ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವರ್ಷಕ್ಕೆ 30 ಲಕ್ಷ ರೂ. ಲಾಭ ಪಡೆಯುತ್ತಿದ್ದೆನೆ – ಮಾವು ಬೆಳೆದ ರೈತ ರಮಣ ಮೂರ್ತಿ.
ವಿಶೇಷ ವರಧಿ.
ಸಿಂಧನೂರು ಮೇ 30: ತಾಲೂಕಿನ ಚನ್ನಳ್ಳಿ ಗ್ರಾಮದ ಗಣೇಶ ಕ್ಯಾಂಪ್ ಒಂದು ಕಾಲದಲ್ಲಿ ಸಾಧಾರಣ ಜೀವನ ಸಾಗಿಸುತ್ತಿದ್ದ ವ್ಯಕ್ತಿ. ಆರಂಭದಲ್ಲಿ ಕೃಷಿ ಕಡೆ ಮುಖ ಮಾಡಿದ ಆ ಬಳಿಕ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಹೌದು ಆರಂಭದಲ್ಲಿ 10 ಎಕರೆ ಜಮೀನಿನಲ್ಲಿ ಮಾವು ಕೃಷಿ ಆರಂಭಿಸಿದ, ಈಗ 16 ಎಕರೆ ವಿಸ್ತಿರ್ಣದಲ್ಲಿ ಮಾವು ಬೆಳೆಯುತ್ತಿದ್ದಾರೆ.
ಮಾವು ಬೆಳೆಗಾರ ಸದ್ಯ ಸಾವಯವ ಪದ್ದತಿಯಲ್ಲಿ ಅತಿಹೆಚ್ಚು ಮಾವು ಬೆಳೆಯುವ ರೈತ ರಮಣ ಮೂರ್ತಿ.
ಮಾವನ್ನ ಸಾವಯವ ಕೃಷಿಯಲ್ಲಿ ಬೆಳೆಯುತ್ತಿದ್ದಾರೆ. ಮಾವಿನ ಗಿಡಗಳ ನೆಡುವಿಕೆಯಿಂದ ಹಿಡಿದು ಮಾವಿನ ಹಣ್ಣಾಗುವವರೆಗೂ ಸಾವಯವ ಪದ್ದತಿಯನ್ನೇ ಅನುಸರಿಸುತ್ತಿದ್ದಾರೆ. ಗಿಡದಲ್ಲಿಯೇ ನೈಸರ್ಗಿಕವಾಗಿ ಮಾವಿನಕಾಯಿ ಹಣ್ಣು ಮಾಡುವುದರಿಂದ ಇವರ ಮಾವು ಕೊಳ್ಳಲು ಜನ ರಾಯಚೂರು, ಬಳ್ಳಾರಿ, ಕೊಪ್ಪಳ, ಇನ್ನಿತರ ಹೊರ ರಾಜ್ಯದಿಂದ ಮುಗಿ ಬೀಳುತ್ತಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಮಾವು ಪ್ರಸಿದ್ಧಿಯಾಗುತ್ತಿದೆ.
ಜೊತೆ ಜೊತೆಗೆ ಆದಾಯ ಸಹ ಹೆಚ್ಚಾಗುತ್ತಿದೆ. ಮಾವು ಜೊತೆಗೆ ನಿಂಬು, ಸಪೋಟ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಅದರಲ್ಲೂ ಸಹ ಆದಾಯ ಗಳಿಸುತ್ತಿದ್ದಾನೆ.ಚನ್ನಳ್ಳಿ ಗ್ರಾಮದ ಮಾವಿಗೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಗ್ರಾಹಕರು ತೋಟಕ್ಕೆ, ಮನೆಗೆ, ಅಂಗಡಿಗೆ ಬಂದು ಖರೀದಿ ಮಾಡುತ್ತಿದ್ದಾರೆ.ಪಂಡೂರು ಮಾವು ಪ್ರಸಿದ್ದಿಯಾಗಿದೆ.
ಇದಲ್ಲದೇ ಕೆಲವು ಕೈಗಾರಿಕೆಗಳಿಗೆ ಸಹ ಮಾವು ಪೂರೈಸುತ್ತಿದ್ದಾನೆ. ಜೊತೆ ಜೊತೆಗೆ ಮಾವಿನ ಹಣ್ಣಿನ ಪಲ್ಪ್ ಸೇರಿದಂತೆ ವಿವಿಧ ಉಪ – ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದಾನೆ. ಆರಂಭದಲ್ಲಿ ಮಾವು ಬೆಳೆಯಲು ಮುಂದಾಗಿದ್ದಾಗ ಅಪಸ್ವರ ಎತ್ತಿದ ಜನರೇ ಸಾಧನೆಯ ಗುಣಗಾನ ಮಾಡುತ್ತಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧ ರೈತರು ಅವರನ್ನ ಮಾದರಿ ರೈತ ಎಂದು ಗುರುತಿಸಿದ್ದುಂಟು.

ಈ ಪತ್ರಿಕೆ ಜೊತೆ ಮಾತನಾಡಿದ ಅವರು ನಾವೂ ಮೂಲತ ಆಂಧ್ರಪ್ರದೇಶದ ದ್ರಾಕ್ಷಾರಾಮ ಜಿಲ್ಲೆಯವರು ನಮ್ಮ ತಂದೆಯ 60 ವರ್ಷಗಳ ಕಾಲದಿಂದಲೂ ನಾವೂ ಇಲ್ಲಿಯೇ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ,ಕಲ್ಲು ಮಿಶ್ರಿತ ಭೂಮಿ ಯಾಗಿದ್ದರಿಂದ ಭತ್ತ ಬೆಳೆಯಲು ಯೋಗ್ಯವಲ್ಲದ ಕಾರಣದಿಂದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಒಟ್ಟು 50 ಎಕರೆಯಲ್ಲಿ 16 ಎಕರೆಯಲ್ಲಿ 40 ತಳಿಯ ಮಾವು ,400 ಗಿಡ ತೆಂಗಿನ ಗಿಡ, 100 ಗಿಡ ನಿಂಬೆಹಣ್ಣು,1ಎಕರೆ ಸಪೋಟ, ಕಬ್ಬು, ಭತ್ತ, ಇನ್ನಿತರ ಬೆಳೆ ಬೆಳೆಯಲಾಗಿದ್ದು, ಒಂದು ವರ್ಷಕ್ಕೆ 10 ಲಕ್ಷ ಖರ್ಚುಮಾಡಿದ ಹಣದ ಜೊತೆಗೆ 20 ಲಕ್ಷ ಲಾಭ ಪಡೆಯುತ್ತಿದ್ದೆನೆ. ಇದರ ಜೊತೆಗೆ 50 ಆಕಳು, 25 ಎಮ್ಮೆ,100 ನಾಟಿಕೋಳಿ, ದಿನಕ್ಕೆ 300 ಲೀಟರ್ ಹಾಲು ಹೈನುಗಾರಿಕೆ ಕೂಡಾ ಮಾಡುತ್ತಿದ್ದೇನೆ.5 ಎಕರೆ ಕೆರೆಯಲ್ಲಿ 4 ತಳಿಯ ಮೀನುಗಾರಿಕೆಗೆ 2 ಲಕ್ಷ ಖರ್ಚುಮಾಡಿ 3 ಲಕ್ಷ ಲಾಭ ಪಡೆಯುತ್ತಿದ್ದೆನೆ 120 ರೂಪಾಯಿ ಕೆಜಿಗೆ ಮಾರಾಟ ಮಾಡುತ್ತಿದ್ದೇನೆ. ಕೆರೆಯಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ನನಗೆ ಒಂದು ತಿಂಗಳ ವೇತನ 1 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದೇನೆ. ಪ್ರತಿ ದಿನ ಮಹಿಳೆ ಮತ್ತು ಪುರುಷರ ಸೇರಿ 20 ಜನ ಕೂಲಿಕಾರರಿಗೆ ಕೆಲಸ ನೀಡಿ ಅವರಿಗೆ ದಿನಕ್ಕೆ 250 ರಿಂದ 500 ರೂಪಾಯಿ ಕೂಲಿ ನೀಡುತ್ತಿದ್ದೇನೆ. ಕೆಲವು ರೈತರು ನನ್ನ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಿಂದ ಟೆಕ್ನಾಲಜಿ ಬಳಸಿಕೊಂಡು ಮತ್ತು ಮಾವು ಕುರಿತಂತೆ ನನಗಿದ್ದ ಶ್ರದ್ಧೆ ನನ್ನ ಈ ಸಾಧನೆಗೆ ಕಾರಣ ಎನ್ನುತ್ತಿದ್ದಾರೆ ಮಾವು ಬೆಳೆದ ರೈತ ರಮಣ ಮೂರ್ತಿ …

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
