ನಾವುಗಳು ದಲಿತರಾಗಿ ಹುಟ್ಟಿದೆ ತಪ್ಪಾ..?ಮಾಧ್ಯಮ ಮಿತ್ರರ ಜೊತೆ ವಿಠ್ಠಲ ಮೇತ್ರಿ ತನ್ನ ಮನದಾಳದ ಮಾತು…!!!

ನಾವುಗಳು ದಲಿತರಾಗಿ ಹುಟ್ಟಿದೆ ತಪ್ಪಾ..?*ಮಾಧ್ಯಮ ಮಿತ್ರರ ಜೊತೆ ವಿಠ್ಠಲ ಮೇತ್ರಿ ತನ್ನ ಕಷ್ಟಗಳನ್ನು ಕೆಲವು ಗಂಟೆಗಳವರೆಗೆ ಹಂಚಿಕೊಂಡರು…

ಹೋರಾಟದಲ್ಲಿ ಅನುಭವಿಸಿದ ನೋವುಗಳು..

ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ವಿಠ್ಠಲ ಮೇತ್ರಿ ಅವರ ತಂದೆ-ತಾಯಿ ತುಂಬಾನೇ ಕಷ್ಟದಿಂದ ಅವರನ್ನು ಬೆಳೆಸುತ್ತಾರೆ ಐದು ಜನ ಮಕ್ಕಳ 3 ಜನ ಹೆಣ್ಣು ಮಕ್ಕಳು ಮತ್ತು 2 ಜನ ಗಂಡು ಮಕ್ಕಳು ಇರುತ್ತಾರೆ ಬಡತನ ಇದ್ದರೂ ಕೂಡ ಮಕ್ಕಳನ್ನು ಅವರ ತಂದೆ ತಾಯಿ ಕಷ್ಟಪಟ್ಟು ಬೆಳೆಸುತ್ತಾರೆ ಅಷ್ಟರಲ್ಲಿ ವಿಠ್ಠಲ ಮೇತ್ರಿ ಅವರು ಕಾಲೇಜ್ ವ್ಯಾಸಂಗದಲ್ಲಿ ಇರುವಾಗ 2015 ರಲ್ಲಿ ದಲಿತ ಎನ್ನುವ ಕಾರಣಕ್ಕಾಗಿ ನನ್ನ ಕೊನೆಯ ಸಹೋದರನಾದ ಅನಿಲ ಮೇತ್ರಿ ಯನ್ನು ಮಿರ್ಜಿ ಗ್ರಾಮದ ಸವರ್ಣಿಯರು ಸೇರಿಕೊಂಡು ಅನಿಲ ಮೇತ್ರಿ ಯನ್ನು ಕೊಚ್ಚಿ ಕೊಲೆ ಮಾಡುತ್ತಾರೆ ಏನೂ ತಿಳಿಯದ ಮುಗ್ಧ ಬಾಲಕನ ಅನ್ಯಾಯವಾಗಿ ಕೊಲೆ ಮಾಡುತ್ತಾರೆ ಅದೇ ಸಂದರ್ಭದಲ್ಲಿ ವಿಠ್ಠಲ ತನ್ನ ಕಾಲೇಜ್ ಲೈಫ್ ಮುಕ್ತಾಯ ಮಾಡಿ ಸಹೋದರನ ಸಾವಿಗೆ ನ್ಯಾಯ ಸಿಗುವಂತೆ ಹೋರಾಟಕ್ಕೆ ಇಳಿಯುತ್ತಾನೆ ಅನಿಲ ಮೇತ್ರಿ ಸಾವಿನ ಸುದ್ದಿ ತಿಳಿದು ಮುಧೋಳದಲ್ಲಿ ಇರುವ ಎಲ್ಲಾ ದಲಿತ ಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ ಅನಿಲ ಮೇತ್ರಿ ಕೊಲೆಯಾದ ಸುದ್ದಿ ಕರ್ನಾಟಕ ತುಂಬೆಲ್ಲ ಸುದ್ದಿಯಾಗುತ್ತೆ ವಿಠ್ಠಲ ಮೇತ್ರಿ ತನ್ನ ಸಹೋದರನ ಸಾವಿನ ಸುದ್ದಿ ತಿಳಿದ್ದು ತನ್ನ ಕುಟುಂಬಕ್ಕೆ ತುಂಬಲಾರದ ನೋವು ಉಂಟಾ ಆಗುತ್ತೆ ವಿಠ್ಠಲ ಮೇತ್ರಿ ತನ್ನ ತಂದೆ ತಾಯಿಯನ್ನು ಕರೆದುಕೊಂಡು ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟಕ್ಕೆ ಇಳಿಯುತ್ತಾನೆ ತನ್ನ ಸಹೋದರನ ಕೊಲೆಮಾಡಿದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕಚೇರಿಗಳಿಗೆ ಅಲೆದಾಡುತ್ತಾನೆ ಅಷ್ಟೇ ಅಲ್ಲದೆ ಕೊಲೆಯಾದ ಸಹೋದರನ ಸಾವಿಗೆ ನ್ಯಾಯ ಕೇಳಲು ಹೋದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಚಾವೋ ಮಾಡುತ್ತಾರೆ ಅಷ್ಟ ಅಲ್ಲದೇ ಅಧಿಕಾರಗಳನ್ನು ಪ್ರಶ್ನೆ ಮಾಡಿದಾಗ ಕೊಲೆ ಮಾಡಿದ ಆರೋಪಿಗಳ ಪರವಾಗಿ ನಿಂತಿದ್ದರು ನಿವು ನಮ್ಮ ಕುಟುಂಬಕ್ಕೆ ಮೋಸ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾಗ ನನ್ನ ಕುಟುಂಬಕ್ಕೆ ತನಿಖೆಯ ನೆಪದಲ್ಲಿ ವಿಠ್ಠಲನಿಗೆ ಮತ್ತು ನನ್ನ ತಾಯಿ ತಂದೆಗೆ ನಿರಂತರವಾಗಿ ಹಿಂಸೆ ಕೊಡ್ತಾನೆ ಬರುತ್ತಾರೆ ಅಷ್ಟಕ್ಕೆ ಹೆದರದ ವಿಠ್ಠಲ ತನ್ನ ಸಹೋದರನ ಸಾವಿಗೆ ನ್ಯಾಯ ಕ್ಕೋಸ್ಕರ ಹೋರಾಡುತ್ತಿರುವಾಗ ವಿಠ್ಠಲನ ಕುಟುಂಬದ ಮೇಲೆ ಹಲ್ಲೆ ಸಹ ಆಗುತ್ತೆ ನಮ್ಮನ್ನು ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗಳು ವಿಠ್ಠಲನ ಕುಟುಂಬಕ್ಕೆ ಚಿತ್ರಹಿಂಸೆ ಕೂಡ ಕೊಡ್ತಾ ಬರುತ್ತಾರೆ, ಅಷ್ಟೇ ಅಲ್ಲದೆ ವಿಠ್ಠಲ ಮೇತ್ರಿ ಛಲಬಿಡದೆ ಧೈರ್ಯದಿಂದ ಹೋರಾಟಕ್ಕೆ ಇಳಿಯುತ್ತಾನೆ ವಿಠ್ಠಲನ ಕುಟುಂಬದ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸವರ್ಣಿಯರು ಅದೇ ರೀತಿ ಪೊಲೀಸ್ ತನಿಖಾಧಿಕಾರಿಗಳ ವಿರುದ್ಧ ವರ್ಗಾವಣೆ ಯಾಗುವಂತೆ ಪಟ್ಟುಹಿಡಿದು ಹೋರಾಟಕ್ಕೆ ಕುಟುಂಬದ ಸಮೇತ ಬೀದಿಗೆ ಇಳಿಯುತ್ತಾನೆ ಹೋರಾಟಕ್ಕೆ ಜಯ ಸಿಗುತ್ತೆ ನನ್ನ ಸಹೋದರನ ಸಾವಿನ ತನಿಖೆಗಾಗಿ ಹೊಸದಾಗಿ ಪೊಲೀಸ್ ಸಿಓಡಿ ಅಧಿಕಾರಿಗಳಾದ ಸತೀಶ್ ಚಿಟಗುಬ್ಬಿ Dysp ಸರ್ ಅವರನ್ನು ನೇಮಕ ಮಾಡುತ್ತಾರೆ ಹೊಸದಾಗಿ ಬಂದ ಪೋಲೀಸ ಅಧಿಕಾರಿಗಳು ವಿಠ್ಠಲನ ಕುಟುಂಬಕ್ಕೆ ಸಹಾಯ ಮಾಡುವುದರ ಮೂಲಕ ಕುಟುಂಬಕ್ಕೆ ಧೈರ್ಯ ಮತ್ತು ನ್ಯಾಯ ಕೊಡಿಸುವ ಮೂಲಕ ಅವರ ವಿಠ್ಠಲನ ಕುಟುಂಬಕ್ಕೆ ಆಸರೆಯಾಗುತ್ತಾರೆ ತನಿಖೆಯ ಮುಗಿತ್ತೆ ವರ್ಷಗಳ ಆದನಂತರ…
ಮಿರ್ಜಿ ಗ್ರಾಮದಲ್ಲಿ ದಲಿತ ರೇನುವ ಕಾರಣಕ್ಕಾಗಿ ನಿರಂತರವಾಗಿ ವಿಠ್ಠಲ ಕುಟುಂಬದ ಮೇಲೆ ಸವರ್ಣಿಯರು ಶೋಷಣೆ ಚಿತ್ರಹಿಂಸೆ ದೌರ್ಜನ್ಯ ಮಾಡುವುದರ ಮೂಲಕ ವಿಠಲ ಮೇತ್ರಿ ಕುಟುಂಬಕ್ಕೆ ನಿರಂತರವಾಗಿ ಸವರ್ಣೀಯರಿಂದ ದಬ್ಬಾಳಿಕೆಯೇ ನಡೆಯುತ್ತಾನೆ ಬರುತ್ತೆ ಅದೇ ಸಂದರ್ಭದಲ್ಲಿ ವಿಠ್ಠಲ ಮೇತ್ರಿ ತಂದೆಯಾದ ಪರಶುರಾಮ ಮೇತ್ರಿ ಅವರು ಸುಮಾರು ಬಾರಿ ಮಗನ ಭವಿಷ್ಯದ ಕೂರಿತ್ತು ವಿಚಾರ ಮಾಡುತ್ತಿರುವಾಗ ಇರುವ ಒಬ್ಬ ಮಗ ವಿಠ್ಠಲನಿಗೆ ಮಿರ್ಜಿ ಗ್ರಾಮದ ಸವರ್ಣಿಯರು ಏನಾದ್ರೂ ಮಾಡುತ್ತಾರೆ ಎಂದು ತಿಳಿದು ಹೃದಯಾಘಾತದಿಂದ ವಿಠ್ಠಲನ ತಂದೆ ಸಾವಿಗೀಡಾಗುತ್ತಾರೆ ಇದರ ಸುದ್ದಿ ತಿಳಿದು ವಿಠ್ಠಲನಿಗೆ ತುಂಬಾನೇ ನೋವು ಆಗುತ್ತೆ ಒಂದು ಕಡೆ ತಮ್ಮನ ಸಾವಿಗೆ ಗೋಸ್ಕರ ಅಲೆದಾಡುವ ಸಂದರ್ಭದಲ್ಲಿ ತಂದೆಯ ಸಾವು ತಿಳಿದು ಒಂದು ಕ್ಷಣ ಕುಸಿದು ಬಿಡುತ್ತೆನೆ ವಿಠ್ಠಲ ದುಃಖವನ್ನು ನುಂಗಿಕೊಂಡು ಹಿರಿಯ ಮಗನಾಗಿ ಮಾಡಬೇಕಾದ ಕಾರ್ಯವನ್ನು ಕುಟುಂಬಕ್ಕೆ ಧೈರ್ಯ ಹೇಳುವುದರ ಮೂಲಕ ತಂದೆಯ ಅಂತ್ಯಸಂಸ್ಕಾರ ನಡೆಸಿ ಮನೆಗೆ ಬರುತ್ತಾನೆ ಒಂದು ಕ್ಷಣ ಬಿಕ್ಕಿಬಿಕ್ಕಿ ಅತ್ತು ಬಿಡುತ್ತೇನೆ ಕೆಲವು ಸ್ನೇಹಿತರು ಧೈರ್ಯ ತುಂಬುವ ಕೆಲಸ ಮಾಡುತ್ತಾರೆ ಕುಟುಂಬದ ಭವಿಷ್ಯ ವಿಚಾರ ಮಾಡಿದ್ದಾ ಎಷ್ಟೇ ಕಷ್ಟ ಬಂದರೂ ಧೈರ್ಯದಿಂದ ಹೋರಾಡಬೇಕು ಅಂತ ವಿಠ್ಠಲ ತನಗೆ ತಾನೇ ಧೈರ್ಯ ಹೇಳಿಕೊಳ್ಳುತ್ತಾನೆ ಒಂದು ಕಡೆ ಸಹೋದರನ ಸಾವು ಒಂದು ಕಡೆ ನೋಡಿದರೆ ತಂದೆ ಸಾವು ಮನೆಯಲ್ಲಿ ಕಿತ್ತು ತಿನ್ನುವ ಬಡತನ ಕುಟುಂಬ ಜೀವನ ನಡೆಸುವುದು ಕಷ್ಟ ಎನಿಸಿತ್ತು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರುತ್ತೆದೆ ಎಷ್ಟೇ ಕಷ್ಟ ಆದ್ರೂ ಧೈರ್ಯ ಕಳೆದುಕೊಳ್ಳದೆ ವಿಠ್ಠಲ ಕೊನೆಗೂ ತನ್ನ ಸಹೋದರನ ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಪಟ್ಟುಹಿಡಿದು ನಿರಂತರವಾಗಿ ಹೋರಾಟ ನಡೆಸುತ್ತಾನೆ..

2019 ರಲ್ಲಿ ಮಿರ್ಜಿ ಗ್ರಾಮದಲ್ಲಿ ದಲಿತರಿಗೆ ಕಟಿಂಗ್ ಮಾಡಲ್ಲ ಏಕೆ ಎಂದು ಪ್ರಶ್ನೆ ಮಾಡಿದಾಗ ಊರಿನ ಜನರಿಂದ ಹಲ್ಲೆ ಕೂಡ ಆಗುತ್ತೆ ಕಟಿಂಗ್ ಅಂಗಡಿಯ ವಿಷಯ ಕುರಿತು ತಾಲ್ಲೂಕಿನಲ್ಲಿ ದೊಡ್ಡ ಚರ್ಚೆ ಆಗುತ್ತೆ ಅಷ್ಟೇ ಆಗುವುದರ ಅಷ್ಟರಲ್ಲಿ 2019ರಲ್ಲಿ ಘಟಪ್ರಭಾ ನೀರಿನ ಪ್ರವಾಹಕ್ಕೆ ಇಡೀ ಊರಿಗೆ ಊರೇ ನೀರು ಪಾಲಾಗುತ್ತೆ ಅವಾಗ ನನ್ನ ಕುಟುಂಬ ಸಹ ಬೀದಿಗೆ ಬರುತ್ತೆ ಅಷ್ಟೇ ಅಲ್ಲದೆ ಪ್ರವಾಹದಲ್ಲಿ ಹಾನಿಗೊಳಗಾದ ಮನೆಗಳ ಪರಿಹಾರಕ್ಕೆ ಕೇಳಲು ಹೋದ ಸಂದರ್ಭದಲ್ಲಿ ಪ್ರಭಾವ ರಾಜಕಾರಣಿಗಳನ್ನು ಪ್ರಶ್ನೆ ಮಾಡಿದಾಗ ನನ್ನ ಮೇಲೆ ಸುಳ್ಳು ಪಿರ್ಯಾದಿ ಕೊಟ್ಟು ಮುಧೋಳ ಪೊಲೀಸ್ ಠಾಣೆಗೆ ಕರೆದುಕೊಂಡು ಪ್ರವಾಹದ ಕುರಿತು ದ್ವನಿ ಎತ್ತದಂತೆ ಅಧಿಕಾರಿಗಳು ವಾರ್ನ್ ಮಾಡುತ್ತಾರೆ ಘಟಪ್ರಭಾ ನಂದಿ ನೀರಿನ ಪ್ರವಾಹದಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದಾಗ ಎಲ್ಲಾ ರೀತಿ ವಿಠ್ಠಲನಿಗೆ ಕಷ್ಟಗಳನ್ನು ತಂದು ಬಿಡುತ್ತಾರೆ ಅಷ್ಟಕ್ಕೆ ಸುಮ್ಮನಾಗದೆ ನಾನು ಹಾನಿಗೊಳಗಾದ ಮನೆಗಳನ್ನು ಪರಿಹಾರ ಕೇಳಲು ಹೋದಗ ರಾಜಕೀಯ ಪ್ರಭಾವ ನಾಯಕ ಅವಮಾನ ಮಾಡುತ್ತಾರೆ ಅವಮಾನವನ್ನು ಚಾಲೆಂಜ್ ಮಾಡಿ ಹೋರಾಟ ಮಾಡುವುದರ ಮೂಲಕ ಪ್ರಭಾವಿ ನಾಯಕರ ಮನೆ ಮುತ್ತಿಗೆ ಹಾಕುವ ಸಂದರ್ಭ ಎದುರಾಗುತ್ತದೆ ಅಷ್ಟೇ ಅಲ್ಲದೆ ಹೋರಾಟದ ಮೂಲಕ ಜಿಲ್ಲಾ ಕಚೇರಿ ಸಹ ಮುತ್ತಿಗೆ ಹಾಕುವ ಸಂದರ್ಭ ಸಹ ಎದುರಾಗುತ್ತೆ ಅದಾದ ನಂತರ ಊರಲ್ಲಿರುವ ಸವರ್ಣಿಯರು ಸೇರಿಕೊಂಡು ಒಂದು ಕುಟುಂಬದ ಮೇಲೆ ಹಲ್ಲೆ ಮಾಡುವ ಅದೇ ಸಂದರ್ಭದಲ್ಲಿ ಅದನ್ನು ಪ್ರಶ್ನೆ ಮಾಡಿದಾಗ ಪ್ರಭಾವಿ ರಾಜಕೀಯ ವ್ಯಕ್ತಿಯೊಬ್ಬರು ಸುಮೋಟೋ ಕೇಸ್ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ ಕೆಲಸಮಾಡತ್ತಾರೆ ಅಷ್ಟೇ ಅಲ್ಲದೆ ಊರಲ್ಲಿ ಯಾವುದೇ ತರ ಜಗಳ ಹಲ್ಲೆ ಆಗಿಲ್ಲ ಎಂದು ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿ ವಿಠ್ಠಲನನ್ನು 14 ದಿನ ಕಾರ್ಯಂಗ ಬಂಧನದಲ್ಲಿ ಇಡುವ ಪ್ರಯತ್ನ ಮಾಡುತ್ತಾರೆ. 14 ದಿನಗಳ ನಂತರ ಬಂಧನದಿಂದ ಹೊರಗೆ ಬಂದು ತಕ್ಷಣ ಅಷ್ಟಕ್ಕೆ ಧೈರ್ಯ ಕಳೆದುಕೊಳ್ಳದೆ ಸುಮಾರು ಹೋರಾಟದಲ್ಲಿ ಭಾಗವಹಿಸುತ್ತಾ ಬರುತ್ತೇನೆ ಅಷ್ಟೇ ಅಲ್ಲದೆ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ವಿಠ್ಠಲನನ್ನು ಪದೇ ಪದೇ ಮನೆಗೆ ಬಂದು ಪದೇಪದೇ ಪೋಲೀಸರು ಠಾಣೆಗೆ ಕರೆದುಕೊಂಡು ಹೋಗಿ ಮುಂಜಾನೆಯಿಂದ ರಾತ್ರಿವರೆಗೆ ಕೂಡಿಸಿಕೊಂಡು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದರು..
ಅಷ್ಟರಲ್ಲಿ ವಿಠ್ಠಲ ಮೇತ್ರಿ ಬಾಗಲಕೋಟೆ ಎಸ್ಪಿ ಸಾಹೇಬರ ಗಮನಕ್ಕೆ ಸಹ ತರುತ್ತೇನೆ ಅವಾಗ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಸ್ಪಿ ಸಾಹೇಬ್ರ ಮುಂದೆ ಎಲ್ಲಾನು ವಿವರವಾಗಿ ಹೇಳುತ್ತಾ ಹೋಗುತ್ತೇನೆ ಅವಾಗ ನನಗೆ ಎಸ್ಪಿ ಸಾಹೇಬರು ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಕೊಡುತ್ತಾರೆ ಯಾವುದೇ ತರ ತೊಂದರೆ ಆಗಲ್ಲ ಇಷ್ಟಲ್ಲದೆ ನನಗೆ ಹೋರಾಟದ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಅಷ್ಟಮಾನ ತೊಂದರೆ ತೇಜೋವದೆಗಳನ್ನು ಸಹ ಅನುಭವಿಸುತ್ತಾ ಬರುತ್ತೇನೆ..

ಏನೂ ಅರಿಯದ ವಯಸ್ಸಿನಲ್ಲಿ ಇಷ್ಟೊಂದು ಕಷ್ಟ ನೋವುಗಳನ್ನು ಅನುಭವಿಸಿದೆನೆ. ಈ ಸಮಾಜ ಅಸ್ಪೃಶ್ಯತೆ ಅನ್ನೋ ಹೆಸರಿನಲ್ಲಿ ದಿನನಿತ್ಯ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಕೊಲೆ-ಸುಲಿಗೆ ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿ ನಡೆಯುತ್ತಲೇ ಇದೆ ಇದಕ್ಕೆಲ್ಲದಕ್ಕೂ ಒಂದೆ ಪರಿಹಾರ ನಾವುಗಳು ಎಲ್ಲಾರೂ ವಿದ್ಯಾವಂತರಾಗಿ ಸಂಘಟಿಕರಾಗಿ ಹೋರಾಟ ಮಾಡಿದ್ದಾಗ ಮಾತ್ರ ನಮಗೆ ರಕ್ಷಣೆ ಆಗಬಹುದು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend