ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಉದ್ಯೋಗ ನೀಡುವ ಕೆಲಸ ಮಾಡುತ್ತಿವೆ – ಹಂಪನಗೌಡ ಬಾದರ್ಲಿ.
ಸಿಂಧನೂರ : ಮೇ.14 ಖಾಸಗಿ ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿಯ ಒಕ್ಕೂಟ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರಲು ಹೊರಟಿದೆ ಆ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಕರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಆನಂದ ಪಬ್ಲಿಕ್ ಶಾಲೆಯಲ್ಲಿ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳ ಮನಸ್ಸು ಅರಿತುಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು.371 ಜೆ ಕಲಂ ಜಾರಿಯಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ದೊರಕಿವೆ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಮುಂದೆ ಪಾರದರ್ಶಕವಾಗಿ ಉದ್ಯೋಗದಲ್ಲಿ ನೇಮಕಾತಿಯಾಗಬೇಕು ಎಂದರು.
ಸರ್ಕಾರದಿಂದ ಅನುಮತಿ ಪಡೆದುಕೊಂಡು ಖಾಸಗಿ ಶಾಲಾ – ಕಾಲೇಜು ಆಡಳಿತ ಮಂಡಳಿಯ ಒಕ್ಕೂಟ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಮಾದರಿ ಶಾಲಾ ಕಾಲೇಜುಯಾಗಿ ಹೊರಹೊಮ್ಮಬಹುದು. ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯದಲ್ಲಿಯೆ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ ಶಿಕ್ಷಣ ದಿಂದ ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಯನ್ನು ಹೋಗಲಾಡಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಾಂತ ಇಂಥ ಮೇಳಗಳನ್ನು ಮಾಡಲಾಗುತ್ತದೆ ಎಂದರು.

ನಂತರ ಮಾತನಾಡಿದ ಎಂ ದೊಡ್ಡ ಬಸವರಾಜ್ ಸ್ವಾವಲಂಬಿಗಳಾಗಿ ಜೀವಿಸಲು ಬದುಕು ಕಟ್ಟಿಕೊಳ್ಳಲು ಬಂದ್ದಿದ್ದಿರಿ, ಸಮಾಜ ಮತ್ತು ರಾಜ್ಯ ಸುಧಾರಣೆಯಾಗಬೇಕಾದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ.ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಬೇಕಾದ ವೇಳೆಯಲ್ಲಿ ಇದು ನಮ್ಮ ಸಂಸ್ಥೆ ಎಂದು ಬಾವಿಸಿ ನಮ್ಮ ಮಕ್ಕಳು ಎಂದು ಕೆಲಸ ನಿರ್ವಹಿಸಿ ಎಂದು ಹೇಳಿದರು.
ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಯ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಟಿ.ಬಸವರಾಜ ತಾಲೂಕು ಅಧ್ಯಕ್ಷರಾದ ವೈ.ನರೇಂದ್ರನಾಥ, ಗೌರವ ಅಧ್ಯಕ್ಷರಾದ ಮಲ್ಲನಗೌಡ ಕಾನಿಹಾಳ, ಮುಖಂಡರಾದ ದೊಡ್ಡ ಬಸವರಾಜ, ಗೌತಮ ಮಹಕ್ತ ವಿರೇಶ ಅಗ್ನಿ ಸೇರಿದಂತೆ ಉದ್ಯೋಗ ಬಯಸಿ ಬಂದ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
