ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ ಯುವ ಪಡೆ…!!!

ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದ ಯುವ ಪಡೆ.

ಸಿಂಧನೂರು : ಜುಲೈ.25. ನಗರದ ಗಂಗಾವತಿ ರಸ್ತೆಯ ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕಿನ ಅಲಬನೂರು ಗ್ರಾಮದ ಯುವಕರು ಹಾಗೂ ಹಿರಿಯರು, ಶಿವನಗೌಡ ಗೊರೆಬಾಳ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಹನುಮೇಶ್ ಸಾಲಗುಂದ ಗ್ರಾಮೀಣ ಮಂಡಲ ಅಧ್ಯಕ್ಷರು,ಇವರ ಸಮ್ಮುಖದಲ್ಲಿ ಹೆಗಲು ಪಟ್ಟಿ ಹಾಕುವುದರ ಮೂಲಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷ ಸಿದ್ಧಾಂತ ಮತ್ತು ಸಾಧನೆಯ ತಳಹದಿಯಲ್ಲಿ ಬೆಳೆದು ಬಂದ ಪಕ್ಷವಾಗಿದ್ದು,ಯುವಕರಿಗೆ ಹೆಚ್ಚು ಆದ್ಯತೆ ನೀಡುವ ಪಕ್ಷವಾಗಿದ್ದು,ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ, ಹೊಸಬರ ಸೇರ್ಪಡೆಯಿಂದ ಪಕ್ಷ ಇನ್ನಷ್ಟು ಸದೃಢವಾಗುವುದಲ್ಲದೆ, ದೇಶದ ಏಳಿಗೆ ಸಾಧ್ಯ. ಒಬ್ಬ ಸಾಮಾನ್ಯ ಕಾರ್ಯಕರ್ತರು ಕೂಡಾ ಯಾವುದೇ ಉನ್ನತ ಹುದ್ದೆಗೆರಬಹುದು. ಎಂಬುದಕ್ಕೆ ಕೆಳಸಮುದಾಯದ ಸಾಮನ್ಯ ಮಹಿಳೆ ಇಂದು ರಾಷ್ಟಪತಿಯಾಗಿದ್ದಾಳೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ಶಿವನಗೌಡ ಗೋರೆಬಾಳ ಹೇಳಿದರು.

ನಂತರ ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲುಗುಂದಾ ಮಾತನಾಡಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದ ನನ್ನನ್ನು ಯುವ ಕಾರ್ಯಕರ್ತನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ ಪಕ್ಷದ ಗ್ರಾಮೀಣ ಮಂಡಲ ಅಧ್ಯಕ್ಷನಾಗಿ ಬೆಳೆಯಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸಂಘಟಿಸಲು ಶ್ರಮಿಸೋಣ ಎಂದರು.

ಶಿವಮೂರ್ತಿಸ್ವಾಮಿ, ಚನ್ನಬಸವ, ಅಮರೇಶ, ಶಂಕರಗೌಡ, ಬಸವರಾಜ, ಆಕಾಶ, ಜೀನಾವತಾರ, ಬಿಂದಿರಾಜ, ಪ್ರವೀಣ, ಶ್ರೀಕಂಠಯ್ಯ, ರಾಹುಲ್, ಅಮರೇಶ ಕುಂಬಾರ ಇನ್ನೂ ಮುಂತಾದವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡವರು.

ಈ ಸಂದರ್ಭದಲ್ಲಿ ಮಮತಾ ಹಿರೇಮಠ್, ನೀಲಮ್ಮ ಅಲಬನೂರು,ಸಂಗನಗೌಡ ದಳಪತಿ ದೇವರಗುಡಿ, ಪಂಪಾಪತಿ ನಾಯಕ,ನಾಗರಾಜ್ ದೇವರಗುಡಿ, ನಾಗರಾಜಗೌಡ ಸಿಂಗಾಪುರ, ಶಿವಮೂರ್ತಿ ಅಲಬನೂರು, ಮುಂತಾದ ಕಾರ್ಯಕರ್ತರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend