ಮಹಾಲಿಂಗಪುರ ಪಟ್ಟಣ ಮತ್ತು ಹಳ್ಳಿಗಳನ್ನು ತೇರದಾಳ ತಾಲೂಕಿನಲ್ಲಿ ಸೇರಿಸುವದಿಲ್ಲ ಉಪ ವಿಭಾಗಧಿಕಾರಿ ಭರವಸೆ
ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಸುಮಾರು ಐದು ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಮುಷ್ಕರ ಹೋರಾಟಕ್ಕೆ ಬೇಟಿ ಕೊಟ್ಟು ಮನವಿ ಸ್ವೀಕರಿಸಿ ಮಾತನಾಡಿದ ಜಮಖಂಡಿ ಉಪ ವಿಭಾಗಧಿಕಾರಿಗಳಾದ ಸಿದ್ದು ಹುಲ್ಲೋಳ್ಳಿ ತಕ್ಷಣ ಯಾವುದೆ ಕಾರಣಕ್ಕೂ ಮಹಾಲಿಂಗಪುರ ಮತ್ತು ಸುತ್ತ ಹಳ್ಳಿಗಳನ್ನು ತೇರದಾಳ ತಾಲೂಕಿಗೆ ಸೇರಿಸಲಾಗುವುದಿಲ್ಲ. ಜನರಲ್ಲಿ ಸೃಷ್ಟಿಯಾದ ಈ ಗೊಂದಲವನ್ನು ಸ್ಪಷ್ಟಪಡಿಸಿ ಪ್ರಸ್ತುತ ಈಗಿರುವ ಹಳ್ಳಿ ಮತ್ತು ಮಹಾಲಿಂಗಪುರ ಪಟ್ಟಣ ಯಥಾಸ್ಥಿತಿಯಲ್ಲಿ
ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ಇರಿಸಲಾಗುವುದು ಮತ್ತು ಆಯಾ ಪಟ್ಟಣ ಹಾಗೂ ಗ್ರಾಮಗಳನ್ನು ಅನುಗುಣವಾಗಿ ವಿಂಗಡಿಸಿ ಸಮೀಪಿಸಿದ ತಾಲೂಕುಗಳಿಗೆ ಸೇರಿಸಲಾಗುವುದು ಎಂದು ಹೇಳಿದರು. ರಬಕವಿಬನಹಟ್ಟಿ ತಾಲ್ಲೂಕಿನ ತಹಸಿಲ್ದಾರ
ಎಸ್.ಬಿ.ಇಂಗಳೆ,
ಮಹಾಲಿಂಗಪುರ ಪುರಸಭ ಮುಖ್ಯಾಧಿಕಾರಿ ಎಸ್.ಎಸ್.ಚಿತ್ತರಗಿ ಉಪಸ್ಥತಿಯಲ್ಲಿದ್ದರು..

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
