ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ದಿನ, ಕ.ಕ.ವಿಮೋಚನಾ ದಿನ -ನಾಡಗೌಡ…!!!

ನಿಜಾಮರ ಆಳ್ವಿಕೆಯಿಂದ ಬಿಡುಗಡೆ ಹೊಂದಿದ ದಿನ, ಕ.ಕ.ವಿಮೋಚನಾ ದಿನ -ನಾಡಗೌಡ.

ಸಿಂಧನೂರು : ಸ.17.ದೇಶಕ್ಕೆ ಆಗಸ್ಟ್ 15, 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದು 1948 ಸೆಪ್ಟೆಂಬರ್ 17 ರಂದು ಆ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ನಗರದ ಮಿನಿ ವಿಧಾನಸೌಧ ದ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯಗೊಂಡ ನಂತರ ಹೈದರಾಬಾದ್ ನಿಜಾಮ ಭಾರತಕ್ಕೆ ಒಳಪಡುವದಕ್ಕೆ ವಿರೋದಿಸಿದ್ದ ಮಹಾರಾಷ್ಟ್ರ, ಆಗಿನ ಆಂಧ್ರಪ್ರದೇಶ, ಕರ್ನಾಟಕದ ಏಳು ಜಿಲ್ಲೆಗಳ ಹೈದ್ರಾಬಾದ್ ನಿಜಾಮನ ವಶದಲ್ಲಿ ಇದ್ದವು. ರಜಾಕರ ಆಳ್ವಿಕೆ ತುಂಬಾನೇ ಜಾಸ್ತಿ ಯಾಗಿತ್ತು.ಗಾಂಧೀಜಿಯವರು ಅಹಿಂಸೆ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಆದರೆ ಹೈದ್ರಾಬಾದ್ ಕರ್ನಾಟಕಕ್ಕೆ ಅಂದಿನ ಗೃಹಮಂತ್ರಿ ಹಾಗೂ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾದ ಸರ್ದಾರ್ ವಲ್ಲಭಾಯಿ ಪಟೇಲರು ಮಿಲಿಟರಿ ಸಹಾಯದಿಂದ ನಿಜಾಮನ ಸೈನ್ಯವನ್ನು ಸದೆಬಡಿದು ಅನೇಕರ ಸಾವು ನೋವುಗಳ ಮದ್ಯೆ ಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದಿದ್ದೇವೆ. ಅನೇಕರ ಹೋರಾಟ, ತ್ಯಾಗದ ಫಲವಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ನಿಜಾಮರ ಆಡಳಿತದಿಂದ ಸೆಪ್ಟೆಂಬರ್ 17 ಮುಕ್ತಿ ಹೊಂದಿದ್ದೇವೆ ಏಳು ಜಿಲ್ಲೆಗಳಲ್ಲಿ ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಬಾಗ್ಯ ಒದಗಿಬಂದಿದೆ ಎಂದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ 75ನೇ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ತಾಲೂಕು ದಂಡಧಿಕಾರಿ ಅರುಣ್.ಎಚ್ ದೇಸಾಯಿ ಮಾತನಾಡಿ ಭಾರತ ಒಕ್ಕೂಟ ವ್ಯವಸ್ಥೆ ಯನ್ನು ಒಪ್ಪದ ಅಂದಿನ ಹೈದರಾಬಾದ್ ನಿಜಾಮ ನು ಕರ್ನಾಟಕದ 7 ಜೆಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಮುಗ್ದ ಜನರ ಮೇಲೆ ದಾಳಿ ಮಾಡಿ ರೈತ ವಿರೋಧಿ, ಕಂದಾಯ ವಿರೋಧಿ, ಚಟುವಟಿಕೆಳನ್ನು ಮಾಡುತ್ತಿದ್ದನು. 1948ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರು ಆಪರೇಷನ್ ಮೂಲಕ 40ಸಾವಿರ ಸೈನಿಕರ ಪ್ರಾಣ ಬಲಿದಾನದಿಂದ ಸೆಪ್ಟಂಬರ್ 17ರಂದು ನಮಗೆ ಹೈದ್ರಾಬಾದ್ ಕರ್ನಾಟಕಕ್ಕೆ (ಕಲ್ಯಾಣ ಕರ್ನಾಟಕ ) ಸ್ವಾತಂತ್ರ್ಯ ದೊರೆಯಿತು.ಈ ಹಿಂದೆ ಸೆಪ್ಟೆಂಬರ್ 17 ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿತ್ತು.2002 ರಲ್ಲಿ ಕರ್ನಾಟಕ ಸರ್ಕಾರ ಕಲ್ಯಾಣ ಕರ್ನಾಟಕ ಅಂತಾ ಮರು ನಾಮಕರಣ ಮಾಡಿ ಕಲ್ಯಾಣ ಕರ್ನಾಟಕ ಉತ್ಸವ ಎಂದು ಆಚರಿಸುತ್ತಿದ್ದೇವೆ
ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್.ದೊಡ್ಡ ಬಸವರಾಜ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಧ್ವಾಚಾರ್ಯ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರ, ಡಿವಾಯ್ಎಸ್ಪಿ ವೆಂಕಟಪ್ಪ ನಾಯಕ, ತಾ.ಪಂ.ಇ ಓ ಲಕ್ಷ್ಮಿದೇವಿ, ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸಿಪಿಐ ರವಿಕುಮಾರ, ಬಿಇಓ ಶರಣಪ್ಪ ವಟಗಲ್, ಶಿವಮಾನಪ್ಪ, ವಿಜಯ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆ ಮುಖಂಡರುಗಳು ಸೇರಿದಂತೆ ಇತರರು ಭಾಗವಹಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend