್ಕಳು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ರು. ಕೋಟೆನಾಡು ಚಿತ್ರದುರ್ಗದ ವಿಹಿಂಪ ಹಾಗೂ ಭಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿ. ಸತತ 21 ದಿನಗಳ ಕಾಲ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿದ ಬಳಿಕ ಹಿಂದು ಮಹಾಗಣಪತಿ ವಿಸರ್ಜನಾ ಯಾತ್ರೆ ಇಂದು ನಡೆಯಿತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಶೋಭಯಾತ್ರೆಯಲ್ಲಿ 4 ಲಕ್ಷಕ್ಕು ಅಧಿಕ ಜನರು ಭಾಗಿಯಾಗಿದ್ರು.ಇನ್ನು ಈ ವಿಸರ್ಜನಾ ಯಾತ್ರೆಗೆ ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ಸಹ ಕಾರ್ಯದರ್ಶಿ ಅಂಬರೀಶ್ ಸಿಂಗ್ ಚಾಲನೆ ನೀಡಿದ್ರು. ಈ ವೇಳೆ ಗಣಪತಿಗೆ ಎಲಿಕಾಫ್ಟರ್ ನಲ್ಲಿ ರಘು ಆಚಾರ್ ರವರು ಸುರಿಸಿದ ಪುಷ್ಪಾರ್ಚನೆ ನೆರೆದಿದ್ದವರ ಗಮನ ಸೆಳೆಯಿತು.ಒಟ್ಟಾರೆ ಗಣಪತಿ ಪ್ರತಿಷ್ಠಾಪನೆ ದಿನದಿಂದಲೂ ಎಲ್ಲರ ಗಮನ ಸೆಳೆದಿದ್ದ ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಸರ್ಜನೆ ಇಂದು ಬೃಹತ್ ಶೋಭಾಯಾತ್ರೆ ಮೂಲಕ ನೆರೆವೇರಿತು..
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
