ರಾಜ್ಯ ಮತ್ತು ಕೇಂದ್ರ ಸರ್ಕಾರ ಬೇಲೆ ಏರಿಕೆಯ ವಿರುದ್ಧ ವಿಜಯನಗರ ಜಿಲ್ಲೆಯಲ್ಲಿ
ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿರುದ್ಧ ಬೇಲೆ ಏರಿಕೆ ಖಂಡಿಸಿ “ಅಚ್ಚೆ ದಿನ್ ಕಿ ಸಚ್ಚಾಯಿ” ಎಂಬ ಪ್ರತಿಭಟನೆ ಹಮ್ಮಿಕೊಂಡಿರುವ ಕಾರಣ ಪ್ರತಿಯೊಂದು ದಿನಬಳಕೆಯ ವಸ್ತುಗಳು ದುಬಾರಿ ಬೆಲೆ ಯಾಗಿದ್ದು ಜನರ ಜೀವನ ನಡೆಸಲು ದುಸ್ತರವಾಗಿದೆ “ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವಂತಹ ತೆರಿಗೆ ವಿಪರೀತವಾಗಿದ್ದು ಮೊದಲು ಕಡಿಮೆ ಮಾಡಬೇಕು”ದಿನಬಳಕೆ ವಸ್ತುಗಳು ಆಹಾರ ಬೇಳೆ ಕಾಳುಗಳು, ಎಣ್ಣೆ ವಿಪರೀತ ಬೆಲೆಯಲ್ಲಿ ಬಡವರಿಗೆ ಖರೀದಿ ಕಷ್ಟವಾಗುತ್ತಿದೆ ಅವರಿಗೆ ಸೊಸೈಟಿಗಳ ಮೂಲಕ ಕಡಿಮೆ ಬೆಲೆಯಲ್ಲಿ ಕೊಡುವಂತ ವ್ಯವಸ್ಥೆ ಮಾಡಬೇಕು ” ರೈತರು ಗೊಬ್ಬರ ಖರೀದಿ ಮಾಡಲು ಆಗುತ್ತಿಲ್ಲ ಗೊಬ್ಬರವು ರೈತರಿಗೆ ಉಚಿತವಾಗಿ ಸರಬರಾಜು ಮಾಡಬೇಕು “ಬಸ್ ಟಿಕೆಟ್ ಗಳು ಮತ್ತು ರೈಲ್ವೆ ಟಿಕೆಟ್ ಗಳ ಬೆಲೆ ಗಗನಕ್ಕೇರಿದ್ದು ಶ್ರೀಸಾಮಾನ್ಯ ಮತ್ತು ರೈತರು ಸಂಚಾರ ಮಾಡುವುದು ದುಸ್ತರವಾಗಿದೆ ಈ ಕೂಡಲೇ ಅದರ ಬೆಲೆಗಳು ಕಡಿಮೆ ಮಾಡಬೇಕು ” ಇಂದಿನ ಈ ಕಷ್ಟದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳ ಖರ್ಚು ವೆಚ್ಚ ಸಿಕ್ಕಾಪಟ್ಟೆ ಜಾಸ್ತಿಯಾಗಿದ್ದು ಅಲ್ಲಿಯೂ ಒಂದು ಸುಲಿಗೆ ನಡೆಯುತ್ತಿದೆ ಅದರ ಒಂದು ನಿಯಂತ್ರಣ ಸರ್ಕಾರ ಮಾಡಬೇಕಾಗಿದೆ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸಾ ವ್ಯವಸ್ಥೆ ಮಾಡಬೇಕು “ಭ್ರಷ್ಟಾಚಾರ ಕಡಿಮೆ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಸಿಕ್ಕಾಪಟ್ಟೆ ಭ್ರಷ್ಟಾಚಾರ ಆಗಿರುವುದಕ್ಕೆ ಸುಮಾರು 1996 ಪ್ರಕರಣಗಳು ದಾಖಲಾಗಿದೆ ದೇಶಾದ್ಯಂತ 4 ವರ್ಷಗಳಲ್ಲಿ ಇದರ ನಿಯಂತ್ರಣ ಸರ್ಕಾರ ಮಾಡಬೇಕಾಗಿದೆ ಸರ್ಕಾರಿ ಕಚೇರಿಗಳಲ್ಲಿ ಯಾವೊಂದು ಸೌಲಭ್ಯಗಳು ಕೂಡ ಪ್ರಿಯಾಗಿ ಸಿಗುತ್ತಿಲ್ಲ
ಅಲ್ಲಿ ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ವೃದ್ಧರಿಗೆ ಏನು ಖರೀದಿ ಮಾಡಲು ಜನರ ಬಳಿ ಹಣವಿಲ್ಲ ಮತ್ತು ಸಾಲಗಳ ಸುಳಿಯಲ್ಲಿ ಸಿಲುಕಿ ಅವರ ಜೀವನ ದುಸ್ತರವಾಗಿದೆ ಸರ್ಕಾರಗಳು ಸಾರ್ವಜನಿಕರ ಜೀವನ ಜೊತೆಗೆ ಚೆಲ್ಲಾಟವಾಡುತ್ತಿದೆ ಮತ್ತು ರಾಷ್ಟ್ರಾದ್ಯಂತ ಇಲ್ಲಸಲ್ಲದ ಕೋಮುಗಲಭೆಗಳು ಸೃಷ್ಟಿ ಮಾಡುವ ಕೆಲಸದಲ್ಲಿ ತೊಡಗಿವೆ ಆರ್ಥಿಕ ಅಭಿವೃದ್ಧಿ ಸಿಕ್ಕಾಪಟ್ಟೆ ಹದಗೆಟ್ಟಿದ್ದು ಬಡವರ ಕಾಳಜಿ ಬಗ್ಗೆ ಕಿಂಚಿತ್ತು ಸರ್ಕಾರಕ್ಕೆ ಗಮನವಿಲ್ಲ. ಈ ಎಲ್ಲಾ ಕಾರಣಗಳಿಂದ SDPI ಪಕ್ಷ ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಕೂಡಲೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದು ನಾವು ಆಗ್ರಹಪಡಿಸುತ್ತೇವೆ ಇಲ್ಲವೆಂದರೆ ಇನ್ನು ಮುಂದೆ ಇನ್ನೂ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ.ಎಂದು ಎಸ್ ಡಿಪಿಐ ಪಕ್ಷದ ವತಿಯಿಂದ ಪಕ್ಷದ ಪದಾಧಿಕಾರಿಗಳು ತಿಳಿಸಿದರು .ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಎಸ್ ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷರಾದ ವಲಿಬಾಷ ರವರು ,ಉಪಾಧ್ಯಕ್ಷರಾದ ನಜೀರ್ ಖಾನ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಬೀಬ್ ಉಲ್ಲಾ ರವರು ,ಇರ್ಫಾನ್ ಕಟಗಿ ಜಿಲ್ಲಾ ಕಾರ್ಯದರ್ಶಿ ,ಜಿಲ್ಲಾ ಖಜಾಂಚಿ ಶೋಯಬ್ ,ಈ ಪ್ರತಿಭಟನೆಯ ಪ್ರಮುಖ ರೂವಾರಿಗಳಾದ ರಾಜ್ಯ ಎಸ್ ಡಿಪಿಐ ಕಾರ್ಯಕಾರಣಿ ಸಮಿತಿಯ ಸದಸ್ಯರು ಶ್ರೀ ಪ್ರೊಫೆಸರ್ ಸೈಯದ್ ಗಯಾಸುದ್ದೀನ್ ಪ್ರತಿಭಟನೆಯ ಮುಂದಿನ ದಿನಗಳಲ್ಲಿ ಕಾಣಬೇಕಾದ ಕಾವಿನ ಬಗ್ಗೆ ವಿವರಿಸಿದರು…

ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
