ಕೃಷ್ಣೆಯ ಒಡಲಿಗೆ ಕೈ ಹಾಕಿದ ಇಟ್ಟಿಗೆ ದಂಧೆಕೋರರು…!!!

ಕೃಷ್ಣೆಯ ಒಡಲಿಗೆ ಕೈ ಹಾಕಿದ ಇಟ್ಟಿಗೆ ದಂಧೆಕೋರರು

ಉತ್ತರ ಕರ್ನಾಟಕದ ಜೀವ ನದಿ ಲಕ್ಷಾಂತರ ಸಾಗುವಳಿ ಭೂಮಿಗೆ ನೀರುಣಿಸುವ ಕೃಷ್ಣಾ ನದಿ ತಟದ ರಬಕವಿ-ಬನಹಟ್ಟಿ ತಾಲ್ಲೂಕಿನ ಅಸ್ಕಿ ಗ್ರಾಮಕ್ಕೆ ಒಳಪಡುವ ನದಿಯ ದಡದಲ್ಲಿ ಇಟ್ಟಿಗೆ ಬಟ್ಟಿಗಳ ದಂಧೆಕೋರರು ನದಿಯ ಮೇಲ್ಮೈ ದಿಬ್ಬುಗಳಲ್ಲಿನ ಪಲವತ್ತಾದ ಮಣ್ಣುನ್ನು ಮೂರ್ನಾಲ್ಕು ಜೆಸಿಬಿ ಯಂತ್ರ ಮತ್ತು ನೂರಾರು ಟ್ರ್ಯಾಕ್ಟರಗಳಿಂದ ಅಗೆದು ಮಣ್ಣು ಗಣಿಗಾರಿಕೆ ಮಾಡುತ್ತಿದ್ದಾರೆ. ಸ್ಥಳೀಯ ಹತ್ತಾರು ಇಟ್ಟಿಗೆ ಬಟ್ಟಿಗಳಿಗೆ ಪೂರೈಕೆ ಮಾಡಿಕೊಳ್ಳಲು ನೂರಾರು ಎಕರೆ ನದಿ ಪಾತ್ರದ ಪಲವತ್ತತೆ ಭೂಮಿಯನ್ನು ಮನಸೊಯಿಚ್ಚೆ ಅಗೆದು ಮಣ್ಣು ಮೆಲೆತ್ತುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಅಧಿಕಾರಿಗಳ ಗಮನಕ್ಕೆ ಬಂದಿದೆಯೊ ಅಥವಾ ಬಂದಿಲ್ಲ ಎಂಬ ವಿಚಾರ, ಅಷ್ಟೊಂದು ಪ್ರಮಾಣದಲ್ಲಿ ನೂರಾರು ಯಂತ್ರಗಳ ಮೂಲಕ ಹೂಳೆತ್ತುವ ಕಾರ್ಯದ ರೀತಿ ಮಣ್ಣು ಎತ್ತುವ ಕಾರ್ಯ ನಿರಂತರವಾಗಿರುವುದು ಅಧಿಕಾರಿಗಳು ಕಣ್ಣು ಕಾಣುವ ಕುರುಡನಂತೆ ಕೆಲಸ ಮಾಡುತ್ತಿದ್ದಾರೆಯೇ ಎಂಬ ವಿಚಾರ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ತಲೆಯಲ್ಲಿ ಮೂಡುವ ಸಂಗತಿ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೃಷ್ಣೆಯ ದಡದ ಅಪಾರ ಪ್ರಮಾಣದಲ್ಲಿ ಲೂಟಿಯಾಗುತ್ತಿರುವ ಮಣ್ಣುನ್ನು ಸಂರಕ್ಷಿಸಿ ನದಿಯ ಒಡಲನ್ನು ಕಾಪಾಡಬೇಕು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend