ರೈತರ ಜಮೀನುಗಳಲ್ಲಿ ಪಂಪ್ಸೆಟ್ಗಳಿಗೆ ಅಳವಡಿಸಿದ್ದ ಕೇಬಲ್ ವೈರು ಕಳವು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ರೈತರ ಜಮೀನುಗಳಲ್ಲಿ ಪಂಪ್ಸೆಟ್ಗಳಿಗೆ ಅಳವಡಿಸಿದ್ದ ಕೇಬಲ್ ವೈರು ಕಳವು
ಬಣವಿಕಲ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ನೆಲ ಬೊಮ್ಮನಹಳ್ಳಿ ಹಾಗೂ ಬಣವಿಕಲ್ಲು ಗ್ರಾಮದ 25ಕ್ಕೂ ಹೆಚ್ಚು ರೈತರ ಜಮೀನುಗಳಲ್ಲಿ ಪಂಪ್ ಸೆಟ್ಟು ಗಳಿಗೆ ಅಳವಡಿಸಿದ್ದ ಕೇಬಲ್ ವೈರುಗಳನ್ನು ಹಾಗೂ ಹನಿ ನೀರಾವರಿಗೆ ಅಳವಡಿಸಿದ್ದ ಸ್ಪಿಂಕ್ಲರ್ ಮುಂಭಾಗದ 100ಕ್ಕೂ ಹೆಚ್ಚು ಹಿತ್ತಾಳೆ ಜೆಟ್ ಗಳನ್ನ ಯಾರೋ ಕಳ್ಳರು ಕದ್ದಿದ್ದಾರೆ. ಈ ಹಿಂದೆಯೂ ಕೂಡ ಈ ರೀತಿ ಕಳ್ಳರು ಕೇಬಲ್ ವೈರ್ ಗಳನ್ನು ಸ್ಪಿಂಕ್ಲರ್ ಜೆಟ್ ಗಳನ್ನ ಕದ್ದಿದ್ದರುಈ ವಿಷಯದ ಸಂಬಂಧ.. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಪ್ರಯೋಜನವಾಗಲಿ ಲ್ಲ.ಮತ್ತೆ ಕಳೆದುಹೋದ ಈ ಸಾಮಾನುಗಳನ್ನು ಕೊಂಡು ಕೊಳ್ಳಬೇಕೆಂದರೆ 5,ರಿಂದ 6, ಸಾವಿರ ರೂಪಾಯಿಗಳು ಬೇಕಾಗುತ್ತದೆ ಈ ರೀತಿ ಪದೇ ಪದೇ ಕಳವು ಮಾಡುವುದರಿಂದ ರೈತರು ಬೆಳೆ ಬೆಳೆಯುವುದು ತುಂಬಾ ಕಷ್ಟವಾಗುತ್ತದೆ. ಕೂಡಲೇ ಈ ಕೇಬಲ್ ಕಳ್ಳರನ್ನು ಪತ್ತೆಹಚ್ಚಿ ಕಾನೂನು ರೀತಿ ಶಿಕ್ಷಿಸಬೇಕು ಎಂದು ಸಂಬಂಧಪಟ್ಟ ಕಾನಹೊಸಹಳ್ಳಿ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಎಂದು ರೈತರಾದ. ಹನುಮಂತಪ್ಪ ನಾಗರಾಜ. ತಾಳ್ಕರಪ್ಪ. ಸುರೇಶ ಮಂಜುನಾಥ ನವೀನ. ಕೊಟ್ರೇಶ ಇನ್ನು ಮುಂತಾದ ರೈತರುಹೇಳಿದ್ದಾರೆ…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend