ಕೂಡ್ಲಿಗಿ:ತಹಶಿಲ್ದಾರರ ಕಚೇರಿ ಮುಂದೆ ಮೊರಬನಹಳ್ಳಿ ನರೇಗಾ ಕಾರ್ಮಿಕರಿಂದ ಧರಣಿ…!!!

ಕೂಡ್ಲಿಗಿ:ತಹಶಿಲ್ದಾರರ ಕಚೇರಿ ಮುಂದೆ ಮೊರಬನಹಳ್ಳಿ ನರೇಗಾ ಕಾರ್ಮಿಕರಿಂದ ಧರಣಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ,ಮೊರಬನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಬೇಕೆಂದು ಆಗ್ರಹಿಸಿ. ಮೊರಬನಹಳ್ಳಿ ಗ್ರಾಮದ ನೂರಾರು ನರೇಗಾ ಕಾರ್ಮಿಕರು,ತಹಶಿಲ್ದಾರರ ಕಚೇರಿಯ ಮುಂದೆ ಫೆ 23ರಂದು ಬೆಳಿಗ್ಗೆ 9ಗಂಟೆಗೆ ದಿಡೀರ್ ಧರಣಿ ನಡೆಸಿದರು. ಸರ್ಕಾರಿ ಜಮೀನಿನಲ್ಲಿ ನೀಡಿರುವ ಸ್ಥಳದಲ್ಲಿ ಕೆಲಸಮಾಡಲು ಪ್ರಯತ್ನಿಸಿದಾಗ,ತಮಗೆ ಕೆಲವರು ಅಡ್ಡಿಪಡಿಸಿದ್ದಾರೆಂದು ಕಾರ್ಮಿಕರು ದೂರಿದ್ದಾರೆ. ಮೊದಲು ಗ್ರಾಮ ಪಂಚಾಯ್ತಿ ಗೆ ತೆರಳಿ ಪ್ರತಿಭಟಿಸಿದ್ದು ಕೆಲ ಸ್ಥಳೀಯರು ಕೆಲಸ ಮಾಡುವ ಜಾಗ ತಮ್ಮದೆಂದು ಕಾರಣ ಕೆಲಸ ಮಾಡಬಾರದೆಂದು ಅಡ್ಡಿಪಡಿಸಿದ್ದಾರೆಂದು ದೂರಿದ್ದು,ಕೆಲಸ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ ತಮ್ಮ ಮನವಿತನ್ನ ತಹಶಿಲ್ದಾರರಿಗೆ ನೀಡಿದರು.ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ವೀರಣ್ಣ ಮಾತನಾಡಿ ಸಮಸ್ಯೆ ಕೇವಲ ಒಂದು ಗ್ರಾಮಸ್ಥರ ಸಮಸ್ಯೆಯಲ್ಲ,ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನ ಕಾರ್ಮಿಕರ ಸಮಸ್ಯೆಯಾಗಿದೆ.ಕೂಡಲೇ ಬಗೆಹರಿಸಬೇಕೆಂದು ಅವರು ಆಗ್ರಹಿಸಿದರು. ಮನವಿಯನ್ನು ಕಾರ್ಮಿಕರು ತಹಶಿಲ್ದಾರರಾದ ಟಿ.ಜಗದೀಶ ರವರಿಗೆ ನೀಡಿದರು,ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಬಸಣ್ಣ ಇದ್ದರು.ಕಾರ್ಮಿಕರ ಮುಖಂಡರು ಜನಪ್ರತಿನಿಧಿಗಳು.ಮಹಿಳಾ ಕಾರ್ಮಿಕರು ಇದ್ದರು.

ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend