ರೈತರ ಹೋರಾಟ ವೇದಿಕೆಗೆ ಬೆಂಕಿ ಇಟ್ಟ ಕಿಡಗೇಡಿಗಳು ದಿಕ್ಕು ತಪ್ಪಿ ದಿಕ್ಕಾಪಾಲಾಗಿ ಓಡಿದ ರನ್ನ ಶುಗರ್ ಕಾರ್ಖಾನೆ ಕಾರ್ಮಿಕರು.

ಕಳೆದ ಒಂದು ವರ್ಷದಿಂದ ಮುಧೋಳ ರನ್ನ ಶುಗರ್ ಸಹಕಾರಿ ಕಾರ್ಖಾನೆ ತಿಮ್ಮಾಪುರ ಬಂದ್ ಆಗಿದ್ದು ಸರಿಯಾಗಿ ಕಬ್ಬಿನ ಬಿಲ್ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಂಬಳಕ್ಕಾಗಿ ಮುಧೋಳ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿ ಏಳೆಂಟು ತಿಂಗಳಿನಿಂದ ಕಾರ್ಖಾನೆ ಪ್ರಾರಂಭಿಸಿ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿ ಸತ್ಯಾಗ್ರಹ ಮಾಡುತ್ತಿದ್ದ ಕಾರ್ಮಿಕರು ಮತ್ತು ರೈತರು ಆದರೆ ನಿನ್ನೆ ಕಲ ಕಿಡಗೇಡಿಗಳು ಸತ್ಯಾಗ್ರಹ ಮಾಡಲು ನಿರ್ಮಿಸಿದ್ದ ತಾತ್ಕಾಲಿಕ ಪೆಂಡಾಲ ವೇದಿಕೆಗೆ ಬೆಂಕಿ ಹಚ್ಚಿ ವಿಕೃತಿ ಮೇರೆದಿದ್ದು ಮಾನವ ಕುಲವೆ ತಲೆ ತಗ್ಗಿಸುವ ಕೃತ್ಯವಾಗಿದೆ ಈ ಘಟನೆಯು ಪೂರ್ವ ನಿಯೋಜಿತ ಎಂದು ಹಲವು ಅನುಮಾನಗಳು ಮುಡುತ್ತಿವೆ ಎಂದು ರೈತ ಸಂಘನೆಗಳು ತನಿಖೆಗೆ ಒತ್ತಾಯಿಸುತ್ತಿವೆ ಮತ್ತು ವೇದಿಕೆ ನಿರ್ಮಾಣ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿವೆ .

ವರದಿ.
ಶಿವಶಂಕರ ಕಡಬಲ್ಲವರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
