ಇಟ್ಟಿಗಿ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಸರ್ವರಿಗೂ ಆದರದ ಸ್ವಾಗತ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ದಲ್ಲಿ ದಿನಾಂಕ 18-4-2022ರ ಸೋಮವಾರದಂದು ನಡೆಯುವ ರಥೋತ್ಸವಕ್ಕೆ ಸರ್ವರಿಗೂ ಸ್ವಾಗತ ಕೋರುವವರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮತಿ ಪುಷ್ಪಾ ಶಿವಪ್ಪ ಮಾಳಕ್ಕನವರು ಹಾಗೂ ಉಪಾಧ್ಯಕ್ಷರಾದ ಶ್ರೀ ಬಿ.ಸಿದ್ದಪ್ಪ ಮತ್ತು ಶ್ರೀ ಎಂ ಪ್ರಕಾಶ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇಟ್ಟಿಗಿ. ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು & ಸರ್ವ ಸಿಬ್ಬಂದಿ ವರ್ಗದವರು.. ಕಾರ್ಯಕ್ರಮದ ವಿವರಗಳು ದಿ:16-4-2022ನೇ ಶನಿವಾರ “ಕಳಸಾ ಸ್ಥಾಪನೆ, ದಿ:17-4-2022 ಭಾನುವಾರ” ಉಚ್ಚಯ್ಯ ಮೂರ್ತಿ ಉತ್ಸವ” ದಿ:18-4-2022ನೇ ಸೋಮವಾರ ಶ್ರೀ ಸ್ವಾಮಿಯ ರಥೋತ್ಸವ ಜರುಗುವುದು, ದಿ:19-4-2022ನೇ ಮಂಗಳವಾರ,”ಓಕಳಿ ಕಾರ್ಯಕ್ರಮ ” ದಿ:20-4-2022ನೇ ಬುಧವಾರ ,’ಬೇಟೆಮರ ಕಾರ್ಯಕ್ರಮ “ಗಳು ನಡೆಯುತ್ತವೆ ಕಾರಣ ಸರ್ವರೂ ಆಗಮಿಸಿ ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ನಮ್ಮ ಪತ್ರಿಕೆಯ ಆಶಯ.ರಥೋತ್ಸವದ ಪ್ರಯುಕ್ತ “ಹೇಮರೆಡ್ಡಿ ಮಲ್ಲಮ್ಮ” ಎಂಬ ಭಕ್ತಿ ಪ್ರಧಾನ ಐತಿಹಾಸಿಕ ನಾಟಕ, ವಿಷೇಶವಾಗಿ ಮಹಿಳೆಯರಿಂದಲೇ ಕೆ ಎನ್ ಎಸ್ ಸಿ ಪ್ರೌಢಶಾಲೆ ಮೈದಾನದಲ್ಲಿ ಪ್ರಯೋಗವಾಗುತ್ತಿರುವ, ಮತ್ತು “ನೀತೂ ಮೆಲೋಡಿ ಆರ್ಕೆಸ್ಟ್ರಾ” ಸ್ಥಳ ಸಾರ್ವಜನಿಕ ಆಸ್ಪತ್ರೆ ಹತ್ತಿರ ಕಿಲ್ಲೇದ್ ಏಕಮ್ರಪ್ಪನವರ ಜಾಗದಲ್ಲಿ ರಸ ಮಂಜರಿ ಕಾರ್ಯಕ್ರಮ ನಡೆಯುತ್ತವೆ .ಕಲಾರಸಿಕರಿಗೆ ಈ ಮೂಲಕ ಸ್ವಾಗತ ಕೋರಲಾಗಿದೆ.

ವರದಿ -ಪ್ರಕಾಶ್ ಆಚಾರ್.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
