ಮೇ 22 ರಂದು ಬಿಜೆಪಿಯ ಪ್ರಕೋಷ್ಠ ಜಿಲ್ಲಾ ಮಟ್ಟದ ಸಮಾವೇಶ…!!!

ಮೇ 22 ರಂದು ಬಿಜೆಪಿಯ ಪ್ರಕೋಷ್ಠ ಜಿಲ್ಲಾ ಮಟ್ಟದ ಸಮಾವೇಶ.

ಸಿಂಧನೂರು : ಬಿಜೆಪಿ ಪ್ರಕೋಷ್ಠಗಳ ಜಿಲ್ಲಾ ಮಟ್ಟದ ಸಮಾವೇಶವು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮೇ 22 ರಂದು ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಶಂಕರರಡ್ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಳಿಸಿದರು.

ನಗರದ ಗಂಗಾವತಿ ರಸ್ತೆಯ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಈ ಒಂದು ಕಾರ್ಯಕ್ರಮದಲ್ಲಿ ಆರ್ಥಿಕ ಪ್ರಕೋಷ್ಟ ರಾಜ್ಯ ಸಂಚಾಲಕರು,ಉದ್ಘಾಟಕರಾಗಿ ಸಂಸದರಾದ ಕರಡಿ ಸಂಗಣ್ಣ, ರಾಜ ಅಮರೇಶ ನಾಯಕ, ಶಾಸಕರಾದ ಶಿವನಗೌಡ ನಾಯಕ್,ಶಿವರಾಜ ಪಾಟೀಲ,ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಪಾಪರಡ್ಡಿ,ಮಾನಪ್ಪ ವಜ್ಜಲ್, ಶಿವನಗೌಡ ಗೋರೆಬಾಳ, ಕೊಲ್ಲಾ ಶೇಷಗಿರಿ ರಾವ್, ಆದಿಮನಿ ವಿರಲಕ್ಷ್ಮಿ, ಮದ್ವರಾಜ್ ಆಚಾರ್ಯ, ಮಂಡಲದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು,24 ಪ್ರಕೋಷ್ಟ ಸಂಚಾಲಕರು 1 ಸಾವಿರ ಕ್ಕೂ ಜವಾಬ್ದಾರಿಯುತ ಪ್ರಕೋಷ್ಟ ಸಂಚಾಲಕರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಉದ್ದೇಶ ನರೇಂದ್ರಮೋದಿ ಯವರ ಆಡಳಿತದಲ್ಲಿ ಅಮೂಲ್ಯ ಬದಲಾವಣೆ ಶಕ್ತಿ ಭಾರತ ವಿಶ್ವದತ್ತ ಮುನ್ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅಭಿವೃದ್ಧಿ ಜನಧನ,ಉಜ್ವಲ ಇನ್ನಿತರ ಯೋಜನೆಗಳನ್ನು ಮನೆ ಮನೆಗೆ ಎಲ್ಲಾ ವರ್ಗದ ಸಮಾಜದವರಿಗೆ ಜನತೆಗೆ ತಲುಪಿಸುವಲ್ಲಿ ಜಿಲ್ಲಾ ಹಾಗೂ ಮಂಡಲ 24 ವಿವಿಧ ಪ್ರಕೋಷ್ಠಗಳ ಸಂಚಾಲಕರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಶರಣಪ್ಪ ನಕ್ಕುಂದಿ ಸಂಘಟನಾತ್ಮಕವಾಗಿ ಹಾಗೂ ಸರಕಾರದ ಅಭಿವೃದ್ಧಿ ವಿಚಾರಗಳನ್ನು ಜನತೆಗೆ ಮನದಟ್ಟು ಮಾಡುವ ಸಲುವಾಗಿ ವಿವಿಧ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಸರಕಾರದ ಸಾಧನೆಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಮನ್ನಣೆ ವ್ಯಕ್ತವಾಗುತ್ತಿದೆ. ಪಕ್ಷ ಸಂಘಟನೆ ಹಾಗೂ ಪ್ರಚಾರದ ಕೆಲಸಕ್ಕೆ ಹೆಗಲು ಕೊಡುವ ಹೊಣೆಗಾರಿಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪಿ. ಎಲ್. ಡಿ. ಬ್ಯಾಂಕು ಅಧ್ಯಕ್ಷ ಎಂ. ದೊಡ್ಡಬಸವರಾಜ, ಮದ್ವರಾಜ ಅಚಾರ್ಯ, ಶಿವನಗೌಡ ಗೋರೆಬಾಳ, ಮುಖಂಡರಾದ ಪರಮೇಶಪ್ಪ, ಹನುಮಂತರಡ್ಡಿ ಹುಡಾ ತಾಲೂಕು ಪ್ರಧಾನ ಕಾರ್ಯದರ್ಶಿ,ರಾಮನಗೌಡ ವಕೀಲರು,ಇನ್ನಿತರರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend