ಸರಳವಾಗಿ ಜರುಗಿದ ತಿಮ್ಮಪ್ಪ ಸ್ವಾಮಿಯ ಗರುಡಗಂಭ ಪ್ರತಿಷ್ಠಾಪನೆ ಕಾರ್ಯಕ್ರಮ.
ಜಗಳೂರು: ತಾಲ್ಲೂಕಿನ ದೊಣೆಹಳ್ಳಿಯ ಶ್ರೀ ತಿಮ್ಮಪ್ಪ ಸ್ವಾಮಿಯ ದೇಗುಲದಲ್ಲಿ ಗರುಡಗಂಭ ಪ್ರತಿಷ್ಠಾಪನೆ ಕಾರ್ಯಕ್ರಮವು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜರುಗಿತು.
ಗರುಡಗಂಭ ಸ್ಥಾಪನೆ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನವನ್ನು ತಳಿರು ತೋರಣಗಳಿಂದ ಶಂಗರಿಸಲಾಗಿತ್ತು.
ಬುಧವಾರ ಸಂಜೆ ಗಂಗಾಪೂಜೆ, ಕುಂಭಮೇಳದೊಂದಿಗೆ ಪ್ರಾರಂಭವಾಗಿ ಗಂಗಾ ಪ್ರವೇಶ, ಪುಣ್ಯಾಹ, ದೇವನಾಂದಿ, ಕಳಸ ಸ್ಥಾಪನೆ, ಧ್ವಜಸ್ಥಂಭ ಪೂಜೆ, ನವಗ್ರಹ ಆರಾಧನೆ ಸೇರಿದಂತೆ ಹೋಮ ಹವನಗಳು ಜರುಗಿದವು. ಗುರುವಾರ ಮುಂಜಾನೆ ಸುಪ್ರಭಾತ ಸೇವೆ, ಗರುಡಗಂಭ ಪ್ರತಿಷ್ಠಾಪನೆ, ಕುಂಭ ಅಭಿಷೇಕ, ಮಹಾ ಪೂಜೆ ಮಂಗಲಾರುತಿಯೊಂದಿಗೆ ಸಕಲ ಪೂಜೆಗಳು ಸಾಂಗವಾಗಿ ನೆರವೇರಿದವು.
ಕಣ್ವಕುಪ್ಪೆ ಗವಿಮಠದ ಷ.ಬ್ರ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಗರುಡಗಂಭಕ್ಕೆ ಆಶೀರ್ವಾದಿಸಿದರು. ಉತ್ತಂಗಿ ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದ ಕ್ರಿಯಾಮೂರ್ತಿ ಶ್ರೀ ಮ.ನಿ.ಪ್ರ. ನಿಜಗುಣ ಸೋಮಶಂಕರ ಸ್ವಾಮಿಗಳು, ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ದಾ.ಮ. ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಜನಪ್ರಿಯ ಶಾಸಕ ಎಸ್ ವಿ ರಾಮಚಂದ್ರಪ್ಪ, ಹಿರಿಯ ಪತ್ರಕರ್ತರಾದ ದೊಣೆಹಳ್ಳಿ ಗುರುಮೂರ್ತಿ, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಮಾಜಿ ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ, ಕಾಂಗ್ರೇಸ್ ಮುಖಂಡ ದೇವೇಂದ್ರಪ್ಪ, ಮಾಜಿ ತಾ.ಪಂ. ಸದಸ್ಯ ಬಸವರಾಜ್ ಸೇರಿದಂತೆ ಗ್ರಾಮದ ಮುಖಂಡರು, ದೈವಸ್ಥರು, ದಾನಿಗಳು ಮತ್ತು ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
