60ವರ್ಷದ ಅಜ್ಜಿಗೆ ದುಡ್ಡು ಕೊಡದೆ ಯಾಮಾರಿಸಿದ ಬಸ್ ಕಂಡಕ್ಟರ್….!!!

60ವರ್ಷದ ಅಜ್ಜಿಗೆ ದುಡ್ಡು ಕೊಡದೆ ಯಾಮಾರಿಸಿದ ಬಸ್ ಕಂಡಕ್ಟರ್.

ಸಿಂಧನೂರು : ಜುಲೈ 23 ಇಂದು ಸಂಜೆ 6 ಘಂಟೆ ಸುಮಾರಿಗೆ ಶಿವಮ್ಮ ನಾಗನಕಲ್ಲ ಎಂಬ ವೃದ್ಧೆಗೆ ಬಸ್ ಕಂಡಕ್ಟರ್ ಬಾಬರ್ ಯಾಮರಿಸಿದ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಶಿವಮ್ಮ ನಾಗನಕಲ್ಲ ಎಂಬ ವೃದ್ಧೆಯು ಕುಷ್ಟಗಿಯಿಂದ ಸಿಂಧನೂರಿಗೆ ಬರುವ ಬಸ್ ಸಂಖ್ಯೆ ಕೆ ಎ 37, ಎಫ್ 0557 ಬಸ್ ನಲ್ಲಿ ತುರ್ವಿಹಾಳ್ ದಿಂದ ಸಿಂಧನೂರಿಗೆ ಬರುತಿದ್ದಳು, ಆ ವೃದ್ಧೆಗೆ ಸ್ವಲ್ಪ ಕಿವಿ ಕೇಳುವುದಿಲ್ಲ, ಸ್ವಲ್ಪ ದೃಷ್ಟಿ ದೋಷ ಇದೆ ಎಂದು ಆ ಅಜ್ಜಿಯ ಮಗ ನಂಬಿಕೆಯಿಂದ ಬಸ್ ಕಂಡಕ್ಟರ್ ಕೈಯಲ್ಲಿ 500 ರೂಪಾಯಿ ಹಣವನ್ನು ನೀಡಿ ಅಜ್ಜಿಯು ಸೀನಿಯರ್ ಸಿಟಿಜೆನ್ ಗುರುತಿನ ಚೀಟಿ ಇರುವದರಿಂದ 21 ರೂಪಾಯಿ ಟೆಕೆಟ್ ಪಡೆದು ಅಜ್ಜಿಯ ಕೈಯಲ್ಲಿ ಕೊಟ್ಟು ಉಳಿದ ಹಣವನ್ನು ಬಸ್ ನಿಂದ ಇಳಿದ ಮೇಲೆ ಕೊಡುವಂತೆ ಕಂಡಕ್ಟರ್ ಬಾಬುರ್ ಹೇಳಿರುತ್ತಾನೆ.

ಅಜ್ಜಿಯು ಬಸ್ ನಿಂದ ಇಳಿದ ಮೇಲೆ ನನ್ನ ಮಗ ಕೊಟ್ಟಿರುವ 500 ರೂಪಾಯಲ್ಲಿ ಉಳಿದ ಹಣವನ್ನು ಕೊಡುವಂತೆ ಕೇಳಿಕೊಂಡಾಗ ನೀನು ನಮ್ಮ ಬಸ್ಸಿನಲ್ಲಿ ಬಂದಿಲ್ಲ, ಯಾವ ಬಸ್ಸಿನಲ್ಲಿ ಬಂದಿದೀಯೋ ಅದೇ ಬಸ್ಸಿನಲ್ಲಿ ಹೋಗಿ ಕೇಳು ನನನ್ನು ಯಾಕೆ ಕೇಳುತಿಯಾ ಎಂದು ಅಜ್ಜಿಯನ್ನು ಯಾಮಾರಿಸಿ ಹಣವನ್ನು ಲಾಪಟಾಯಿಸಲು ಪ್ರಯತ್ನಿಸಿದನು.

ಇದನ್ನು ನೋಡಿದ ಸಾರ್ವಜನಿಕರು ಅಜ್ಜಿಯ ಕೈಯಲಿರುವ ಬಸ್ ಟಿಕೆಟ್ ಅನ್ನು ನೋಡಿ ಅದರಲ್ಲಿ ಇರುವ ಬಸ್ ನಂಬರ್ ನಿಮ್ಮದೇ ಇದೆ, ಯಾಕೆ ಮೋಸ ಮಾಡುತ್ತೀರಾ ಎಂದು ಕಂಡಕ್ಟರಿಗೆ ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಇಲ್ಲ ನನಗೆ ನೆನಪು ಇಲ್ಲ ಎಂದು ಚಡಪಡಿಸಿ, ಗಾಬರಿಗೊಂಡು ಉಳಿದ ಹಣವನ್ನು ಅಜ್ಜಿಗೆ ವಾಪಾಸ್ ನೀಡಿದನು.

ಇಂಥ ಅನೇಕ ಘಟನೆಗಳು ಬಸ್ ನಿಲ್ದಾಣದಲ್ಲಿ ಸುಮಾರು ಸಾರಿ ನಡೆದರೂ ನಮಗೂ ಇದಕ್ಕೂ ಏನೂ ಸಂಬಂಧ ವಿಲ್ಲವಂತೆ ನಿಲ್ದಾಣದ ಕಂಟ್ರೋಲರ್ ಮುಖ ಪ್ರೇಕ್ಷಕರಾಗಿ ಕುಳಿತು ನೋಡುತ್ತಿರುತ್ತಾರೆ.
ಇವರಿಗೇನಾದರೂ ಪಾಲು ಇದಿಯೋ ? ಗೊತ್ತಿಲ್ಲ ! ಇನ್ನೂ ಮುಂದೆಯಾದರೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಯಿಸಿ ಸಾರ್ವಜನಿಕರು ಯಾವುದೇ ಗಲಾಟೆ ನಡೆದರೂ ಬಗೆಹರಿಸುವಂತ ಕೆಲಸ ಮೇಲಾಧಿಕಾರಿಗಳು ಮಾಡಬೇಕಾಗಿದೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend