ಸಂಗೀತದ ಅಭಿರುಚಿಯಿಂದ ಮನೋವಿಕಾಸ -ಅಂಗಡಿ ವೀರೇಶ್.
ಕೂಡ್ಲಿಗಿ :ಸಂಗೀತದ ಅಭಿರುಚಿಯಿಂದ ಮನಸ್ಸು ತಿಳಿಗೊಳ್ಳುವ ಜೊತೆಗೆ ಮಾನಸಿಕ ಒತ್ತಡಗಳಿಂದ ಸಿಲುಕಿದ ಮನಸ್ಸಿಗೆ ಮುದ ನೀಡಿ ಮನೋವಿಕಾಸಗೊಳಿಸುವ ಶಕ್ತಿ ಸಂಗೀತಕ್ಕಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ ಕೂಡ್ಲಿಗಿ ಘಟಕದ ಅಧ್ಯಕ್ಷರಾದ ಅಂಗಡಿ ವೀರೇಶ್ ನುಡಿದರು.
ಅವರು ಪಟ್ಟಣದ ವಾಸವಿ ವಿಧ್ಯಾ ಸಂಸ್ಥೆಯ ಆವರಣದಲ್ಲಿ ಜುಲೈ 21ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಪಂದನ ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಸಂಸ್ಥೆ ಕೂಡ್ಲಿಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಾಸವಿ ವಿಧ್ಯಾ ಸಂಸ್ಥೆಯ ಅಧ್ಯಕ್ಷರಾದ ಶಶಾಂಕ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಕೇವಲ ಆಟ ಪಾಠಗಳಿಗೆ ಸೀಮಿತರಾಗದೆ ಇಂತಹ ಚಟುವಟಿಕೆಗಳ ಸದುಪಯೋಗಪಡಿಸಿಕೊಳ್ಳಲು ಕ್ರಿಯಾಶೀಲರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವರಾಜ್ ಪಾಲ್ತುರ್ ಕಾರ್ಯಕ್ರಮ ಉದ್ಘಾಟಿಸಿದರು. ಕೂಡ್ಲಿಗಿಯ ಸಂಗೀತ ಕಲಾವಿದ ಎ, ತಿಂದಪ್ಪ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಅವರಿಗೆ ಶಿವಮೂರ್ತಿ ಆಚಾರ್ ಹಾರ್ಮೋನಿಯಂ, ಚನ್ನವೀರಸ್ವಾಮಿ ಸಾಸಲವಾಡ ಡೋಲಕ್, ಕೂಡ್ಲಿಗಿ ವೆಂಕಟೇಶ್ ತಬಲಾ ಸಾಥ್ ನೀಡಿದರು. ಬಡಿಗೇರ್ ನಾಗರಾಜ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ದೀಪಾ ವಂದಿಸಿದರು.
ಈ ಸಂದರ್ಭದಲ್ಲಿ ಸ್ಪಂದನ ಸಂಸ್ಥೆಯ ಅಧ್ಯಕ್ಷ ಜಿ, ಎಸ್ ಗಿರೀಶ್ ರಂಗ ಕಲಾವಿದ ವಿಭೂತಿ ವೀರಣ್ಣ, ತುಪ್ಪಳ್ಳಿ ಮೂಗಪ್ಪ, ಬಿ, ನರಸಿಂಹಪ್ಪ, ಎಲೆ ನಾಗರಾಜ, ಶಿಕ್ಷಕ ವರ್ಗದವರು, ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ.ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
