ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು. ಎಂ.ಬಿ ಅಯ್ಯನಹಳ್ಳಿ
ಟಿ. ವಿ. ಎಸ್ ಮೋಟರ್ ಸೈಕಲ್ಲಿಗೆ ಕಾರು ಡಿಕ್ಕಿ .ಟಿ. ವಿ.ಎಸ್.ಮೋಟಾರ್ ಸೈಕಲ್ ಸವಾರ ಸ್ಥಳದಲ್ಲೇ ಸಾವು.
ಎಂ ಬಿ ಅಯ್ಯನಹಳ್ಳಿಗ್ರಾಮದ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಭಸವಾಗಿ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಎಂಬಿ ಅಯ್ಯನಹಳ್ಳಿ ಗ್ರಾಮದ ಪಕ್ಕದ ರಾಷ್ಟ್ರೀಯ ದಾರಿ 50ರಲ್ಲಿ ಜರುಗಿದೆ.
ಎಂಬಿ ಅಯ್ಯನಹಳ್ಳಿ ಗ್ರಾಮದ ಎಂ.ಎಸ್.ಶಿವಪ್ರಸಾದ ಸ್ವಾಮಿ(56) ತಂದೆ ಮಲ್ಲಿಕಾರ್ಜುನಸ್ವಾಮಿ ಈತನು ತನ್ನ ಟಿವಿಎಸ್ ಮೋಟರ್ ಸೈಕಲ್ ನಲ್ಲಿ ರಸ್ತೆಯನ್ನು ದಾಟುತ್ತಿದ್ದಾಗ ಹೊಸಪೇಟೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರು ಟಿವಿಎಸ್ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ, ಟಿವಿಎಸ್ ಮೋಟರ್ ಸೈಕಲ್ ಸವಾರ ಶಿವಪ್ರಸಾದ್ ಸ್ವಾಮಿ ಕಾರಿನ ರಭಸವಾದ ವೇಗಕ್ಕೆ ಸುಮಾರು 20 ಅಡಿ ದೂರ ಹಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಎಂಬಿ ಅಯ್ಯನಹಳ್ಳಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 50 ನ್ನು ಬಂದು ಮಾಡಿ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು. ನಂತರ ಗ್ರಾಮಸ್ಥರು ಮಾತನಾಡಿ ಸುಮಾರು ಬಾರಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳಿಗೂ ಅಧಿಕಾರಿಗಳಿಗೂ ಹಾಗೂ ಈ ಹಿಂದೆ ಇದ್ದ ತಹಸೀಲ್ದಾರರಿಗೂ ಗ್ರಾಮಸ್ಥರು ಸಾರ್ವಜನಿಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಸೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿಮನವರಿಕೆ ಮಾಡಿದ್ದೆವು, ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅಂಡರ್ ಪಾಸ್ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮಸ್ಥರಿಗೆ ಈ ಹಿಂದೆ ಇದ್ದಮಾನ್ಯ ತಹಸೀಲ್ದಾರರು ಹೇಳಿದ್ದರು.ಆದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಸಾರ್ವಜನಿಕರು ರಸ್ತೆಯನ್ನು ದಾಟುವಾಗ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುವ ಸಮಸ್ಯೆ ಬಂದೊದಗಿದೆ ಒಮ್ಮೆ ಹೋದ ಪ್ರಾಣ ಮತ್ತೆ ಮರಳಿ ಬಾರದು ಪ್ರಾಣ ಹೋಗುವುದಕ್ಕಿಂತ ಮುಂಚೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಎಂ.ಬಿ ಅಯ್ಯನಹಳ್ಳಿ ಗ್ರಾಮದ ಪಕ್ಕದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದ ಸಾರ್ವಜನಿಕರಿಗೆ ಪೊಲೀಸರು ಮನವೊಲಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
