ಸಚಿವ ಕೆ.ಎಸ್.ಈಶ್ವರಪ್ಪನವರ ಮೇಲೆ ಪ್ರಕರಣ ದಾಖಲಿಸುವಂತೆ ತಾಲೂಕ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಮನವಿ…!!!

ಸಚಿವ ಕೆ.ಎಸ್.ಈಶ್ವರಪ್ಪನವರ ಮೇಲೆ ಪ್ರಕರಣ ದಾಖಲಿಸುವಂತೆ ತಾಲೂಕ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಮನವಿ.

ಜೇವರ್ಗಿ: ಸಚಿವ ಕೆ. ಎಸ್ ಈಶ್ವರಪ್ಪನವರು ರಾಷ್ಟ್ರ ದ್ವಜ ಕುರಿತು ಅವಹೇಳನ ಹೇಳಿಕೆ ನೀಡಿದ ಪ್ರಯುಕ್ತ ಸಚಿವರ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಜೇವರ್ಗಿ ಬ್ಲಾಕ್ ಕಾಂಗ್ರಸ್ ಹಾಗು ಯುವ ಘಟಕದ ವತಿಯಿಂದ ಸಲ್ಲಿಸಲಾಯಿತು.

ದಿ 9/2/2022ರಂದು ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಗೊಳಿಸುವ ಮಾತುಗಳನ್ನು ಆಡುತ್ತಾರೆ. ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ದೇಶದ ಕೆಂಪುಕೋಟೆ ಸೇರಿದಂತೆ ಎಲ್ಲೆಡೆ ರಾಷ್ಟ್ರಧ್ವಜದ ಬದಲಾಗಿ ಭಗವದ್ವಜ ಹರಡಲಿದೆ ಎಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದವರು ನೀಡಿರುವ ಕೆ.ಎಸ್ ಈಶ್ವರಪ್ಪನವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ತಾಲೂಕು ಯುವ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ವೈವಿಧ್ಯತೆಯಲ್ಲಿ ಐಕ್ಯತೆಯನ್ನು ಕಾಣುವ ಭಾರತ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬೌದ್ಧ ಹಲವಾರು ಜಾತಿ ಮತ ಪಂಥಗಳ ನೆಲೆಬೀಡಾದ ಭಾರತ ದೇಶ ತನ್ನದೇಯಾದ ರಾಷ್ಟ್ರಧ್ವಜವನ್ನು ಹೊಂದಿದೆ. ಅಂತಹ ಧ್ವಜವನ್ನು ತೆಗೆದು ಕೇಸರಿ ದ್ವಜವನ್ನು ಆರಿಸುತ್ತೇನೆ ಎಂದು ಹೇಳಿದ ಹೇಳಿಕೆಯನ್ನು ಈಶ್ವರಪ್ಪನವರು  ಭಾರತ ವಿಧಿವತ್ತವಾದ  ಸಂವಿಧಾನಕ್ಕೆ ಮತ್ತು  ಭಾರತ ದೇಶದ 135 ಕೋಟಿ ಭಾರತೀಯರು ಅವಮಾನಿಸಿದ್ದಾರೆ ಎಂದು ಹೇಳಿದರು.

ಈ ರೀತಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹೇಳಿಕೆಗಳನ್ನು ನೀಡುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ ಸಿರಿ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಮರೇಪ್ಪ ಸರಡಗಿ, ಬಸವರಾಜ ಲಾಡಿ, ರಾಜಶೇಖರ ಮುತ್ತುಕೊಡ, ವಿಶ್ವರಾಧ್ಯ, ವಾಜಿದ್ ಗಿರಣಿ, ರಿಯಾಜ್ ಪಟೇಲ್ ತಾಲೂಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರು, ಶಿವಕುಮಾರ್ ಕಲ್ಲಾ, ಮುಂತಾದವರು ಉಪಸ್ಥಿತರಿದ್ದರು…

 

ವರದಿ. ಬಸವರಾಜ್ ಹಿರೇಮಠ್, ಕಲಬುರಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend