ಕೂಡ್ಲಿಗಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶಾಲಾಕ್ಷಿ ಶಡಕ್ಷರಿ ನೀಡಿದ ಕಾರ್ಯಕ್ರಮದಲ್ಲಿ ಅಲ್ಲಮಪ್ರಭುವಿನ ಆಧ್ಯಾತ್ಮದ ಕೃಷಿ ಕುರಿತು ಅಲ್ಲಮಪ್ರಭುವಿನ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಯಾವುದೇ ಸಾಹಿತ್ಯ ವನ್ನಾಗಲಿ ಮತ್ತು ಇತಿಹಾಸವನ್ನಾಗಲೀ ಮರೆತರೆ ಜೀವನ ಮಸುಕಾಗುತ್ತದೆ ಮುಂದಿನ ಪೀಳಿಗೆ ಹಾಗೂ ಸಮಾಜಕ್ಕೆ ನಷ್ಟವಾಗುತ್ತದೆ ಎಂದು ಶಿಕ್ಷಕ ಬಿ ಹೆಚ್ ಎಂ ಗುರುಮೂರ್ತಿ ಹೇಳಿದರು.
ವಿದ್ವಾನ್ ಬಿ ಎಂ ಗುರುಸಿದ್ದಯ್ಯ ರವರ ದತ್ತಿ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಬಿ ಶಿವಾನಂದ ಮಾತನಾಡಿ ಇಂದಿನ ಗೊಂದಲ ಅಸಮಾನತೆ ಅಶಾಂತಿ ತೊಲಗಲು ಶರಣರ ವಿಚಾರಧಾರೆ ಒಂದೇ ಪರಿಹಾರ ಪ್ರತಿಯೊಬ್ಬರೂ 12ನೇ ಶತಮಾನದ ಶರಣ-ಶರಣೆಯರ ವಚನಗಳನ್ನು ಪ್ರತಿಯೊಬ್ಬರು ವಚನ ಸಾಹಿತ್ಯದ ಅರಿತು ಅದರಂತೆ ನಡೆದರೆ ನಮ್ಮ ನಿಮ್ಮೆಲ್ಲರ ಜೀವನ ಸಾರ್ಥಕವಾಗುತ್ತದೆ ಹೇಳಿದರು.
ಇದೇ ಸಂದರ್ಭದಲ್ಲಿ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಷ. ಬ್ರ. ಪ್ರಶಾಂತ ಸಾಗರ ಶಿವಾಚಾರ್ಯರು ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎನ್. ಎಂ. ರವಿಕುಮಾರ್. ಸಾಹಿತಿ ಬಿಎಂ ಪ್ರಭುದೇವ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ್. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆಎಸ್ ವೀರೇಶ್. ಮಂಜುನಾಥ್. ಕಲಾವಿದರಾದ ತಿಪ್ಪೇಸ್ವಾಮಿ. ಕೊಟ್ರೇಶ್ ಇತರರು ಇದ್ದರು. ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನಂದಿ ಬಸವರಾಜ್. ಕೆಎಸ್ ವಿರೇಶ್ ನಿರ್ವಹಿಸಿದರು.
ಕಾರ್ಯಕ್ರಮದ ಮೊದಲಿಗೆ ನಾಡೋಜ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು..

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend