ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ
ಕಾನಹೊಸಹಳ್ಳಿ ಸಮೀಪ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಶಿವಮೊಗ್ಗದಿಂದ ಹೊಸಪೇಟೆ ಹೋಗುವ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಹುಲಿಕೆರೆ ಗ್ರಾಮದ ಆನಂದ ವಿಹಾರ ಸಾವಯುವ ಅಂಗಡಿ ಹತ್ತಿರ ಹೊಸಹಳ್ಳಿ ಗ್ರಾಮದ ಬಿಜೆಪಿ ಮುಖಂಡರು ಹಾಗೂ ಕಾನಮಾಡಗು ದಾಸೋಹ ಮಠದ ಐ. ಮ. ಡಿ. ಶರಣಾರ್ಯರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಮತ್ತು ಅವರ ಪುತ್ರ ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಅವರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಾನಾಮಡುಗು ದಾಸೋಹ ಮಠದ ಐಮುಡಿ ಶರಣಾರ್ಯರು, ಕೃಷಿ ತಜ್ಞ ವಿಶ್ವೇಶ್ವರ ಸಜ್ಜನ್, ಬಿಜೆಪಿ ಮುಖಂಡರಾದ ಜುಮ್ಮೋಬನಹಳ್ಳಿ ಶರಣಪ್ಪ ಹೊಸಹಳ್ಳಿ ಟಿಪಿ ನಾಗೇಶ್, ಕೋಲಮನಹಳ್ಳಿ ಭೀಮಣ್ಣ, ಓಬಳಾಪುರ ವೀರೇಶ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಕೆಲವು ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕ ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
