ಜಯ ಕರ್ನಾಟಕ ಸಂಘಟನೆ ವತಿಯಿಂದ ನೂತನ ಗ್ರಾಮ ಪಂಚಾಯತಿ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು…!!!

ಭಾನುವಾರ ಶ್ರೀ ರಾಮನಗರ ಕೋಗಳಿತಾಂಡದಲ್ಲಿ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ವತಿಯಿಂದ ನಡೆದ ಧ್ವಜಸ್ತಂಭದ ಕಟ್ಟೆ ಉದ್ಘಾಟನೆ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೋನಾ ವಾರಿಯರ್ಸ್ ಪತ್ರಕರ್ತರು ಹಾಗೂ ನೂತನ ಗ್ರಾಮ ಪಂಚಾಯತಿ ಸದಸ್ಯರು ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು..ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಕಾರ್ಯಾಧ್ಯಕ್ಷರಾದ ದೇವರಮನಿ ನೀಲಪ್ಪ ಪ್ರಾಸ್ತಾವಿಕ ಮಾತನಾಡಿ ರಾಜ್ಯದಲ್ಲಿ ಸಂಘಟನೆ ಶೋಷಿತರಪರ, ರೈತರಪರ, ವಿದ್ಯಾರ್ಥಿಗಳಪರ, ಕನ್ನಡ ನಾಡು,ನುಡಿ,ಜಲ,ಭಾಷೆ, ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಕೆ.ನೇಮಿರಾಜ್ ನಾಯ್ಕ ರವರು ಸಂಘಟನೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡುವ ಮೂಲಕ ರಾಜ್ಯದಲ್ಲಿ ಉತ್ತಮ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ, ಅದೇ ರೀತಿ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಂದೊಳ್ಳೆ ಕಾರ್ಯಕ್ರಮ ಮಾಡಿ ಸಾಮಾಜಿಕವಾಗಿ ಕಾರ್ಯನಿರ್ವಹಿಸಲು ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ, ಸಂಘಟನೆಯ ಪ್ರತಿಯೊಂದು ಒಳ್ಳೆ ಕಾರ್ಯಕ್ರಮಕ್ಕೂ ಶುಭವಾಗಲಿ ಎಂದು ಹಾರೈಸಿದರು, ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ಡಾ.ತಿಪ್ಪೇಸ್ವಾಮಿ ವೆಂಕಟೇಶರವರು ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಹಾಲು ಕುಡಿದ ವ್ಯಕ್ತಿ ಘರ್ಜಿಸಲೇಬೇಕು, ಘರ್ಜಿಸಿದ ಹೋದರೆ ಅದು ಉಪಯೋಗವೇನು ಸುವುದಿಲ್ಲ ಎಂದರು, ಸಂಘಟನೆಗಳು ಉತ್ತಮವಾಗಿ ಕೆಲಸ ಮಾಡ್ತಾಯಿದೆ, ಇದೇ ರೀತಿ ತಮ್ಮ ಸಾಮಾಜಿಕ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು..
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಶ್ರೀ ಶಿವಪ್ರಕಾಶ್ ಮಹಾರಾಜ್ ದೂಪದಹಳ್ಳಿ ತಾಂಡಾ, ಮಾಜಿ ಪುರಸಭಾ ಸದಸ್ಯರಾದ ಬಾದಾಮಿ ಮುತ್ತಣ್ಣ, ಊರಿನ ಡಾವೋ ಪಿ ಸೋಮ್ಲನಾಯ್ಕ(ಗುಂಡನಾಯ್ಕ) ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಮೇಶ್ ಆನವಟ್ಟಿ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಶ್ರೀ ಕೆ.ನಾಗರಾಜ್ ಗೌಡ ತಾಲೂಕು ಉಪಾಧ್ಯಕ್ಷರಾದ ಎಲ್.ಕೆ.ಯಮನ ನಾಯ್ಕ ಗಚ್ಚಿನಮನೆ, ನಗರ ಘಟಕ ಅಧ್ಯಕ್ಷರಾದ ಸಾಗರ್ ಗೌಡ,ಗ್ರಾಮ ಘಟಕ ಅಧ್ಯಕ್ಷರಾದ ಆರ್.ಪ್ರಕಾಶ್ ನಾಯ್ಕ, ಪ್ರಧಾನ ಕಾರ್ಯದರ್ಶಿಯಾದ ದೇವರಮನಿ ನಿಂಗಪ್ಪ, ನಿಕಟಪೂರ್ವ ಕಾರ್ಯಾಧ್ಯಕ್ಷರಾದ ಎಲ್ ಸಂತೋಷ್ ನಾಯ್ಕ, ಕಾರ್ಯಾದಕ್ಷರಾದ ವಿ ಗೋಪಾಲ ನಾಯ್ಕ, ಕಾರ್ಯಕರ್ತರಾದ ಲಕ್ಕೀರ್ ರಘು,ಜಿ.ತುಳಚ ನಾಯ್ಕ, ಡಿ.ದೇವರಾಜ, ಎಂ.ಸಂತೋಷ್ ನಾಯ್ಕ, ಎಸ್.ಶಿವಕುಮಾರ್ ನಾಯ್ಕ, ಕೆ.ಕೃಷ್ಣನಾಯಕ್, ಪಿ.ಅರುಣ್ ಕುಮಾರ್ ಮುಂತಾದವರಿದ್ದರು…..

ವರದಿ.ಧನಂಜಯ್. ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend