ಕಾನೂನು ಅರಿವು-ನೆರವು ಕಾರ್ಯಕ್ರಮ.
ಕೂಡ್ಲಿಗಿ:ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೇಹದಲ್ಲಿ ದುಷ್ಪರಿಣಾಮಗಳು ಸಾಕಷ್ಟು ಬೀರಲಿವೆ. ಕಾರಣ ಮಾದಕ ವಸ್ತುಗಳಿಂದ ಜನರು ದೂರವಿರಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಕೆ.ನಾಗೇಶ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಮ ವಕೀಲರ ಸಂಘ ಮತ್ತು ವಕೀಲರ ಸಂಘ ಹಾಗೂ ಸಪಪೂ ಕಾಲೇಜು ಕೂಡ್ಲಿಗಿ ಸಹಯೋಗದಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮದಲ್ಲಿ ಮಾದಕ ವ್ಯಸನ ಮತ್ತು ಔಷಧಿಗಳ ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ನಡೆದ ಒಂದು ದಿನದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತುಗಳ ಮಾರಟ ಕಾನೂನು ಅನ್ವಯ ನಡೆಯಬೇಕಿದೆ. ಪ್ರಸ್ತುತ ಯಾರೊಬ್ಬರು ಕಾನೂನಾತ್ಮಕವಾಗಿ ಅವುಗಳನ್ನು ಮಾರಾಟ ಮಾಡುವದಿಲ್ಲ. ಅವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮಾದಕ ವಸ್ತುಗಳ ಮಾರಾಟದ ಮೇಲೆ ನಿಗಾವಹಿಸಿ ಅಕ್ರಮ ಕಂಡು ಬಂದಲ್ಲಿ ಕಠಿಣ ಕ್ರಮಕೈಗೊಳ್ಳುವ ಅಗತ್ಯವಿದೆ.
ಇನ್ನೂ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ತನ್ನ ಜೀವ ಕಳೆದುಕೊಳ್ಳವುದಲ್ಲದೆ, ಮನೆಯವರ ಜೀವಕ್ಕು ಕುತ್ತು ತರುತ್ತಾನೆ. ಉದಾಹರಣೆಗೆ ಮನೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಎದುರೇ ಸಿಗರೇಟ್, ಬೀಡಿ ಸೇವನೆ ಮಾಡುತ್ತಾರೆ. ಅದರಿಂದ ತನ್ನ ಜೀವ ಸುಟ್ಟುಕೊಳ್ಳವದಲ್ಲದೆ, ಸಿಗರೇಟ್, ಬೀಡಿ ಹೊಗೆಯಿಂದ ಮನೆಯಲ್ಲಿದ್ದ ಕುಟುಂಬದವರ ಮೇಲೂ ಅಗಾಧ ಪರಿಣಾಮ ಬೀರಲಿದೆ.
ಪ್ಯಾನಲ್ ವಕೀಲರಾದ ಮೆಹಬೂಬ್ ಭಾಷ ಉಪನ್ಯಾಸದ ಮೂಲಕ ಸಾಕಷ್ಟು ಪ್ರಕರಣಗಳಲ್ಲಿ ಮಕ್ಕಳಿಗೆ, ತಾಯಂದಿರಿಗೆ ಕ್ಯಾನ್ಸರ್ ಬಂದಿರುವದನ್ನು ನಾವು ನೋಡುತ್ತೇವೆ. ಹೀಗಾಗಿ ಒಬ್ಬ ಮಾದಕ ವ್ಯಸನಿ ತಾನು ಸಾಯುವದಲ್ಲದೆ ಮನೆಯವರಿಗೂ ಅದರ ರೋಗವನ್ನು ಹರಿಬಿಟ್ಟು ಜೀವನವಿಡಿ ಸಾವು ನೋವಿನ ಮಧ್ಯೆ ಒದ್ದಾಡುವಂತೆ ಮಾಡುತ್ತಾನೆ. ಕಾರಣ ಮಾದಕ ವ್ಯಸನಿಗಳು ಅವುಗಳಿಂದ ದೂರ ಉಳಿಯಲು ಪ್ರಸಕ್ತ ಹಲವಾರು ಉತ್ತಮ ಚಿಕಿತ್ಸೆಗಳಿವೆ. ಎಂದು ಸಲಹೆ ನೀಡಿದರು.
ಮದ್ಯ, ತಂಬಾಕು,ಡ್ರಗ್ಸ್,ಗಾಂಜ,ಅಫೀಮು ಮತ್ತಿತರವು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಡಾ.ಟಿ.ಕೋತ್ಲಮ್ಮ ಅಧ್ಯಕ್ಷತೆವಹಿಸಿ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ದೂರವಿರುವುದು ಲೇಸು. ಮಾದಕ ಸೇವನೆ ಚಟ ಇರದಿದ್ದರೇ, ಉತ್ತಮ ಆರೋಗ್ಯ ಹೊಂದಿರಲು ಸಾಧ್ಯವಿದೆ. ಉತ್ತಮ ಆರೋಗ್ಯ ಹೊಂದಿದ್ದಲ್ಲಿ ಮಾತ್ರ ಬದುಕಿನಲ್ಲಿ ಎಂತಹ ಸಮಸ್ಯೆಗಳನ್ನು ಎದುರಿಸಬಹುದು. ಮಾನಸಿಕವಾಗಿ ಸದೃಢತೆ ಇದ್ದಲ್ಲಿ ಎಂತಹ ಸವಾಲ್‌ಗಳನ್ನು ಸ್ವೀಕರಿಸಿ ಗೆಲ್ಲಬಹುದು ಎಂದರು.
ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಹೋನ್ನುರಪ್ಪ, ಅಪಾರ ಸರ್ಕಾರಿ ವಕೀಲರು,ಶಿವಪ್ರಸಾದ ವಿರೂಪಾಕ್ಷಪ್ಪ ವಕೀಲರು ಸ.ಪ.ಪೂಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
