ಆಯುಷ್ ಇಲಾಖೆಯ ವಸ್ತು ಪ್ರದರ್ಶನವನ್ನು ಸನ್ಮಾನ್ಯ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಉದ್ಘಾಟಿಸಿದರು…!!!

ಅಂಬೇಡ್ಕರ್ ಜಯಂತಿಯ ಅಂಗವಾಗಿ ವಿಜಯನಗರ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಹೊಸಪೇಟೆಯ ನಗರದಲ್ಲಿ, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸುಜಾತಾ ಪಾಟೀಲ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಆಯುಷ್ ಇಲಾಖೆಯ ವಸ್ತು ಪ್ರದರ್ಶನವನ್ನು ಸನ್ಮಾನ್ಯ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಹಾಗೂ ಅನೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ವಸ್ತುಪ್ರದರ್ಶನದಲ್ಲಿ ಡಾಕ್ಟರ್ ಮುನಿ ವಾಸುದೇವರೆಡ್ಡಿ, ಡಾಕ್ಟರ್ ಗುರುಬಸವರಾಜ್, ಡಾಕ್ಟರ್ ಬಳಗಾನೂರು ಮಂಜುನಾಥ, ಡಾಕ್ಟರ್ ಬಿ ಎಸ್ ಕುಮಾರ್, ಡಾಕ್ಟರ್ ಶಿವಶರಣಯ್ಯ, ಡಾಕ್ಟರ್ ರೂಪ್ ಸಿಂಗ್ ರಾಥೋಡ್ ಮತ್ತು ಆಯುಷ್ ಇಲಾಖೆಯ ಸಿಬ್ಬಂದಿ ವರ್ಗದವರು ಅನುಪಮ ಸೇವೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ರೋಗನಿರೋಧಕ ಶಕ್ತಿ ವರ್ಧಕ ಆಯುಷ್ ಔಷಧಿಗಳನ್ನು ವಿತರಿಸಲಾಯಿತು. ಆಯುಷ್ ಇಲಾಖೆಯ ಸೇವೆಯ ಬಗ್ಗೆ ಜಿಲ್ಲಾಡಳಿತ ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು…

ವರದಿ.ಗಣೇಶ್. ಬಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend